Author: admin

ಕೊಲಂಬೊ : ಶ್ರೀಲಂಕಾದ ಹಂಗಾಮಿ ಅಧ್ಯಕ್ಷರಾಗಿ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಜು 15,ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸುಪ್ರೀಂಕೋರ್ಟ್ನ ಮುಖ್ಯನ್ಯಾಯಮೂರ್ತಿ ಜಯಂತ ಜಯಸೂರ್ಯ ಪ್ರತಿಜ್ಞಾ ವಿಧಿ ಬೋಧಿಸಿದ್ದಾರೆ. ಇದೇ ವೇಳೆ ಮಾತನಾಡಿದ ರಾನಿಲ್ ಸಿಂಘೆ ಅವರು, ನಾನು ಶಾಂತಿಯುತವಾಗಿ ಪ್ರತಿಭಟಿಸುವವರ ಪರವಾಗಿದ್ದೇನೆ. ಪ್ರತಿಭಟನಕಾರರು ಹಾಗೂ ಗಲಭೆಕೋರರ ನಡುವೆ ವ್ಯತ್ಯಾಸವಿದೆ. ಹೀಗಾಗಿ ಹಿಂಸಾಚಾರ ಹಾಗೂ ವಿಧ್ವಂಸಕ ಕೃತ್ಯಗಳನ್ನು ಹತ್ತಿಕ್ಕುವ ಸಲುವಾಗಿ ಸಶಸ್ತ್ರ  ಪಡೆಗಳಿಗೆ ಪೂರ್ಣ ಅಧಿಕಾರ ನೀಡಲಾಗಿದೆ ಎಂದು ಹೇಳಿದ್ದಾರೆ. ಗೊಟಬಯ ರಾಜಪಕ್ಸೆ ಅವರು ಸಿಂಗಾಪುರಕ್ಕೆ ಪಲಾಯನಗೈದಿದ್ದು, ಅವರು ಸ್ಪೀಕರ್ ಮಹಿಂದಾ ಯಾಪಾ ಅಬೆವರ್ದನ ಅವರಿಗೆ ಇ–ಮೇಲ್ ಮುಖಾಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ಪತ್ರ ಕಳುಹಿಸಿದ್ದರು. ಇನ್ನು ಜುಲೈ 20 ರಂದು ಸಂಸತ್ತಿನಲ್ಲಿ ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದೆ ಎಂದು ಸ್ಪೀಕರ್ ಹೇಳಿದ್ದಾರೆ.

