Subscribe to Updates
Get the latest creative news from FooBar about art, design and business.
Author: admin
ಚಂಡೀಗಢ, ಜ. 28 : ಕೇಂದ್ರದ ಮಾಜಿ ಸಚಿವ ಮತ್ತು ಚಂಡೀಗಢದ ಮಾಜಿ ಸಂಸದ ಹರ್ಮೋಹನ್ ಧವನ್ ದೀರ್ಘಕಾಲದ ಅನಾರೋಗ್ಯದದಿಂದ ಬಳಲುತ್ತಿದ್ದ ಅವರು ಮೊಹಾಲಿಯ ಖಾಸಗಿ ಆಸ್ಪತ್ರೆಯಲ್ಲಿ ಜ. 27 ರಂದು ನಿಧನರಾಗಿದ್ದಾರೆ. 1977 ರಲ್ಲಿ ರಾಜಕೀಯಕ್ಕೆ ಪ್ರವೇಶಿಸಿ ಧವನ್ ಅವರು ದಿವಂಗತ ಪ್ರಧಾನಿ ಚಂದ್ರಶೇಖರ್ ಸರ್ಕಾರದಲ್ಲಿ ಕೇಂದ್ರ ರಾಜ್ಯ ಸಚಿವರಾಗಿದ್ದರು. 1989 ರಲ್ಲಿ ಚಂಡೀಗಢ ಕ್ಷೇತ್ರದಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾದರು ಮತ್ತು ಚಂದ್ರಶೇಖರ್ ಅವರ ಸರ್ಕಾರದಲ್ಲಿ ನಾಗರಿಕ ವಿಮಾನಯಾನ ಸಚಿವರಾಗುವ ಮೂಲಕವೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದರು.
ಮಂಗಳೂರು, ಜ 27 : ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಅಧಿಕೃತ ಐಸ್ಕ್ರೀಂ ಪಾಲುದಾರನಾಗಿ ಕರಾವಳಿಯ ಹಾಂಗ್ಯೊ ಐಸ್ಕ್ರೀಂ ಸೇರ್ಪಡೆಗೊಂಡಿದೆ. ಐಪಿಎಲ್ 2024ನೇ ಆವೃತ್ತಿ ಪ್ರಾರಂಭವಾಗುತ್ತಿದ್ದು, ಈ ಭಾರಿ ರಾಯಲ್ ಚಾಲೆಂಜರ್ಸ್ (ಆರ್ ಸಿಬಿ) ತಂಡಕ್ಕೆ ಹಾಂಗ್ಯೊ ಐಸ್ಕ್ರೀಂ ಸಾಥ್ ನೀಡಲಿದೆ. ಈ ಕುರಿತು ಬೆಂಗಳೂರಿನಲ್ಲಿ ಎರಡೂ ಸಂಸ್ಥೆಗಳ ಮುಖ್ಯಸ್ಥರು ಒಡಂಬಡಿಕೆಗೆ ಸಹಿ ಹಾಕಿದ್ದು, ಈ ಮೂಲಕ ಕರಾವಳಿಯ ಹಾಂಗ್ಯೊ ಐಸ್ಕ್ರೀಂ ಅಧಿಕೃತವಾಗಿ ಪಾಲುದಾರ ಸಂಸ್ಥೆಯಾಗಿದೆ. ಕ್ರಿಕೆಟ್ ಸ್ಫೋಟಕ ಆಟದೊಂದಿಗೆ ಹಾಂಗ್ಯೋ ಐಸ್ಕ್ರೀಂನ ಆಹ್ಲಾದಕರ ಐಸ್ಕ್ರೀಂಗಳು ಸಂಭ್ರಮದ ವಾತಾವರಣಕ್ಕೆ ಕಾರಣವಾಗುತ್ತದೆ ಎಂದು ಹಾಂಗ್ಯೋ ಐಸ್ಕ್ರೀಮ್ಸ್ ಕಂಪೆನಿ ಪ್ರಕಟನೆಯಲ್ಲಿ ತಿಳಿಸಿದೆ.
