ಮಂಗಳೂರು , ಎ. 15 : ಕುಲಶೇಖರ ಬೈತುರ್ಲಿಯಲ್ಲಿ ಶನಿವಾರ ರೋಹನ್ ಕಾರ್ಪೊ ರೇಶನ್ನ ಹೊಸ ಅಪಾರ್ಟ್‌ಮೆಂಟ್ ಯೋಜನೆ ರೋಹನ್ ಮಿರಾಜ್‌ಗೆ ಭೂಮಿಪೂಜೆ ಸಮಾರಂಭ ನಡೆಯಿತು.
ಸಮಾರಂಭದಲ್ಲಿ ಮಾತನಾಡಿದ ಎಂದು ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು, ಮಂಗಳೂರು ನಗರ ಬಿಟ್ಟು ಹೊರಗೂ ಹೋಗಿ ಫ್ಲ್ಯಾಟ್‌ಗಳನ್ನು ನಿರ್ಮಾಣ ಮಾಡುತ್ತಿರುವುದು ರೋಹನ್ ಅವರ ಧೈರ್ಯವನ್ನು ಮೆಚ್ಚಬೇಕು. ಕನಿಷ್ಠ ಲಾಭವಿಟ್ಟುಕೊಂಡು ಗ್ರಾಹಕರಿಗೆ ಗರಿಷ್ಠ ಸೌಲಭ್ಯ ನೀಡುವುದು ರೋಹನ್ ಮೊಂತೇರೊ ಅವರ ಯೋಜನೆಗಳ ಹಿರಿಮೆ, ಹಾಗಾಗಿ ಅವರ ಫ್ಲ್ಯಾಟ್‌ಗಳು ಶೀಘ್ರ ಮಾರಾಟವಾಗುತ್ತಿವೆ ಎಂದು ಹೇಳಿದರು.
ಕುಲಶೇಖರ ಚರ್ಚ್ನ ಧರ್ಮಗುರು ಫಾದರ್ ಕ್ಲಿಫರ್ಡ್ ಫರ್ನಾಂಡಿಸ್ ಭೂಮಿಪೂಜೆ ನೆರವೇರಿಸಿ, ಯೋಜನೆಯು ಯಾವುದೇ ಅಡೆತಡೆ ಇಲ್ಲದೆ ಶೀಘ್ರ ಅನುಷ್ಠಾನಗೊಂಡು, ಇಲ್ಲಿ ನೆಲೆಸುವವರು ನೆಮ್ಮದಿಯಿಂದ ಜೀವನ ನಡೆಸುವಂತಾಗಲಿ ಎಂದು ಆಶೀರ್ವಚನ ನೀಡಿದರು.
ಮಾಜಿ ಶಾಸಕ ಜೆ.ಆರ್.ಲೋಬೊ, ನ್ಯಾಯವಾದಿ ಪದ್ಮರಾಜ್ ಆ., ಮಾಜಿ ಕಾರ್ಪೊರೇಟರ್‌ಗಳಾದ ಭಾಸ್ಕರ ಕೆ., ಲ್ಯಾನ್ಸಿ ಲಾಟ್ ಪಿಂಟೊ, ನವೀನ್ ಡಿಸೋಜ, ಜಿಪಂ ಮಾಜಿ ಸದಸ್ಯ ಮೆಲ್ವಿನ್ ಡಿಸೋಜ, ಕ್ರೆಡಾಯ್ ಅಧ್ಯಕ್ಷ ವಿನೋದ್ ಪಿಂಟೊ, ರೋಹನ್ ಕಾರ್ಪೊರೇಶನ್ನ ನಿರ್ದೇಶಕ ಡಿಯೋನ್ ಮೊಂತೇರೊ ಉಪಸ್ಥಿತರಿದ್ದರು.
ರೋಹನ್ ಕಾರ್ಪೊರೇಶನ್ನ ಆಡಳಿತ ನಿರ್ದೇಶಕ ರೋಹನ್ ಮೊಂತೇರೊ ಸ್ವಾಗತಿಸಿ, ವಂದಿಸಿದರು. ಸಾಹಿಲ್ ಝಹೀರ್ ಕಾರ್ಯಕ್ರಮ ನಿರೂಪಿಸಿದರು.