Read More

ಕುಂದಾಪುರ : ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಸಾವನ್ನಪ್ಪಿದ ಘಟನೆ ಬೈಂದೂರು ಸಮೀಪದ ಕಂಬದಕೋಣೆ ಸೇತುವೆ ಬಳಿ ಸಂಭವಿಸಿದೆ. ಮೃತ ವಿದ್ಯಾರ್ಥಿಗಳು ಮೂಲತಃ ಆಂಧ್ರಪ್ರದೇಶದವರಾಗಿದ್ದು, ಆದಿತ್ಯ ರೆಡ್ಡಿ (18), ಹಾಗೂ ತರುಣ್ ಕುಮಾರ್ ರೆಡ್ಡಿ (19) ಎಂದು ಗುರುತಿಸಲಾಗಿದೆ. ರವಿವಾರದಂದು ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ತೆರಳುತ್ತಿದ್ದ ವೇಳೆ ಈ ಅವಘಡ ನಡೆದಿದೆ. ಬೈಂದೂರು ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಬ್ರಹ್ಮಾವರ : ಆಟವಾಡಲೆಂದು ತೆರಳಿದ್ದ ಬಾಲಕ ನೀರಿನ ಹೊಂಡಕ್ಕೆ ಬಿದ್ದು ಮೃತಪಟ್ಟ ದುರ್ಘಟನೆಯೊಂದು ಬ್ರಹ್ಮಾವರದ ಬಳಿ ಜು. 13, ಬುಧವಾರದಂದು ನಡೆದಿದೆ. ಮಗು ಮನೆಯ ಪಕ್ಕ ಆಟವಾಡುತ್ತಿದ್ದಾಗ ಆಕಸ್ಮತ್ತಾಗಿ ನೀರಿನ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದೆ. ಲಾರೆನ್ ಲೂವಿಸ್ ಮೃತಪಟ್ಟ ಬಾಲಕ. ಈತ ನೋರ್ಮನ್ ಮತ್ತು ಸಿಲ್ವಿಯ ಎಂಬವರ 5 ವರ್ಷದ ಪುತ್ರ ಎಂದು ಗುರುತಿಸಲಾಗಿದೆ. ಬ್ರಹ್ಮಾವರ ತಾಲೂಕು ಉಪ್ಪೂರು ತೆಂಕಬೆಟ್ಟು ಬಳಿ ಈ ಘಟನೆ ನಡೆದಿದೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಹೆಬ್ರಿ: ಕಳೆದ ಕೆಲವು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಆಗುಂಬೆ ಘಾಟಿಯ ಮೂರು ಮತ್ತು ನಾಲ್ಕನೇ ಸುತ್ತಿನ ಮಧ್ಯದಲ್ಲಿ ಭೂಕುಸಿತವಾಗಿದೆ. ಭಾರೀ ಪ್ರಮಾಣದ ಮಣ್ಣು ಮತ್ತು ಮರ ರಸ್ತೆಗೆ ಬಿದ್ದಿದೆ, ಇದರಿಂದಾಗಿ ಸಂಚಾರ ಸ್ಥಗಿತವಾಗಿದೆ. ತಡರಾತ್ರಿ ಭೂಕುಸಿತ ಸಂಭವಿಸಿದ್ದು, ರಾತ್ರಿಯಿಂದಲೇ ವಾಹನ ಸಂಚಾರ ಬಂದ್ ಆಗಿದ್ದು, ಶಿವಮೊಗ್ಗ ಆಗುಂಬೆಯಿಂದ ಉಡುಪಿಗೆ ಬರುವ ವಾಹನಗಳು ಸಿದ್ಧಾಪುರ ಮೂಲಕ ಸಂಚರಿಸುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದೆ.

Read More

ಕೊಲಂಬೋ: ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ತಾರಕಕ್ಕೇರಿದ್ದು, ಅಧ್ಯಕ್ಷ ಗೋಟಾಬಯ ವಿರುದ್ಧದ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆಯೇ ಲಂಕಾ ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಅವರು ರಾಜೀನಾಮೆ ನೀಡಿದ್ದಾರೆ. ಟ್ವೀಟ್ ಮೂಲಕ ರನಿಲ್ ವಿಕ್ರಮ ಸಿಂಘೆ ರಾಜೀನಾಮೆಯನ್ನು ಧೃಡ ಪಡಿಸಿದ್ದಾರೆ. ಜನರ ಹಿತದೃಷ್ಟಿಯಿಂದ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ. ರಾಜಕೀಯ ಪರಿಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಸರ್ವಪಕ್ಷ ಸರ್ಕಾರಕ್ಕೆ ದಾರಿ ಮಾಡಿಕೊಡುವ ನಿಟ್ಟಿನಲ್ಲಿ ತಾವು ರಾಜೀನಾಮೆ ನೀಡುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.

