Subscribe to Updates
Get the latest creative news from FooBar about art, design and business.
Author: admin
ಮಂಗಳೂರು, ಅ. 5: ಎಕ್ಕೂರಿನ ಇಂಡಿಯಾನಾ ಕನ್ವೆನ್ಯನ್ ಸೆಂಟರ್ ನ ಸಭಾಂಗಣದಲ್ಲಿ ಅಂತಾ ರಾಷ್ಟ್ರೀಯ ಲಯನ್ಸ್ ಜಿಲ್ಲೆ 317 ಡಿ ಇದರ 2024-25 ಲಯನ್ಸ್ ಜಿಲ್ಲಾ ಪದಗ್ರಹಣ ಸಮಾರಂಭ ‘ಕಾವೇರಿ’ ಕಾರ್ಯಕ್ರಮ ಶನಿವಾರ ಜರಗಿತು. ಕಾರ್ಯಕ್ರಮವನ್ನು ಲಯನ್ಸ್ ಜಿ. ಮಂಗಳೂರು 317 ಡಿ ಇದರ ಗವರ್ನರ್ ಬಿ.ಎಂ. ಭಾರತಿ ಅವರು ಉದ್ಘಾಟಿಸಿದರು. ನಂತರ ಮಾತನಾಡಿ ಸೇವೆಯಲ್ಲಿ ತೊಡಗಿಸುವುದು ಶ್ರೇಷ್ಠತೆಯಾಗಿದ್ದು, ಇದರಿಂದ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು. ನಂತರ ಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್ ಫೌಂಡೇಶನ್ ಇದರ ಮಾಜಿ ಟ್ರಸ್ಟಿ ಹಾಗೂ ಅಂತಾರಾಷ್ಟ್ರೀಯ ಲಯನ್ಸ್ ಇದರ ಮಾಜಿ ನಿರ್ದೇಶಕಿ ಅರುಣಾ ಅಬೆಲ್ ಒಸ್ವಾಲ್ ಮಾತನಾಡಿ ನೂತನ ಗವರ್ನರ್ ಬಿ.ಎಂ. ಭಾರತಿ ಅವರು ಓರ್ವ ಮಹಿಳೆಯಾಗಿ ಮಹತ್ವದ ಜವಾಬ್ದಾರಿ ನಿಭಾಯಿವುದು ಸುಲಭದ ಕೆಲಸವಲ್ಲ. ಆದರೆ ಎಲ್ಲರ ಸಹಕಾರದಿಂದ ಸಾಧನೆ ಮಾಡಲು ಸಾಧ್ಯವಿದೆ ಎಂದರು. ಅಂತಾರಾಷ್ಟ್ರೀಯ ಲಯನ್ಸ್ ಇದರ ಮಾಜಿ ನಿರ್ದೇಶಕ ಮತ್ತು ಪ್ರಸ್ತುತ ಎಲ್‌ಸಿಐಎಫ್ನ ಕ್ಷೇತ್ರ ನಾಯಕ ವಂಶಿಧರ್ ಬಾಬು, ಮಲ್ಟಿಪಲ್ 317 ಇದರ ಅಧ್ಯಕ್ಷ…
ಮಧ್ಯಪ್ರದೇಶ , ಆ.05 : ದೇವಸ್ಥಾನದ ಗೋಡೆ ಕುಸಿದು 9 ಮಕ್ಕಳು ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಸಾಗರ ಜಿಲ್ಲೆಯಲ್ಲಿ ನಡೆದಿದೆ. ಶಹಪುರ್ ನಗರದ ಹರ್ದುಲ್ ಬಾಬಾ ಮಂದಿರದಲ್ಲಿ ಧಾರ್ಮಿಕ ಕಾರ್ಯಕ್ರಮದ ವೇಳೆ ಗೋಡೆ ಕುಸಿದ ಪರಿಣಾಮ 9 ಮಕ್ಕಳು ಮೃತಪಟ್ಟಿದ್ದು, ಹಲವು ಮಕ್ಕಳು ಗಾಯಗೊಂಡಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಉನ್ನತ ಪೊಲೀಸ್ ಅಧಿಕಾರಿಗಳು ದೌಡಾಯಿಸಿದ್ದಾರೆ. ಸ್ಥಳೀಯರೊಂದಿಗೆ ಪೊಲೀಸರು ರಕ್ಷಣಾ ಕಾರ್ಯಾಚರಣೆಯನ್ನೂ ನಡೆಸಿ ಕೆಲ ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಗಾಯಾಗೊಂಡ ಮಕ್ಕಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತಪಟ್ಟ ಮಕ್ಕಳು 10-15 ವರ್ಷದೊಳಗಿನವರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಂಗಳೂರು,ಜು.04 :ದಕ್ಷಿಣ ಕನ್ನಡ ಜಿಲ್ಲೆಯಲ್ಲಿನಿರೀಕ್ಷೆಗೂ ಮೀರಿ ಸುರಿದ ಭಾರೀ ಮಳೆಯಿಂದಾಗಿ ಮಂಗಳೂರು ನಗರ ದಕ್ಷಿಣ ಕ್ಷೇತ್ರವೂ ಸೇರಿದಂತೆ ಅಪಾರ ಪ್ರಮಾಣದ ಹಾನಿಯಾಗಿದ್ದು ಜಿಲ್ಲೆಯ ಜನತೆ ಮತ್ತೆ ಬದುಕು ಕಟ್ಟಿಕೊಳ್ಳಲು ಅನುವಾಗುವಂತೆ 300 ಕೋಟಿ ರೂಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಸರ್ಕಾರವನ್ನು ಶಾಸಕ ವೇದವ್ಯಾಸ್ ಕಾಮತ್ ಅವರು ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನಿರಂತರ ಮಳೆಯಿಂದಾಗಿ ಹಲವಾರು ಮನೆಗಳು ಕುಸಿದಿದ್ದು, ಮನೆಗಳ ಮೇಲೆ ಬೃಹತ್ ಮರ ಉರುಳಿದ್ದು, ಮನೆಯೊಳಗೆ ಪ್ರವಾಹದ ನೀರು ನುಗ್ಗಿದ್ದು, ಗುಡ್ಡ ಕುಸಿತ, ರಸ್ತೆ, ಚರಂಡಿ, ತಡೆಗೋಡೆ, ರಾಜ ಕಾಲುವೆಗಳಿಗೆ ಹಾನಿ, ಹೀಗೆ ಹತ್ತು ಹಲವು ರೀತಿಯಲ್ಲಿ ಜನಸಾಮಾನ್ಯರ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ಹಾನಿಗೊಳಗಾಗಿ ಮೇಲ್ನೋಟಕ್ಕೆ ಸುಮಾರು 300 ಕೋಟಿಗೂ ಅಧಿಕ ನಷ್ಟವಾಗಿದ್ದು ಕಂಡು ಬರುತ್ತಿದೆ ಎಂದು ಹೇಳಿದರು. ರಾಜ್ಯದ ಮುಖ್ಯಮಂತ್ರಿಗಳು ನಿನ್ನೆಯಷ್ಟೇ, ಇಂತಹ ದುರಂತದಲ್ಲಿ ಪೂರ್ಣ ಮನೆ ಹಾನಿಯಾಗಿದ್ದರೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಯಮದ ಪ್ರಕಾರ 1.20 ಲಕ್ಷ ಮಾತ್ರ,…
ಬೆಳ್ತಂಗಡಿ, ಆ. 04 : ಮನೆಯ ಬಾವಿಗೆ ಜಾರಿ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಬೆಳ್ತಂಗಡಿಯಲ್ಲಿ ಶುಕ್ರವಾರ ನಡೆದಿದೆ.ಮೃತರನ್ನು ಸುಮಾಲಿನಿ ಜೈನ್ (63) ಎಂದು ಗುರುತಿಸಲಾಗಿದೆ. ಬೆಳ್ತಂಗಡಿ ನಗರದ ಗುರುದೇವ ಕಾಲೇಜ್ ರಸ್ತೆಯಲ್ಲಿರುವ ಸೀಡ್ ಫಾರ್ಮ್ ಬಳಿ ಇರುವ ಮನೆಯ ಬಾವಿಗೆ ಮಹಿಳೆ ಬಿದ್ದಿದ್ದರು,ಬಾವಿಗೆ ಬಿದ್ದಿರುವುದನ್ನು ಅವರ ಗಂಡ ಗಮನಿಸಿದ್ದು, ತಕ್ಷಣ ಆಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಆಂಬುಲೆನ್ಸ್ ಜಲೀಲ್ ಹಾಗೂ ಅಲ್ಫಾಸ್ ಲಾಯಿಲ ಸೇರಿ ಬಾವಿಗೆ ಹಗ್ಗ ಹಾಕಿ ಮಹಿಳೆಯನ್ನು ಮೇಲಕ್ಕೆತ್ತಿ ಅವರನ್ನು ಬೆಳ್ತಂಗಡಿ ಆಸ್ಪತ್ರೆಗೆ ಸಾಗಿಸಿದರೂ ಆ ವೇಳೆಗೆ ಅವರು ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು, ಆ.2 : ಅಂತಾರಾಷ್ಟ್ರೀಯ ಲಯನ್ಸ್ ಜಿಲ್ಲೆ 317-ಡಿ’ ಯ 2024-25ರ ಸಾಲಿನ ಸಂಪುಟ ಪದಗ್ರಹಣ ಸಮಾರಂಭ ‘ಕಾವೇರಿ’ ಆಗಸ್ಟ್.3ರಂದು ಸಂಜೆ 3 ಗಂಟೆಗೆ ಎಕ್ಕೂರಿನ ಇಂಡಿಯಾನಾ ಕನ್ವೆನ್ಯನ್ ಸೆಂಟರ್‌ನಲ್ಲಿ ನಡೆಯಲಿದೆ ಎಂದು ಲಯನ್ಸ್ ಜಿಲ್ಲೆ ಮಂಗಳೂರು 317-ಡಿಯ ಗವರ್ನರ್ ಬಿ.ಎಂ.ಭಾರತಿ ತಿಳಿಸಿದರು. ಗುರುವಾರ ಪತ್ರಿಕಾಭವನ ದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅಂತಾರಾಷ್ಟ್ರೀಯ ಎಲ್.ಸಿ.ಐ.ಎಫ್.ನ ಟ್ರಸ್ಟಿ ಅರುಣಾ ಅಬೆ ಒಸ್ವಾಲ್ ಭಾಗವಹಿಸಲಿದ್ದಾರೆ. ಎಲ್.ಸಿ.ಐ.ಎಫ್. ಕ್ಷೇತ್ರ ನಾಯಕ ವಂಶಿದ್ ಬಾಬು ಕೆ., ಅಂತಾರಾಷ್ಟ್ರೀಯ ಮಾಜಿ ನಿರ್ದೇಶಕ ವಿ.ವಿ. ಕೃಷ್ಣ ರೆಡ್ಡಿ, ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಡಾ|ಎನ್. ಕೃಷ್ಣ ಗೌಡ, ನಿಕಟಪೂರ್ವ ರಾಜ್ಯಪಾಲ ಡಾ| ಮೆಲ್ವಿನ್ ಡಿ’ಸೋಜಾ, ಪ್ರಥಮ ಉಪಗವರ್ನರ್ಕುಡ್ಲಿ ಅರವಿಂದ್ ಶೆಣೈ, ದ್ವಿತೀಯ ಉಪಗವರ್ನರ್ ಎಚ್.ಎಂ. ತಾರಾನಾಥ್ ಭಾಗವಹಿಸಲಿದ್ದಾರೆ ಎಂದು ಹೇಳಿದರು. ಸೇವಾ ಕಾರ್ಯಕ್ರಮದ ಅಂಗವಾಗಿ ಮಂಗಳೂರಿನ ವೆಬ್ಲಾಕ್‌ನಲ್ಲಿ ಹೊರರೋಗಿಗಳ ಸಂಬಂಧಿಕರಿಗೆ ಪ್ರತಿದಿನ ಉಚಿತ ಊಟದ ವ್ಯವಸ್ಥೆ ನೀಡುತ್ತಿರುವ ಎಂ-ಫ್ರೆಂಡ್ಸ್ ಸಂಸ್ಥೆಗೆ 25 ಲಕ್ಷ ರೂ. ಮೌಲ್ಯದ…
ಬೆಂಗಳೂರು,ಆ 01 : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ದರ್ಶನ್ ಮತ್ತು ಗ್ಯಾಂಗ್ನ ನ್ಯಾಯಾಂಗ ಬಂಧನ ಅವಧಿಯನ್ನು ಕೋರ್ಟ್ ಆ. 14 ರವರೆಗೆ ವಿಸ್ತರಿಸಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಕರಣದ ಆರೋಪಿಗಳಾದ ದರ್ಶನ್, ಪವಿತ್ರಾಗೌಡ ಸೇರಿದಂತೆ ಎಲ್ಲಾ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ 24ನೇ ಎಸಿಎಂಎಂ ಕೋರ್ಟ್‌ಗೆ ಹಾಜರುಪಡಿಸಲಾಯಿತು. ಪರಪ್ಪನ ಅಗ್ರಹಾರ ಜೈಲಿನಿಂದ 13 ಮಂದಿ ಆರೋಪಿಗಳು, ತುಮಕೂರು ಜೈಲಿನಿಂದ 4 ಆರೋಪಿಗಳನ್ನ ಹಾಜರು ಪಡಿಸಲಾಗಿತ್ತು.ಕೊಲೆ ಆರೋಪಿ ನಟ ದರ್ಶನ್ ಸೇರಿ ಒಟ್ಟು 17 ಮಂದಿಗೆ ಮತ್ತೆ 14 ದಿನಗಳ ಕಾಲ ಆಗಸ್ಟ್ 14 ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ ಕೋರ್ಟ್ ಆದೇಶಿಸಿದೆ.
