ನೈಜೀರಿಯಾ, ಜು 14 : ತರಗತಿ ನಡೆಯುತ್ತಿರುವಾಗ 2 ಅಂತಸ್ತಿನ ಶಾಲೆಯೊಂದು ಕುಸಿದು 22ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೃತಪಟ್ಟಿದ್ದು, ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅವಶೇಷಗಳ ಅಡಿಯಲ್ಲಿ ಸಿಲುಕಿದ ದಾರುಣ ಘಟನೆ ಉತ್ತರ-ಮಧ್ಯ ನೈಜೀರಿಯಾದಲ್ಲಿ ನಡೆದಿದೆ.
ಅವಶೇಷಗಳಲ್ಲಿ ಸಿಲುಕಿರುವ ವಿದ್ಯಾರ್ಥಿಗಳಿಗಾಗಿ ಶೋಧ ನಡೆಯುತ್ತಿದೆ. ಪರಿಹಾರ ಮತ್ತು ರಕ್ಷಣಾ ತಂಡಗಳನ್ನು ಸ್ಥಳದಲ್ಲಿ ಬೀಡು ಬಿಟ್ಟಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.
ಪ್ರಸ್ಥಭೂಮಿ ರಾಜ್ಯದ ಬುಸಾ ಬುಜಿ ಸಮುದಾಯದ ಸೇಂಟ್ಸ್ ಅಕಾಡೆಮಿ ಕಾಲೇಜಿಗೆ ವಿದ್ಯಾರ್ಥಿಗಳು ಎಂದಿನಂತೆ ತರಗತಿಗಳಿಗೆ ಬಂದಿದ್ದರು. ಶಾಲೆ ಆರಂಭವಾದ ಕೆಲ ಸಮಯದಲ್ಲೇ ಶಾಲಾ ಕಟ್ಟಡ ಕುಸಿದಿದೆ ಎನ್ನಲಾಗಿದೆ.
ಒಟ್ಟು 154 ವಿದ್ಯಾರ್ಥಿಗಳು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದು ಈ ಪೈಕಿ 132 ಮಂದಿಯನ್ನು ರಕ್ಷಿಸಲಾಗಿದೆ. 22 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ಪ್ರಸ್ಥಭೂಮಿ ಪೊಲೀಸ್ ವಕ್ತಾರ ಆಲ್ಫ್ರೆಡ್ ಅಲಾಬೊ ತಿಳಿಸಿದ್ದಾರೆ.