Read More

ಉತ್ತರಾಖಂಡ : ಉತ್ತರಾಖಂಡ್ ರಾಜ್ಯದ ನೈನಿತಾಲ್ ಜಿಲ್ಲೆಯ ರಾಮನಗರ ಎಂಬಲ್ಲಿ ಕಾರೊಂದು ನದಿಗೆ ಬಿದ್ದ ಪರಿಣಾಮ ಒಂಬತ್ತು ಮಂದಿ ಮೃತಪಟ್ಟಿರುವ  ಘಟನೆ ನಡೆದಿದೆ. ಈ ಘಟನೆಯಲ್ಲಿ ಸಾವನ್ನಪ್ಪಿದವರೆಲ್ಲರೂ ಪಂಜಾಬ್ ಮೂಲದವರು ಎನ್ನಲಾಗಿದೆ ಕಾರಿನಲ್ಲಿ ಒಟ್ಟು 11 ಜನರಿದ್ದು,  ಇಬ್ಬರನ್ನು ರಕ್ಷಿಸಲಾಗಿದ್ದು, ಉಳಿದ ಒಂಬತ್ತು ಮಂದಿ ಅಸುನೀಗಿದ್ದಾರೆ ಎಂದು ಸ್ಥಳೀಯಾಡಳಿತ ದೃಢಪಡಿಸಿದೆ. ಘಟನಾ ಸ್ಥಳಕ್ಕೆ ಪೊಲೀಸರು, ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ಡಿಆರ್ಎಫ್), ಮತ್ತು ಅಗ್ನಿಶಾಮಕ ತಂಡವು ಧಾವಿಸಿದ್ದು, ಕಾರ್ಯಾಚರಣೆ ನಡೆಯುತ್ತಿದೆ.

Read More

ಟೆಕ್ಸಾಸ್ :  ನೈರುತ್ಯ ಸ್ಯಾನ್ ಆಂಟೋನಿಯೊದ ದೂರದ ಹಿಂಭಾಗದ ರಸ್ತೆಯಲ್ಲಿ ಶಂಕಿತ ವಲಸಿಗರನ್ನ ಒಳಗೊಂಡ ಟ್ರೇಲರ್ ಟ್ರಕ್  ಪತ್ತೆಯಾಗಿದ್ದು, ಅದರಲ್ಲಿ 46 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಇತರ 16 ಮಂದಿಯನ್ನ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜನರು ಹೇಗೆ ಮೃತಪಟ್ಟಿದ್ದಾರೆ ಎಂದು ಇನ್ನೂ ಸ್ವಷ್ಟವಾಗಿಲ್ಲ.ಈ ಪ್ರದೇಶದಲ್ಲಿ ಟ್ರೇಲರ್ ಟ್ರಕ್ ಪತ್ತೆಯಾಗುವುದಕ್ಕೂ ಕೆಲ ಹೊತ್ತಿನ ಮೊದಲು ಚಾಲಕ ಅದನ್ನು ಅಲ್ಲಿ ಬಿಟ್ಟುಹೋಗಿರಬಹುದು ಎಂಬ ಶಂಕೆಯ ಮೇರೆಗೆ ಆತನಿಗಾಗಿ ಪೋಲಿಸರು ಹುಡುಕಾಟ ಆರಂಭಿಸಲಾಗಿದೆ ಎಂದು ವರದಿಯಾಗಿದೆ.

Read More

ತಿರುವನಂತಪುರ :  ಖಳನಾಯಕ ಪಾತ್ರದ ಮೂಲಕ ಹೆಸರುವಾಸಿಯಾದ ಮಲಯಾಳಂ ನಟ ಎನ್ ಡಿ ಪ್ರಸಾದ್ (43) ಕೊಚ್ಚಿ ಬಳಿಯ ಕಲಮಸ್ಸೇರಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಜೂ 25,ಶನಿವಾರ ಸಂಜೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೇರಳ ಪೊಲೀಸರು ತಿಳಿಸಿದ್ದಾರೆ. ಪ್ರಸಾದ್ ಪತ್ನಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಮೃತರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಪ್ರಸಾದ್ ಅವರು ಹಲವಾರು ಚಲನಚಿತ್ರದಲ್ಲಿ ನಟಿಸಿದ್ದಾರೆ. ಆದರೆ ಆ್ಯಕ್ಷನ್‌ ಹೀರೋ ಬಿಜು ಚಿತ್ರದಲ್ಲಿನ ಅವರ ಅಭಿನಯ ಅವರಿಗೆ ಪ್ರಸಿದ್ಧಿಯನ್ನು ತಂದುಕೊಟ್ಟಿತ್ತು ಡ್ರಗ್ಸ್ ಪ್ರಕರಣ ಸೇರಿದಂತೆ ಅವರ ಮೇಲೆ ಹಲವು ಪೊಲೀಸ್ ಪ್ರಕರಣಗಳು ದಾಖಲಾಗಿದ್ದವು.

