ಅತ್ತಾವರ,ಸೆ.04: ಅತ್ತಾವರ ಶ್ರೀ ಕ್ಷೇತ್ರ ಚಕ್ರಪಾಣಿ ಗೋಪಿನಾಥ ದೇವಸ್ಥಾನದಲ್ಲಿ ಶ್ರೀಕೃಷ್ಣ ಜಯಂತ್ಯುತ್ಸವ ಪ್ರಯುಕ್ತ ಮುದ್ದುಕೃಷ್ಣ, ಕಿಶೋರ ಕೃಷ್ಣ, ಬಾಲಕೃಷ್ಣ, ಶ್ರೀ ಕೃಷ್ಣ ಹಾಗೂ ರಾಧಕೃಷ್ಣ ವಿಭಾಗದಲ್ಲಿ ಸ್ಪರ್ಧೆ ಅ. 26 ರಂದು ಜರಗಿತು. ಶ್ರೀಕೃಷ್ಣವೇಶ ಸ್ಪರ್ಧೆಯಲ್ಲಿ ಒಟ್ಟು 174 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಉದ್ಯಮಿ ಪ್ರಮೋದ್ ರಾವ್ ಉದ್ಘಾಟಿಸಿದರು. ಚಕ್ರಪಾಣಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್ ಅತ್ತಾವರ ಅಧ್ಯಕ್ಷತೆ ವಹಿಸಿದ್ದರು. ಕೃಷ್ಣ ವೇಷ ಸ್ಪರ್ಧೆಯ ವಿಜೇತರಿಗೆ ಶಾಸಕ ವೇದವ್ಯಾಸ ಕಾಮತ್ ಬಹುಮಾನ ವಿತರಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ವೇದವ್ಯಾಸ ಕಾಮತ್, ಎ. ನಾರಾಯಣ, ಪ್ರವೀಣ್ ಕುಮಾರ್, ಪುಟ್ಟುಬೈಲ್, ಮಂಜುನಾಥ್, ಗುರುಪ್ರಸಾದ್ ಬೋಪಣ್ಣ, ಉದ್ಯಮಿ ಕೆ. ವಸಂತದಾಸ್, ಡಾ| ದಿನೇಶ್, ನಿಲೇಶ್ ಡಿ. ಕಾಮತ್, ಚಕ್ರಪಾಣಿ ಸೇವಾ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣಕೋಟ್ಯಾನ್ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಚಕ್ರವಾಣಿ ನೃತ್ಯಕಲಾಕೇಂದ್ರದ ನೃತ್ಯ ಗುರುಗಳಾದ ವಿದ್ವಾನ್ ಸುರೇಶ್ ಅತ್ತಾವರ ಇವರ ಶಿಷ್ಯವೃಂದದವರಿಂದ ನೃತ್ಯಾರಾಧನ ಕಾಯಕ್ರಮ ಜರಗಿತು.ರಾತ್ರಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಮಹಾಪೂಜೆ, ಉಯ್ಯಾಲೋತ್ಸವ, ಅರ್ಘ ಪ್ರದಾನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗಿತು.