ಮಂಗಳೂರು, ಸೆ. 19 : ಶ್ರೀ ರಾಮ್ ಫೈನಾನ್ಸ್ ಕಂಪೆನಿ ಲಿಮಿಟೆಡ್ ಮಂಗಳೂರು ವತಿಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಗರದ ಕುದ್ಮಲ್ ರಂಗರಾವ್ ಪುರಭವನದಲ್ಲಿ ಸೆ.12, ಶುಕ್ರವಾರ ನಡೆಯಿತು.
ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮಕ್ಕೆ ಸಂಸದ ದಕ. ಜಿಲ್ಲಾ ಸಂಸದ ಕ್ಯಾ ಬೃಜೇಶ್ ಚೌಟ ಚಾಲನೆ ನೀಡಿ ಮಾತಾಡಿದ ಅವರು, ನಮ್ಮ ದೇಶದಲ್ಲಿ ಶೇ. 65ರಷ್ಟು ಯುವ ಸಮೂಹವು ಇದೆ. ಈ ಯುವ ಸಮೂಹದ ಸಮಯಗಳು ದೇಶ ಕಟ್ಟುವ ಕಾರ್ಯಕ್ಕೆ ವಿನಿಯೋಗ ಆಗಬೇಕಾಗಿದೆ.ಉಳ್ಳವರು ಮು೦ದೆ ಬಂದು ವಿದ್ಯಾರ್ಜನೆಗೆ ನೈತಿಕ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಸಾಮಾಜಿಕ ಕಲಾ ಮತ್ತು ಕ್ರೀಡಾ ವಿಭಾಗದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕಂತ ಮಹಾಲಿಂಗ ನಾಯಕ್ ಅಮೈ, ರಾಷ್ಟ್ರೀಯ ಪ್ರಧಾನಮಂತ್ರಿ ಬಾಲ ಪುರಸ್ಕಾರ ವಿಜೇತ ಕುಮಾರಿ ರೆಮೋನಾ ಇವೆಟ್ ಪರೇರಾ, ಪೊಲೀಸ್ ಇಲಾಖೆಯಲ್ಲಿ ರಾಷ್ಟ್ರಪತಿ ಪ್ರಶಸ್ತಿ ವಿಜೇತ ಪೊಲೀಸ್ ಅಧಿಕಾರಿಗಳಾದ ಮೋಹನ್ (ಸೆನ್ ಪೊಲೀಸ್ ಠಾಣೆ ಮಂಗಳೂರು) ಹಾಗೂ ವಿಜಯ್ ಕಾಂಚನ್ (ಸೆನ್ ಪೊಲೀಸ್ ಠಾಣೆ ಮಂಗಳೂರು), ಏಷಿಯನ್ ಪವರ್ ಲಿಫ್ಟಿಂಗ್ ಮತ್ತು ಬೆಂಚ್ ಪ್ರೆಸ್ ಸ್ವರ್ಣ ಪದಕ ವಿಜೇತೆ ಶ್ರೀಮತಿ ದೀಪಾ ಕೆ ಎಸ್, ಮುಖ್ಯಮಂತ್ರಿ ಪ್ರಶಸ್ತಿ ವಿಜೇತ ಪೊಲೀಸ್ ಅಧಿಕಾರಿಗಳಾದ ಅಬ್ದುಲ್ ಜಬ್ಬಾರ್ ಕೆ, (ಸಿಸಿಬಿ ಘಟಕ ಮಂಗಳೂರು), ಸುಜನ್ ಶೆಟ್ಟಿ (ಸಿಸಿಬಿ ಘಟಕ ಮಂಗಳೂರು), ಶ್ರೀಮತಿ ನಯನ (ಪಾಂಡೇಶ್ವರ ಪೊಲೀಸ್ ಠಾಣೆ ಮಂಗಳೂರು) ಹಾಗೂ ಸಂಚಾರ ವಿಭಾಗದಲ್ಲಿ ರವಿ (ಸಂಚಾರ ಪೂರ್ವ ಠಾಣೆ ಮಂಗಳೂರು), ಜಯರಾಂ (ಸಂಚಾರ ಪಶ್ಚಿಮ ಠಾಣೆ ಮಂಗಳೂರು), ಆಂಜನಪ್ಪ ವಿ (ಸಂಚಾರ ಉತ್ತರ ಠಾಣೆ) ಹಾಗೂ ಯಶವಂತ (ಸಂಚಾರ ದಕ್ಷಿಣ ಠಾಣೆ) ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ದ. ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ ವಿ ಉದ್ಘಾಟಿಸಿದರು.ಸಂಸ್ಥೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಸುದರ್ಶನ್ ಬಿ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಶಾಸಕ ಡಿ. ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪ್ರತ್ತೂರು, ಶ್ರೀರಾಮ್ ಫೈನಾನ್ಸ್ ನ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀಧರ್ ಮಟ್ಟಂ, ಅಧ್ಯಕ್ಷ ಶರತ್ ಚಂದ್ರ ಭಟ್ ಕಾಕುಂಜೆ ಕಾಂಚನ ಮೋಟರ್ಸ್ ನ ಆಡಳಿತ ನಿರ್ದೇಶಕ ಪ್ರಸಾದ್ ಕಾಂಚನ್, ಪತ್ರಕರ್ತ ವಾಲ್ವರ್‌ನಂದಳಿಕೆ, ಕರ್ನಾಟಕ ಏಜೆನ್ಸಿನ ಸಂತೋಷ್ ರಾಡ್ರಿಗಸ್, ಶಾರದಾ ವಿದ್ಯಾಗಣಪತಿ, ಶಾಲೆಯ ಸಂಚಾಲಕ ಟಿ.ಜಿ.ರಾಜರಾಮ್ ಭಟ್, ಚಲನಚಿತ್ರ ನಟಿ ಪೂರ್ಣಿಮಾ ಎಸ್ ನಾಯಕ್ ,ಮೈಸೂರು ಎಲೆಕ್ಟ್ರಿಕ್ಸ್ ನ ನಿಕಟಪೂರ್ವ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಹೆಚ್. ವಿ, ಟ್ಯಾಕ್ಸಿ ಮೆನ್ ಅಸೋಸಿಯೇಷನ್ ನ ಆನಂದ, ಲಯನ್ಸ್ ಕ್ಲಬ್ ನ ಡಾ| ಜಿ. ಆರ್. ಶೆಟ್ಟಿ ವೆಸ್ಟ್ ಕೋಸ್ಟ್ ಮೋಟರ್ಸ್ ನ ಆಡಳಿತ ನಿರ್ದೇಶಕ ಮಹಮ್ಮದ್ ರಫೀಕ್, ಅರವಿಂದ್ ಮೋಟಾರ್ಸ್ ನ ಆಡಳಿತ ನಿರ್ದೇಶಕ ಉದಯ ಎಂ., ದುರ್ಗಾ ಮೋಟರ್ಸ್ ನ ಉದಯ್ ನಾಯಕ್, ಶ್ರೀರಾಂ ಫೈನಾನ್ಸ್ ಸ್ಟೇಟ್ ಲೀಗಲ್ ಹೆಡ್ ಉಲ್ಲಾಸ್ ನಾಯಕ್, ಸ್ಟೇಟ್ ಕಲೆಕ್ಷನ್ ಹೆಡ್ ನಾಗರಾಜ್ ಉಪಸ್ಥಿತರಿದ್ದರು.
ಸಂಸ್ಥೆಯ ರೀಜನಲ್ ಬ್ಯುಸಿನೆಸ್ ಹೆಡ್ ಚೇತನ್ ಅರಸ್ ಹಾಗೂ ರೀಜನಲ್ ಕಲೆಕ್ಷನ್ ಹೆಡ್ ಪಮೋದ್ ಅಂಚನ್ ಅವರು ಕಾರ್ಯಕ್ರಮ ನಿರ್ವಹಿಸಿದರು.