ಮಂಗಳೂರು, ಜು.31: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇದರ ಸಹಯೋಗದೊಂದಿಗೆ ತುಳು ನಾಟಕ ಕಲಾವಿದರ ಒಕ್ಕೂಟದ 21ನೇ ವಾರ್ಷಿಕ ಸಂಭ್ರಮ ಆ. 2,ಮಂಗಳವಾರ ಸಂಜೆ 5.30ಕ್ಕೆ ನಗರದ ಕುದುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ ಎಂದು ಒಕ್ಕೂಟದ ಅಧ್ಯಕ್ಷ ಕಿಶೋರ್ ಡಿ. ಶೆಟ್ಟಿ ಹೇಳಿದರು. ಪತ್ರಿಕಾಭವನ ದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ತೌಳವ ಪ್ರಶಸ್ತಿ ಪ್ರಧಾನ. ಹಿರಿಯ ಕಲಾವಿದರಿಗೆ ಸನ್ಮಾನ, ಕೀರ್ತಿಶೇಷ ಕಲಾವಿದರ ನೆಂಪು ಕಾರ್ಯಕ್ರಮ, ಅಶಕ್ತ ಕಲಾವಿದರಿಗೆ ಗೌರವಧನ ವಿತರಣೆ ನಡೆಯಲಿದೆ. ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಎಂ. ಮೋಹನ್ ಆಳ್ವ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಅಧ್ಯಕ್ಷತೆ ವಹಿಸುವರು. ಮೇಯರ್ ಸುಧೀರ್ ಶೆಟ್ಟಿ ತೌಳವ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಹಿರಿಯನಾಟಕಕಾರ ಡಾ| ಸಂಜೀವ ದಂಡಕೇರಿ, ಉದ್ಯಮಿಗಳಾದ ಸಂತೋಷ್ ಪೂಂಜಾ, ರಾಜೇಶ್ ಶೆಟ್ಟಿ, ಪದವು ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಕುಶಾಲ್ ಕುಮಾರ್, ನೀರುಮಾರ್ಗ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ…
ಮಂಗಳೂರು, ಜು.30 : ನಗರದ ನಂತೂರು ಪದವು ಎಂಬಲ್ಲಿ ಟ್ಯಾಂಕರ್ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟ್ ಸವಾರ ಸಾವನ್ನಪ್ಪಿದ ಘಟನೆ ಮಂಗಳವಾರ ನಡೆದಿದೆ. ಶಿವಾನಂದ ಮೃತಪಟ್ಟ ಸ್ಕೂಟರ್ ಸವಾರ. ಶಿವಾನಂದ ಅವರು ಕೆಪಿಟಿಯಿಂದ ನಂತೂರು ಪದವು ರಸ್ತೆಯಾಗಿ ಸ್ಕೂಟರ್ ನಲ್ಲಿ ತೆರಳುತ್ತಿದ್ದ ವೇಳೆ ವಿರುದ್ಧ ದಿಕ್ಕಿನಲ್ಲಿ ಬಂದ ಟ್ಯಾಂಕರ್ ಢಿಕ್ಕಿ ಹೊಡೆದಿದೆ. ಇದರಿಂದ ಸ್ಕೂಟರ್ ಸವಾರಿ ಮಾಡುತ್ತಿದ್ದ ಶಿವಾನಂದರ ತಲೆಯ ಮೇಲೆ ಟ್ಯಾಂಕರ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಮಂಗಳೂರು, ಜು.30 : ಮಂಗಳೂರು ಪತ್ರಿಕಾ ಭವನದಲ್ಲಿ ಪ್ರೆಸ್‌ಕ್ಲಬ್ ಗೌರವ ಅತಿಥಿ ಪುರಸ್ಕಾರ ಕಾರ್ಯಕ್ರಮ ಮಂಗಳವಾರ ನಡೆಯಿತು.