ಕಾಸರಗೋಡು,ಮಾ 22 : ವಿದ್ಯುತ್ ಶಾಕ್ ತಗುಲಿ ಯುವಕನೊಬ್ಬ ಸಾವನ್ನಪ್ಪಿದ ಘಟನೆ ಶುಕ್ರವಾರ ಮಂಜೇಶ್ವರ ಹೊಸಂಗಡಿ ಸಮೀಪದ ಅಂಗಡಿಪದವು ಎಂಬಲ್ಲಿ ನಡೆದಿದೆ.
ಮೃತರನ್ನು ಅಂಗಡಿ ಪದವಿನ ಪ್ರಜ್ವಲ್ (19) ಎಂದು ಗುರುತಿಸಲಾಗಿದೆ.
ಬೈಕ್ ವರ್ಕ್ಸ್ ಶೋಪ್ ನಲ್ಲಿ ದುಡಿಯುತ್ತಿದ್ದ ಪ್ರಜ್ವಲ್ ಗೆ ಶಾಕ್ ತಗಲಿದ್ದು , ಸ್ಥಳೀಯರು ವಿದ್ಯುತ್ ಕಂಬದಿಂದ ವಿದ್ಯುತ್ ವಯರನ್ನು ವಿಚ್ಚೇಧಿಸಿ ಪ್ರಜ್ವಲ್ ನನ್ನು ತಕ್ಷಣ ಉಪ್ಪಳದ ಆಸ್ಪತ್ರೆಗೆ ಕೊಂಡೊಯ್ದರೂ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.