Read More

ಮಂಗಳೂರು : ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಗೆ ಬೆಂಕಿ ತಗುಲಿ ಶೋರೂಮ್ ಸಂಪೂರ್ಣವಾಗಿ ಸುಟ್ಟುಹೋದ ಘಟನೆ ಪಡೀಲ್ ಅಳಪೆ ಸಮೀಪದ ನಾಗುರಿ ಬಳಿ ಜೂ.23, ಶುಕ್ರವಾರದಂದು ನಡೆದಿದೆ. ಈ ಘಟನೆ ಇಂದು ಬೆಳಗ್ಗೆ 8 ಗಂಟೆಗೆ ಶೋರೂಮ್ನಲ್ಲಿ ನಡೆದಿದೆ. ಅಗ್ನಿ ಅವಘಡದಿಂದ ಹಲವು ಸ್ಕೂಟರ್ಗಳು ಬೆಂಕಿಗೆ ಆಹುತಿಯಾಗಿದ್ದು, ಲಕ್ಷಾಂತರ ಮೌಲ್ಯದ ಸ್ಕೂಟರ್ ಗಳು  ಬೆಂಕಿಗಾಹುತಿಯಾಗಿದೆ ಎಂದು ಅಂದಾಜಿಸಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ವರ್ಗ ಬೆಂಕಿ ನಂದಿಸುತ್ತಿದ್ದಾರೆ. ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

Read More

ಉಳ್ಳಾಲ : ನರಿಂಗಾನ ಗ್ರಾಮದ ತೌಡುಗೋಳಿ ಕ್ರಾಸ್ನಲ್ಲಿರುವ ಗ್ರಾಮ ಪಂಚಾಯತ್ ಕಚೇರಿ ಬಳಿಯ ಹತ್ತಿ ದಾಸ್ತಾನು ಗೋದಾಮು ಮತ್ತು ಹತ್ತಿ ಉತ್ಪನ್ನಗಳ ತಯಾರಿಕಾ ಘಟಕಕ್ಕೆ ಆಕಸ್ಮಿಕ ಬೆಂಕಿ ತಗುಲಿ ಘಟಕ ಭಾಗಶಃ ಸುಟ್ಟು ಹೋಗಿದೆ. ಈ ಘಟನೆ ಜೂ.22, ಮಂಗಳವಾರ ಸಂಜೆ ಸಂಭವಿದ್ದು, 8 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಉಳ್ಳಾಲದ ಉದ್ಯಮಿ ನೌಮಾನ್ ಮಾಲಿಕತ್ವದ ಕೋಡಿ ಎಂಟರ್ ಪ್ರೈಸಸ್ ಹತ್ತಿ ದಾಸ್ತಾನು ಹಾಗೂ ತಯಾರಿಕಾ ಕೇಂದ್ರ ಇದಾಗಿದೆ. ಬೆಂಕಿ ತಗುಲಿದ ತತ್ಕ್ಷಣ ಸ್ಥಳೀಯರು ಆಗಮಿಸಿ ಬೆಂಕಿ ನಂದಿಸುವ ಪ್ರಯತ್ನಪಟ್ಟರು. ಮಂಗಳೂರಿನ ಪಾಂಡೇಶ್ವರ ಅಗ್ನಿಶಾಮಕ ಆಗಮಿಸಿದಾಗ  ಗೋದಾಮು, ಯಂತ್ರಗಳು ಭಾಗಶಃ ಬೆಂಕಿಗೆ ಆಹುತಿಯಾಗಿದ್ದವು. ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More