ಹಿರಿಯ ಪತ್ರಕರ್ತ ಪರಮಾನಂದ ಸಾಲ್ಯಾನ್ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರೆಸ್‌ಕ್ಲಬ್ ಗೌರವ ಅತಿಥಿ ಪುರಸ್ಕಾರ ಸ್ವೀಕರಿಸಿದ ಭಾರತೀಯ ವಾಯು ಸೇನೆಯ ನಿವೃತ್ತ ಗ್ರೂಪ್ ಕ್ಯಾಪ್ಟನ್ ಸುಧೀರ್ ಜಿ. ಅವರು ಮಾತನಾಡಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವುದು ಒಂದು ವಿಶಿಷ್ಟ ಅನುಭವ. ಸೇನೆಗೆ ಸೇರ ಬಯಸುವ ಯುವಕರು ದೇಶಪ್ರೇಮ, ಸೇವಾ ಮನೋಭಾವನೆ ಹಾಗೂ ದೃಢವಾದ ಮಾನಸಿಕ ಸಿದ್ಧತೆ ಹೊಂದಿರುವುದು ಅಗತ್ಯ ಎಂದು ಭಾರತೀಯ ವಾಯು ಸೇನೆಯ ನಿವೃತ್ತ ಗ್ರೂಪ್ ಕ್ಯಾಪ್ಟನ್ ಸುಧೀರ್ ಜಿ. ಅಮೀನ್ ಹೇಳಿದರು. ಭಾರತೀಯ ವಾಯು ಸೇನೆಯಲ್ಲಿ 25 ವರ್ಷಗಳ ಕಾಲ ಸೇವೆ ಸಲ್ಲಿಸುವ ಅವಕಾಶ ಲಭಿಸಿದ್ದು, ಅದರ ಅನುಭವ ವಿಭಿನ್ನ . ಪದವಿ ಮುಗಿದು ಪರೀಕ್ಷೆ ಫಲಿತಾಂಶ ಬರುವ ಮೊದಲೇ ವಾಯು ಸೇನೆಗೆ ಆಯ್ಕೆಯಾಗಿದ್ದೆ ಎಂದರು. ವಾಯು ಸೇನೆಯ ತರಬೇತಿಯ ನಂತರ ಗೌಹಾಟಿಯಲ್ಲಿ ವೃತ್ತಿ ಜೀವನ ಆರಂಭಗೊಂಡಿತು. ವಿವಿಧ ಕರ್ತವ್ಯಗಳನ್ನು ನಿರ್ವಹಿಸಿ…
ಮಂಗಳೂರು,ಜು.28 : ನಗರದ ಕುಲಶೇಖರ ಕೋಟಿಮುರ ಸಿಲ್ವರ್ ಗೇಟ್ ನ ಗ್ರಂಥಾಲಯದ ಬಳಿ ಇರುವ ನಾಗೇಶ್ ಎಂಬುವವರ ಮನೆ ಕುಸಿದು ಬಿದ್ದಿದ್ದು ಅಪಾರ ಪ್ರಮಾಣದ ಹಾನಿಯಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಶಾಸಕ ವೇದವ್ಯಾಸ ಕಾಮತ್ ರವರು ಕುಟುಂಬಸ್ಥರಿಗೆ ಧೈರ್ಯ ತುಂಬಿ ಪರಿಹಾರ ಕಾರ್ಯದ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕರೆ ಮಾಡಿ ಸೂಚಿಸಿದರು. ಸ್ಥಳದಲ್ಲಿ ಅಜಯ್ ಕುಲಶೇಖರ, ನಿತಿನ್ ಕುಮಾರ್, ಅನಿಲ್, ಹರಿಣಿ ಪ್ರೇಮ್, ಪ್ರಶಾಂತ್, ಸುಶಾಂತ್ ಮೊದಲಾದವರು ಉಪಸ್ಥಿತರಿದ್ದರು.












