ಬೆಂಗಳೂರು, ಸೆ.16: ಮ್ಯಾಜಿಕ್ ಫ್ರೇಮ್ಸ್, ಲಿಸ್ಟಿನ್ ಸ್ಟೀಫನ್ ಮತ್ತು ಯುಜಿಎಮ್ ಮೂವೀಸ್ ಬ್ಯಾನರ್ನಲ್ಲಿ ಡಾ. ಜಕರಿಯಾ ಥಾಮಸ್ ನಿರ್ಮಿಸಿದ ಎ ಆರ್ ಎಂ ಸಿನಿಮಾ ಪ್ರಪಂಚದಾದ್ಯಂತ ಬಿಡುಗಡೆಯಾಗಿ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತಪಡಿದೆ.ಬಿಡುಗಡೆಯಾದ 4 ದಿನಕ್ಕೆ 54 ಕೋಟಿ ಕಲೆಕ್ಷನ್ ಆಗಿದೆ. ನೂರು ಕೋಟಿ ಕಲೆಕ್ಷನ್ ನತ್ತ ಮುನ್ನುಗುತ್ತದೆ ಎಂದು ಚಿತ್ರತಂಡ ಹೇಳಿದೆ.
ಎ ಆರ್ ಎಂ ಸಿನಿಮಾ ಬುಕ್ ಮೈ ಶೋನಲ್ಲಿ 24 ಗಂಟೆಗಳಲ್ಲಿ 1,52,000 ಸಾವಿರ ಟಿಕೆಟ್ ಬುಕ್ ಆಗಿದೆ. ಗೋಟ್ ಮತ್ತು ಸ್ತ್ರೀ ಚಿತ್ರಗಳಿ ಗಿಂತಲೂ ಹೆಚ್ಚು ಬುಕ್ಕಾದ ಭಾರತದ ಮೊದಲ ಸಿನಿಮಾ. ಇದೇ ಆಗಿದೆ. ಚಿತ್ರವನ್ನು ಕನ್ನಡದಲ್ಲಿ ಹೊಂಬಾಳೆ ಫಿಲಂಸ್ ಸಂಸ್ಥೆ ಬಿಡುಗಡೆ ಮಾಡಿದೆ. ಬಿಡುಗಡೆಯಾದ ಎಲ್ಲಾ ಚಿತ್ರಮಂದಿರಗಳಲ್ಲು ಹೌಸ್ ಪುಲ್ ಕಲೆಕ್ಷನ್ ಕಾಣುತ್ತಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.
ಎ ಆರ್ ಎಂ ಚಿತ್ರದಲ್ಲಿ ನಟ ಟೊವಿನೋ ಥಾಮಸ್ ಮೂರು ಶೇಡ್ಗಳಲ್ಲಿ ಅಭಿನಯಿಸಿದ್ದಾರೆ. ತಮಿಳು, ತೆಲುಗು ಚಿತ್ರರಂಗದಲ್ಲಿ ಮೋಡಿ ಮಾಡಿರುವ ನಟಿಯರಾದ ಕೃತಿ ಶೆಟ್ಟಿ, ಐಶ್ವರ್ಯ ರಾಜೇಶ್ ಮತ್ತು ಸುರಭಿ ಲಕ್ಷ್ಮಿ ಎಆರ್ಎಂ ಸಿನಿಮಾದಲ್ಲಿದ್ದಾರೆ.
ಮಹಿಳೆಯೋರ್ವರು ಕಥೆಯನ್ನು ವಿವರಿಸುತ್ತಾರೆ. ಎ ಆರ್ ಎಂ ಆ್ಯಕ್ಷನ್ ಸಿನಿಮಾವಾಗಿದೆ.ಟೊವಿನೋ ಥಾಮಸ್ ಮೂರು ವಿಭಿನ್ನ ಪಾತ್ರಗಳಲ್ಲಿ ಅಭಿನಸಿದ್ದಾರೆ.ಮಣಿಯನ್, ಕುಂಜಿಕ್ಕೆಲು ಮತ್ತು ಅಜಯನ್ ಎಂಬ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೇರಳದ ಶ್ರೀಮಂತ ಸಂಸ್ಕೃತಿಯನ್ನು ಬಿಂಬಿಸುವ ಕಥೆ ಈ ಸಿನಿಮಾದಲ್ಲಿದೆ. ಎ ಆರ್ ಎಂ ಟೊವಿನೋ ಥಾಮಸ್ ಅವರ 50ನೇ ಚಿತ್ರವಾಗಿದ್ದು ಆ್ಯಕ್ಷನ್ ಸೀಕ್ವೆನ್ಸ್ ನಿರ್ವಹಿಸಲು ನಟ ಕಳರಿಪಯಟ್ಟುವಿನ ವ್ಯಾಪಕ ತರಬೇತಿ ಪಡೆದಿದ್ದರು. ಕಾಂತಾರ ಖ್ಯಾತಿಯ ವಿಕ್ರಮ್ ಮೂರ್ ಮತ್ತು ಫೀನಿಕ್ಸ್ ಪ್ರಭು ಸ್ಟಂಟ್ಸ್ ಸಂಯೋಜಿಸಿದ್ದಾರೆ.