ಕೊಲಂಬೋ, ಜ. 26 : ಕೊಲಂಬೊ-ಕಟುನಾಯಕೆ ಎಕ್ಸ್ಪ್ರೆಸ್ವೇಯಲ್ಲಿ ಗುರುವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಶ್ರೀಲಂಕಾದ ರಾಜ್ಯ ಸಚಿವ ಸನತ್ ನಿಶಾಂತ (48) ಮತ್ತು ಪೊಲೀಸ್ ಅಧಿಕಾರಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಗುರುವಾರ ಮುಂಜಾನೆ ಶ್ರೀಲಂಕಾದ ರಾಜ್ಯ ಸಚಿವ ಸನತ್ ನಿಶಾಂತ ಅವರು ಸಂಚರಿಸುತ್ತಿದ್ದ ವಾಹನವು, ಕಂಟೈನರ್ ಟ್ರಕ್ಗೆ ಡಿಕ್ಕಿ ಹೊಡೆದಿದ್ದು, ನಂತರ ರಸ್ತೆಯ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಸಚಿವರು, ಸಚಿವರ ಪೊಲೀಸ್ ಅಧಿಕಾರಿ , ಹಾಗೂ ವಾಹನ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಸಚಿವರು, ಪೊಲೀಸ್ ಅಧಿಕಾರಿ ಸಾವನ್ನಪ್ಪಿದ್ದು, ವಾಹನದ ಚಾಲಕ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರು, ಜ. 25 : ಪಂಬದ ಸಮಾಜವು ಕರಾವಳಿಯ ದೈವರಾಧನೆ ಮೂಲ ಸಂಸ್ಕೃತಿಯನ್ನು ಉಳಿಸುವ ಜೊತೆಗೆ ಮುಂದಿನ ಪೀಳಿಗೆಗೆ ಆ ಸಂಸ್ಕೃತಿಯನ್ನು ಪರಿಚಯಿಸುವ ಕೆಲಸವನ್ನು ಮಾಡುತ್ತಿದೆ. ಪಂಬದ ಸಮಾಜದ ಪರಂಪರೆ ಮತ್ತು ಸಂಸ್ಕೃತಿಯ ಬಗ್ಗೆ ಆಳವಾದ ಅಧ್ಯಯನ ನಡೆಸಬೇಕಾದರೆ ಪಂಬದರ ಅಧ್ಯಯನ ಪೀಠ ಸ್ಥಾಪಿಸಬೇಕಿದೆ. ಈ ನಿಟ್ಟಿನಲ್ಲಿ ಸಂಪೂರ್ಣ ಸಹಕಾರ ನೀಡುವೆ ಎಂದು ರಾಜ್ಯ ವಿಧಾನ ಸಭೆ ಸ್ಪೀಕರ್ ಯು.ಟಿ. ಖಾದರ್ ಪಂಬದರ ಅಭ್ಯುದಯ ಯುವಜನ ಸೇವಾ ಟ್ರಸ್ಟ್ ಪಡುಪೆರಾರ, ತುಳುವ ಬೊಳ್ಳಿ ಪ್ರತಿಷ್ಠಾನ,ಪಂಬದರ ಯಾನೇ ದೈವಾ ದಿಗರ ಸಮಾಜ ಸಂಘ ವತಿಯಿಂದ ಪುರಭವನದಲ್ಲಿ ರವಿವಾರ ನಡೆದ ‘ಪಂಬದೆರೆನಾ ಸಮಾವೇಶ-ಸಿರಿಮುಡಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕೇಮಾರು ಸಾಂದೀಪನಿ ಮಠದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡಿದರು. ದುರ್ಗಾದಾಸ್ ಶೆಟ್ಟಿ ಮಾವಂತೂರು ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಕಟೀಲು ಶ್ರೀದುರ್ಗಾ ಪರಮೇಶ್ವರಿ ದೇಗುಲದ ಆರ್ಚಕರಾದ ಕಮಲಾ ದೇವಿ ಅಸ್ತ್ರಣ್ಣ ,ಅನಂತ ಪದ್ಮನಾಭ ಕ್ಷೇತ್ರದ ಕೃಷ್ಣರಾಜ್ ತಂತ್ರಿ, ಸಂಸದ ನಳಿನ್ ಕುಮಾರ್ ಕಟೀಲು,…
