ಉಡುಪಿ, ಮೇ. 26 : ಅಜ್ಜರಕಾಡಿನ ಮಹಿಳೆಯೊಬ್ಬರು ಚರ್ಚ್‌ನಲ್ಲಿ ಪ್ರಾರ್ಥನೆ ಮಾಡುತ್ತಿದ್ದಾಗ ಕುಸಿದು ಬಿದ್ದು ಮೃತಪಟ್ಟ ಘಟನೆ ಮೇ. 25 ರವಿವಾರ ನಡೆದಿದೆ.
ಮೃತರನ್ನು ಕುಂದಾಪುರ ಖಾರ್ವಿ ಕೆಳಕೇರಿ ನಿವಾಸಿ ಶಾಂತಿ (52) ಎಂದು ಗುರುತಿಸಲಾಗಿದೆ.
ರವಿವಾರ ಶಾಂತಿ ಅವರು ಅಜ್ಜರಕಾಡಿನ ಚರ್ಚ್‌ನಲ್ಲಿ ಬೆಳಿಗ್ಗೆ ಪ್ರಾರ್ಥನೆ ಮಾಡುತ್ತಿರುವ ಸಂದರ್ಭದಲ್ಲಿ ಕುಸಿದಿದ್ದು, ಆಸ್ಪತ್ರೆಗೆ ಕರೆದೊಯ್ಯಲಾಯಿತುಆಗಲೇ ಮೃತ ಹೊಂದಿದ್ದಾರೆ ಎಂದು ವೈದ್ಯರು ಘೋಷಣೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











