ಮಂಗಳೂರು ,ಆ. 28 : ಸ್ಟಾರ್ ಕ್ರಿಯೆಶನ್ಸ್ ಬ್ಯಾನರಿನಡಿಯಲ್ಲಿ ತಯಾರಾದ ರಾನಿ ಕನ್ನಡ ಚಿತ್ರ ಸೆಪ್ಟೆಂಬರ್ 12 ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ಗುರುತೇಜ್ ಶೆಟ್ಟಿ ಅವರು ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
92 ದಿನ ಬೆಂಗಳೂರು ಮತ್ತು ಮೈಸೂರುನ ಸುತ್ತ ಮುತ್ತ ಚಿತ್ರೀಕರಣ ಮಾಡಲಾಗಿದೆ. ಚಿತ್ರದ ಟ್ರೈಲರ್ ಸೆಪ್ಟಂಬರ್ 1 ಕ್ಕೆ ಬಿಡುಗಡೆಯಾಗಲಿದೆ. ಚಿತ್ರವು ಇದೇ ಆಗಸ್ಟ್ 30 ಕ್ಕೆ ಬಿಡುಗಡೆ ಯಾಗಬೇಕಿತ್ತು ಕಾರಣಾಂತರದಿಂದ 2 ವಾರ ಮುಂದಕ್ಕೆ ಹೋಗಿದೆ. ಚಿತ್ರಕ್ಕೆ U/A ಸರ್ಟಿಫಿಕೇಟ ಸಿಕ್ಕಿದೆ ಎಂದು ಅವರು ಹೇಳಿದರು.
ರಾನಿ ಚಿತ್ರದ ಕಥೆ-ಚಿತ್ರಕಥ-ಸಂಭಾಷಣೆ-ನಿರ್ದೇಶನ-ಗುರುತೇಜ್ ಶೆಟ್ಟಿ. ನಿರ್ಮಾಪಕರಾಗಿ ಚಂದ್ರಕಾಂತ ಪೂಜಾರಿ,ಉಮೇಶ್ ಹೆಗ್ಡೆ, ನಾಯಕನಾಗಿ ಕಿರಣ್ ರಾಜ್. ನಾಯಕಿರಾಗಿ ಅಪೂರ್ವ,ರಾಧ್ಯ,ಸಮೀಕ್ಷ. ಸಹ ಕಲಾವಿದರು-ರವಿ ಶಂಕರ,ಗಿರೀಶ್ ಹೆಗ್ಡೆ,ಮೈಕೊ ನಾಗರಾಜ್,ಉಗ್ರಂ ಮಂಜು,ಉಗ್ರಂ ರವಿ,ಯಶ್ ಶೆಟ್ಟಿ,ಸುಜಯ್ ಶಾಸ್ತ್ರಿ,ಬಿ ಸುರೇಶ್,ಶ್ರೀಧರ್,ಲಕ್ಷ್ಮೀಸುಬ್ಬಯ್ಯ ಮುಂತಾದ ಕಲಾವಿದರು ಅಭಿನಯಿಸಿದ್ದಾರೆ .