ಉಳ್ಳಾಲ, ಜ. 24 : ಡಿವೈಡರ್ ಗೆ ಬೈಕ್ ಢಿಕ್ಕಿ ಹೊಡೆದು ಸವಾರ ಮೃತಪಟ್ಟ ಘಟನೆ ರಾ.ಹೆ. 66 ರ ನೇತ್ರಾವತಿ ಸೇತುವೆಯಲ್ಲಿ ಮಂಗಳಾವಾರ ತಡರಾತ್ರಿ ಸಂಭವಿಸಿದೆ. ಮೃತರನ್ನು ಬಾಗಲಕೋಟೆ ನಿವಾಸಿ ಸುರೇಶ್ (30) ಗುರುತಿಸಲಾಗಿದೆ. ಮಂಗಳೂರಿನ ಪಂಪ್ವೆಲ್ ಸಮೀಪ ಗ್ಯಾರೇಜ್ ನಡೆಸುತ್ತಿದ್ದ ಸುರೇಶ್ ಅವರು ನಿನ್ನೆ ರಾತ್ರಿ ಗ್ಯಾರೇಜ್ ಕೆಲಸ ಮುಗಿಸಿ ಮನೆಯತ್ತ ವಾಪಸ್ಸಾಗುತ್ತಿದ್ದ ಸಂದರ್ಭ ತಡರಾತ್ರಿ ಬೈಕ್ ಡಿವೈಡರ್ ಗೆ ಬಡಿದು ತಲೆಗೆ ಗಂಭೀರ ಗಾಯವಾಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ನವದೆಹಲಿ,ಜ. 23:ಸೋಮವಾರ ತಡರಾತ್ರಿ ಚೀನಾದ ದಕ್ಷಿಣ ಕ್ಸಿನ್ಜಿಯಾಂಗ್ ನ ಲ್ಲಿ 7.2 ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿದೆ. ಯಾವುದೇ ಸಾವು-ನೋವುಗಳು ಮತ್ತು ಆಸ್ತಿಪಾಸ್ತಿಗಳು ಹಾನಿಯಾದ ಬಗ್ಗೆ ವರದಿಯಾಗಿಲ್ಲ. ರಿಕ್ಟರ್ ಮಾಪಕದಲ್ಲಿ ಭೂಕಂಪನ ತೀವ್ರತೆ 7.2 ಎಂದು ಗುರುತಿಸಲಾಗಿದ್ದು ಸುಮಾರು 80 ಕಿಮೀ ಆಳದಲ್ಲಿ ಭೂಕಂಪನದ ಕೇಂದ್ರಬಿಂದು ಪತ್ತೆಯಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ರಾಷ್ಟ್ರ ರಾಜಧಾನಿ ದೆಹಲಿ-ಎನ್ಸಿಆರ್ನ ಕೆಲವು ಭಾಗಗಳಲ್ಲಿ ಕಂಪನದ ಅನುಭವವಾಗಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ .
ಅಯೋಧ್ಯೆ, ಜ.22 : ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ಶಾಸ್ತ್ರೋಕ್ತವಾಗಿ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬೆಳ್ಳಿ ರಾಮಮಂದಿರ ಪ್ರತಿರೂಪವನ್ನು ಉಡುಗೊರೆಯಾಗಿ ನೀಡಿದರು.ಗೋವಿಂದ್ ದೇವ್ ಗಿರಿ ಜಿ ಮಹಾರಾಜ್ ಸ್ವಾಮೀಜಿ ಮೋದಿಗೆ ಶಾಲು ಹೊದಿಸಿ ಗೌರವಿಸಿದರು. ಅಯೋಧ್ಯೆಯಲ್ಲಿ ಮಧ್ಯಾಹ್ನ 12 ಗಂಟೆ 30 ನಿಮಿಷ 32 ಸೆಕೆಂಡ್ಗಳ ಮಧ್ಯೆ ಅಭಿಜಿತ್ ಮುಹೂರ್ತದಲ್ಲಿ ಶಾಸ್ತ್ರೋಕ್ತವಾಗಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಾಯಿತು. ಅರ್ಚಕರು, ಪಂಡಿತರು ಹಾಗೂ ಯಜಮಾನ ಸ್ಥಾನದಲ್ಲಿದ್ದ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ನೆರವೇರಿತು. ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಸಿಎಂ ಯೋಗಿ ಆದಿತ್ಯನಾಥ್, ಗುಜರಾತ್ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಮತ್ತಿತರರು ಉಪಸ್ಥಿತರಿದ್ದರು.
ಮಂಗಳೂರು, ಜ. 21 : ಮಂಗಳೂರಿನ ಕಡಲತೀರದಲ್ಲಿ ಮೊದಲಬಾರಿಗೆ ಕಡಲತೀರಕ್ಕೆ ಬಂದು ಮೊಟ್ಟೆಗಳನ್ನಿಟ್ಟು ಹೋಗುವ ವಿಶಿಷ್ಟ ಬದುಕಿನ ಆಲಿವ್ ರಿಡ್ಲೆ ಕಡಲಾಮೆ ಮೊಟ್ಟೆಗಳು ಪತ್ತೆಯಾಗಿವೆ. ಸುರತ್ಕಲ್ ಆಸುಪಾಸಿನ ಕಡಲತೀರದ ಬಳಿಯ ಮೂರು ಕಡೆಗಳಲ್ಲಿ ಆಲಿವ್ ರಿಡ್ಲೆ ಅಮೆಗಳು ಬಂದು ಮೊಟ್ಟೆ ಇರಿಸಿ ಹೋಗಿರುವುದನ್ನು ಅರಣ್ಯ ಇಲಾಖೆ ಸಿಬಂದಿ ಪತ್ತೆ ಮಾಡಿದ್ದು, ಸಂರಕ್ಷಣೆಗೂ ಕ್ರಮ ತೆಗೆದುಕೊಳ್ಳಲಾಗಿದೆ. ಈ ಮೊದಲು ಮಂಗಳೂರಿನಲ್ಲಿ ಎಲ್ಲಿಯೂ ಆಲಿವ್ ರಿಡ್ಲೆ ಮೊಟ್ಟೆಗಳು ಕಂಡು ಬರಲಿಲ್ಲ ಹಾಗಾಗಿ ಅರಣ್ಯ ಇಲಾಖೆ ಈ ಬಾರಿ ಮೂರು ಸಮುದ್ರಗಳಲ್ಲಿ ಮಾನವ ಚಟುವಟಿಕೆ ಮೇಲೆ ನಿಯಂತ್ರಣ ಇದ್ದ ಕಾರಣ ಅದೇ ಸಮುದ್ರದಲ್ಲಿ ಮೊಟ್ಟೆ ಇರಿಸಿರುವುದು ಪತ್ತೆಯಾಗಿದೆ.
ಬಂಟ್ವಾಳ, ಜ. 20: ಶಾಲಾ ಬಾಲಕನೋರ್ವ ನೇತ್ರಾವತಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಸಂಜೆ ವೇಳೆ ನಾವೂರ ಎಂಬಲ್ಲಿ ಗುರುವಾರ ನಡೆದಿದೆ. ಮೃತರನ್ನು ಅಲ್ಲಿಪಾದೆ ನಾವೂರ ಗ್ರಾಮದ ಕೋಡಿಬೈಲು ನಿವಾಸಿ ಪ್ರಜ್ವಲ್ ನಾಯಕ್ (13) ಎಂದು ಗುರುತಿಸಲಾಗಿದೆ. ನಾವೂರ ಗ್ರಾಮದ ನೆಕ್ಕಿಲಾರು ಎಂಬಲ್ಲಿ ಸ್ನೇಹಿತರ ಜೊತೆ ನದಿಯ ಬದಿಗೆ ತೆರಳಿದ ಸಂದರ್ಭ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉತ್ತರ ಪ್ರದೇಶ, ಜ 19 : ಎಲ್ ಪಿ ಜಿ ಸಿಲಿಂಡರ್ಗಳನ್ನು ಸಾಗಿಸುತ್ತಿದ್ದ ಟ್ರಕ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಭಾರಿ ಸ್ಫೋಟ ಸಂಭವಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ಶುಕ್ರವಾರ ನಡೆದಿದೆ. ಎಲ್ ಪಿ ಜಿ ಸಿಲಿಂಡರ್ಗಳನ್ನು ತುಂಬಿದ್ದ ಟ್ರಕ್ ಲಕ್ನೋದಿಂದ ಗೊಂಡಾಗೆ ಬರುತ್ತಿದ್ದಾಗ ಗಡಿಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ನಂತರ ಒಂದರಂತೆ ಅನೇಕ ಸಿಲಿಂಡರ್ಗಳು ಸ್ಫೋಟಗೊಳ್ಳುವ ದೃಶ್ಯ ಕಂಡುಬಂದಿದೆ ಎಂದು ವರದಿಯಾಗಿದೆ. ಟ್ರಕ್ ಚಾಲಕ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.