ಉರ್ವ, ಏ.21 : ಉರ್ವ ಬೋಳೂರು ಶ್ರೀ ಕೊರಗಜ್ಜನ ಕ್ಷೇತ್ರ ದಲ್ಲಿ 19ನೇ ವಾರ್ಷಿಕ ನೇಮೋತ್ಸವವು ತಾ. 18-04-2025 ನೇ ಶುಕ್ರವಾರದಿಂದ 20-04-2025 ರವಿವಾರದ ತನಕ ವಿಜ್ರಂಭಣೆಯಿಂದ ಜರಗಿತು.
ಎ. 18ರಂದು ಶುಕ್ರವಾರ ಪ್ರಾರ್ಥನೆ, ಪುಣ್ಯಹ, ಗಣಹೋಮ, ನವಕ ಕಲಶ, ಪರ್ವ ಪೂಜೆ, ತೋರಣ ಮುಹೂರ್ತ ವೇ। ಮೂ। ಶ್ರೀ. ಕೆ. ಪುರುಷೋತ್ತಮ ಭಟ್ (ಶ್ರೀ ವೆಂಕಟರಮಣ ದೇವಸ್ಥಾನ, ಬೊಕ್ಕಪಟ್ಟ ಮಂಗಳೂರು) ಇವರ ಪೌರೋಹಿತ್ಯದಲ್ಲಿ ಬೆಳಿಗ್ಗೆ 10ಕ್ಕೆ ಕ್ಷೇತ್ರದ ಪ್ರಧಾನ ದೈವ ಸಾರಲ ಪಟ್ಟದ ಕೊರಗಜ್ಜನಿಗೆ ಸೀಯಾಳಾಭಿಷೇಕ ನಂತರ ಪರ್ವ ಸೇವೆ, ಪ್ರಸಾದ ವಿತರಣೆ ನಡೆಯಿತು.
ಎ. 19ರಂದು ಶನಿವಾರ ಸಂಜೆ ಶ್ರೀ ಚಾಮುಂಡೇಶ್ವರಿ-ಕತ್ತಲೆಕಾನ ಗುಳಿಗ ದೈವಗಳ ಸಿರಿ ಸಿಂಗಾರದ ನೇಮೋತ್ಸವ,ಸಾರ್ವಜನಿಕ ಮಹಾ ಅನ್ನಸಂತರ್ಪಣೆ, ಗಂಧ ಪ್ರಸಾದ ವಿತರಣೆ ನಡೆಯಿತು.
ಈ ಪ್ರಯುಕ್ತ ತಾ. 20-04-2025 ಆದಿತ್ಯವಾರ ರಾತ್ರಿ 7.00 ಗಂಟೆಗೆ ಕ್ಷೇತ್ರದ ಪ್ರಧಾನ ದೈವ ಸಾರಲ ಪಟ್ಟದ ಕೊರಗಜ್ಜನಿಗೆ ದೊಂದಿ ಬೆಳಕಿನ (ತುಡರ ಕೋಲ) ಸೇವೆ ನಂತರ ಅಗೇಲು ಸೇವೆ, ಗಂಧ ಪ್ರಸಾದ ವಿತರಣೆ ಬಳಿಕ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಸೇರಿದ್ದರು.