ಕಾಪು, ಫೆ. 19: ಇಲ್ಲಿನ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ವಾರ್ಷಿಕ ಮಹೋತ್ಸವದ ಪ್ರಯುಕ್ತ ಮಂಗಳವಾರ
ಮಧ್ಯಾಹ್ನ ಮಾರಿಯಮ್ಮ ದೇವಿಯ ಭೇಟಿ ಸಹಿತವಾಗಿ ರಥಾರೋಹಣ ಆ ಬಳಿಕ ಮಹಾ ಅನ್ನಸಂತರ್ಪಣೆ ರಾತ್ರಿ ಶ್ರೀ ಮನ್ಮಹಾರಥೋತ್ಸವ, ಉತ್ಸವ ಬಲಿ,ಕಟ್ಟೆ ಪೂಜೆ,ಭೂತ ಬಲಿ,,ಶಯನೋತ್ಸವ ನೆರವೇರಿತು.
ದೇಗುಲದ ಪ್ರಧಾನ ತಂತ್ರಿ ವೇ। ಮೂ। ಶ್ರೀಶ ತಂತ್ರಿ ಕಲ್ಯ, ಅರ್ಚಕ ವೇ। ಮೂ। ನಾರಾಯಣ ತಂತ್ರಿ ಅವರ ಉಪಸ್ಥಿತಿಯಲ್ಲಿ ವೈದಿಕ ವೃಂದದವರ ಪಾಲ್ಗೊಳ್ಳುವಿಕೆಯೊಂದಿಗೆ ವಾರ್ಷಿಕ ಮಹೋತ್ಸವ, ಪಲ್ಲಪೂಜೆ, ರಥಾರೋಹಣ ನಡೆಯಿತು. ಆ ಬಳಿಕ ಮಹಾ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಪುರಸಭೆ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ, ಶ್ರೀ ಹೊಸ ಮಾರಿಗುಡಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಹಳೇ ಮಾರಿಯಮ್ಮದೇವಸ್ಥಾನದ ಆಡಳಿತ ಮೊಕ್ತಸರ ಪ್ರಸಾದ್ ಜಿ. ಶೆಣೈ, ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಮನೋಹರ ಎಸ್. ಶೆಟ್ಟಿ ಕಾಪು, ಕಾರ್ಯನಿರ್ವಹಣಾಧಿಕಾರಿ ಅಶೋಕ್ ಎನ್. ಕೋಟೆಕಾರ್, ಗೌರವ ಸಲಹೆಗಾರ ಕೆ.ಪಿ. ಆಚಾರ್ಯ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಶಶಿಧರ್ ಎಂ. ಶೆಟ್ಟಿ ಎರ್ಮಾಳು, ಮಾಜಿ ಆಡಳಿತ ಮೊತ್ತೇಸರ ಮೋಹನ್ ಎಂ.ಬಂಗೇರ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಶಶಿಧರ ಸುವರ್ಣ, ಸದಾನಂದ ಎ. ಸುವರ್ಣ, ಶ್ರೀಕಾಂತ್ ಕಾಪು, ರವಿ ಕುಮಾರ್ ಮಂದಾರ, ಅಶ್ವಿನಿ ನವೀನ್, ಶಾಂತಾಲತಾ ಶೆಟ್ಟಿ ನಾಗರಾಜ್ ಮೂಳೂರು, ಗಣ್ಯರಾದ ಕೆ. ಶ್ರೀಧರ ಶೆಣೈ, ಕಾಪು ದಿವಾಕರ ಶೆಟ್ಟಿ ಕೋತ್ವಾಲಗುತ್ತು, ಯೋಗೀಶ್ ಶೆಟ್ಟಿ ಬಾಲಾಜಿ, ಡಾ| ಶಿಶಿರ್ ಶೆಟ್ಟಿ ಬಾವುಗುತ್ತು, ಸಖೇಂದ್ರ ಸುವರ್ಣ, ಸುರೇಶ್ ಶೆಟ್ಟಿ ಅಯೋಧ್ಯಾ, ಲಕ್ಷ್ಮೀಶ ತಂತ್ರಿ ಕಲ್ಯ ಮುಂತಾದವರು ಉಪಸ್ಥಿತರಿದ್ದರು.