ಬಂಟ್ವಾಳ, ಏ.4 : ಸಜೀಪ ಮಾಗಣೆಯ ಮಿತ್ತಮಜಲು ಶ್ರೀ ನಡಿಯೇಲು ದೈಯ್ಯಂಗುಲು, ಉಳ್ಳಾಲ್ತಿ, ಶ್ರೀ ನಾಲ್ಕೈತ್ತಾಯ ಹಾಗೂ ಪರಿವಾರ ದೈವಗಳ ಕ್ಷೇತ್ರದ ನವೀಕೃತ ಗೋಪುರಗಳ ಲೋಕಾರ್ಪಣೆ ಹಾಗೂ ಸಾನಿಧ್ಯ ಕಲಶಾದಿ ಕಾರ್ಯಕ್ರಮಳು ಏ.2 ರಿಂದ ಏ.3ರ ತನಕ ನಡೆಯಿತು.
ಏ.2, ಬುಧವಾರ ಸಂಜೆ ಕ್ಷೇತ್ರದ ಮಹಾದ್ವಾರದ ಬಳಿಯಿಂದ ಹಸಿರುವಾಣಿ ಹೊರಕಾಣಿಕೆ ಶೋಭಾಯಾತ್ರೆಯು ನಡೆಯಿತು.ನಗ್ರಿ, ಪಣೋಲಿಬೈಲು, ಕಾರಾಜೆ, ನಾಗನವಳಚ್ಚಿಲು, ನಂದಾವರ, ಮುಗುಳಿಯ, ಮಿತ್ತಮಜಲು ದ್ವಾರ, ಕೋಟೆಕಣಿ, ಸಜೀಪನಡು, ಈಶ್ವರಮಂಗಲ, ಅನ್ನಪ್ಪಾಡಿ, ಮಂಜಲ್ಪಾದೆ, ಶಾರದಾನಗರ, ವಿದ್ಯಾನಗರ, ಸುಭಾಷ್ನಗರ ಮೊದಲಾದ ವಲಯಗಳ ಕೇಂದ್ರಗಳಲ್ಲಿ ಸಂಗ್ರಹಿಸಿದ ಹೊರೆಕಾಣಿಕೆಯನ್ನು ಮೆರವಣಿಗೆಯಲ್ಲಿ ಸಾಗಿಸಲಾಯಿತು.
ಸಜೀಪ ಮಾಗಣೆಯ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್ – ಪ್ರಾರ್ಥನೆ ನೆರವೇರಿಸಿದ ಬಳಿಕ ಬಂಟ್ವಾಳ ಶಾಸಕ ರಾಜೇಶ್ ನ್ಯಾಕ್ ಉಳಿಪ್ಪಾಡಿಗುತ್ತು ಮೆರವಣಿಗೆಗೆ ಚಾಲನೆ ನೀಡಿದರು. ಮಾಜಿ ಸಚಿವ ಬಿ.ರಮಾನಾಥ ರೈ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ವಿವೇಕ್ ಶೆಟ್ಟಿ, ನಗ್ರಿಗುತ್ತು, ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ ಸಂಕೇಶ, ಗಡಿಪ್ರಧಾನರಾದ ಕಾಂತಾಡಿಗುತ್ತು ಬರಂಗರೆ ಉಗ್ಗ ಶೆಟ್ಟಿ ಯಾನೆ ಗಣೇಶ್ ನ್ಯಾಕ್, ಪಾಲಮಂಟಮೆ ಕುಟುಂಬಸ್ಥರು, ಶಿವರಾಮ ಭಂಡಾರಿ ಬಿಜಂದಾರುಗುತ್ತು, ಮುತ್ತಣ್ಣ ಶೆಟ್ಟಿ ಸಜೀಪಗುತ್ತು, ಜಯರಾಮ ಶೆಟ್ಟಿ ನಗ್ರಿಗುತ್ತು, ಮಾಡಂತಾಡಿಗುತ್ತು ಗಡಿ ಪ್ರಧಾನರಾದ ನಾರ್ಣ ಅಳ್ವ ಯಾನೆ ಶಶಿಧರ ರೈ, ಆನಂದ ರೈ ಅಂಕದಕೋಡಿ, ಹೊರೆಕಾಣಿಕೆ ಸಮಿತಿ ಮುಖ್ಯ ಸಂಚಾಲಕ ಜಯಶಂಕರ ಬಾಸಿತ್ತಾಯ, ವಿವಿಧ ಕ್ಷೇತ್ರದ ಪ್ರಮುಖರು, ಸಮಿತಿಯ ಸದಸ್ಯರು,ಮಾಗಣೆ ಪ್ರಮುಖರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ವಿವಿಧ ಕುಣಿತ ಭಜನಾ ತಂಡಗಳು, ಚೆಂಡೆ ಬಳಗ ಮೆರವಣಿಗೆಗೆ ಮೆರುಗು ನೀಡಿದರು.
ತಂತ್ರಿಗಳಾದ ಬ್ರಹ್ಮಶ್ರೀ ವೇಮೂ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳಿಂದ ಧಾರ್ಮಿಕ ವಿಧಿ ಆರಂಭಗೊಂಡಿತು. ಹಿನ್ನೆಲೆ ಗಾಯಕ ಅಜಯ್ ವಾರಿಯರ್ ಅವರ ಭಕ್ತಿ ಗಾನ ಸುಧೆ ಸಂಗೀತ ನಿರ್ದೇಶಕ ಗುರುಕಿರಣ್ ಅವರ ಉಪಸ್ಥಿತಿಯಲ್ಲಿ ನಡೆಯಿತು.
ಎ. 3ರಂದು ಬೆಳಗ್ಗೆ 7ರಿಂದ ಗಣಪತಿ ಹೋಮ, ಬಿಂಬ ಶುದ್ದಿ ಕಲಶ ಪೂಜೆ, ಬಿಂಬ ಶುದ್ಧಿ ಕಲಶಾಭಿಷೇಕ, ದಾನಿಗಳಿಗೆ ಗೌರವಾರ್ಪಣೆ, ಸಾನ್ನಿಧ್ಯ, ಕಲಶ ಪೂಜೆ, ಕಲಶಾಭಿಷೇಕ,ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.