ಮಂಗಳೂರು, ಮೇ. 05 : ನಾಗರಾಜ್ ಶಂಕರ್ ನಿರ್ದೇಶನದ, ಮುದೇ ಗೌಡ್ರು ನವೀನ್ ಕುಮಾರ್ ಆರ್.ಒ. ಹಾಗೂ ತೆಲಗಿ ಮಲ್ಲಿಕಾರ್ಜುನಪ್ಪ ನಿರ್ಮಾಣದ ‘ಮರಳಿ ಮನಸಾಗಿದೆ’ ಕನ್ನಡ ಚಿತ್ರ ಜುಲೈಯಲ್ಲಿ ಬಿಡುಗಡೆ ಗೊಳ್ಳಲಿದೆ ಎಂದು ನಿರ್ದೇಶಕ ನಾಗರಾಜ್, ಶಂಕರ್ ಶನಿವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು, ಚಿತ್ರದಲ್ಲಿ ಐದು ಹಾಡುಗಳಿದ್ದು, ಬಿಡುಗಡೆಗೊಂಡಿರುವ ಎರಡು, ಹಾಡುಗಳಿಗೆ ಉತ್ತಮ ಸ್ಪಂದನೆ ದೊರೆತ್ತಿದೆ. ಮೂರನೇ ಹಾಡು ಏನಿದು ರೋಮಾಂಚನ ಉಡುಪಿ ಯಲ್ಲಿ ಮೇ,3ರಂದು ಬಿಡುಗಡೆಗೊಂಡಿದೆ. ಚಿತ್ರದ ನಾಯಕ ನಾಗಿ ಅರ್ಜುನ್ ವೇದಾಂತ್ ನಾಯಕಿಯಾಗಿ ಸ್ಮೃತಿ ವೆಂಕಟೇಶ್ಅಭಿನಯಿಸಿದ್ದಾರೆ ಅವರು, ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಚಿತ್ರ ನಿರ್ಮಾಪಕ ನವೀನ್ ಕುಮಾರ್ ಮಾತಾನಾಡಿ ಜುಲೈ- ಆಗಸ್ಟ್ ನಡುವೆ ಚಿತ್ರ ಬಿಡುಗಡೆ ಗೊಳ್ಳಲಿದ್ದು, ಪೂರ್ವಭಾವಿಯಾಗಿ ರಾಜ್ಯಾದ್ಯಂತ ಪ್ರಚಾರ ಕಾರ್ಯ ನಡೆದಿದೆ. ಚಿತ್ರದಲ್ಲಿ ನಟ ಭೋಜರಾಜ ವಾಮಂಜೂರು, ಟಿ.ಎಸ್.ನಾಗಾಭರಣ, ನಿರೀಕ್ಷಾ ಶೆಟ್ಟಿ, ಮಾನಸಿ ಸುಧೀರ್, ಸೀರುಂಡೆ ರಘು, ಸ್ವಾತಿ, ರೋಹನ್ ಅಭಿನಯಿಸಿದ್ದಾರೆ ಎಂದರು.
ಆಶಿತ್ ಸುಬ್ರಹ್ಮಣ್ಯ ಸಹ ನಿರ್ದೇಶನವಿದೆ. ವಿನು ಮನಸು ಸಂಗೀತ, ಕೆ.ಕಲ್ಯಾಣ್, ಆಶಿತ್ ಸುಬ್ರಹ್ಮಣ್ಯ, ನಾಗರಾಜ ಶಂಕರ್, ಹರೀಶ್ ಎಸ್. ಸಾಹಿತ್ಯ, ಹಾಲೇಶ್ ಎಸ್. ಛಾಯಾಗ್ರಹಣವಿದೆ, ಹರೀಶ್ ಕೊಮ್ಮೆ ಸಂಕಲನ, ಅಲ್ಟಿಮೇಟ್ ಶಿವು ಸಾಹಸ ಒದಗಿಸಿದ್ದಾರೆ ಎಂದು ತಿಳಿಸಿದರು.