ಗುಜರಾತ್, ಸೆ. 01 : ಕಕ್ರಾಪರ್ ನ 3ನೇ ಹಂತದ ಪರಮಾಣು ವಿದ್ಯುತ್ ಸ್ಥಾವರ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಆರಂಭಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗುಜರಾತ್ ನಲ್ಲಿರುವ ಕಕ್ರಾಪರ್ ನಲ್ಲಿ ಈಗಾಗಲೇ ಎರಡು ಸ್ಥಾವರಗಳು 220 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯನ್ನು ಸಾಮರ್ಥ್ಯ ಹೊಂದಿದೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ‘ಭಾರತ ಮತ್ತೊಂದು ಸಾಧನೆ ಮಾಡಿದೆ. 700 MW ಸಾಮರ್ಥ್ಯದ ಗುಜರಾತ್ನ ಮೊದಲ ಅತಿದೊಡ್ಡ ಸ್ವದೇಶಿ ನಿರ್ಮಿತ ಕಕ್ರಾಪರ್ ಪರಮಾಣು ವಿದ್ಯುತ್ ಸ್ಥಾವರದ ಘಟಕ-3 ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿದೆ. ಅದಕ್ಕಾಗಿ ವಿಜ್ಞಾನಿಗಳು ಮತ್ತು ಎಂಜಿನಿಯರ್ ಗಳಿಗೆ ಅಭಿನಂದನೆಗಳು ಎಂದು ಮೆಚ್ಚಿಗೆ ಸೂಚಿಸಿದ್ದಾರೆ.
2 Comments
Pingback: water sounds
Pingback: stress relief