ಉಡುಪಿ, ಜು. 11 : ಸಮುದ್ರದಲ್ಲಿನ ಅಲೆಗಳ ಅಬ್ಬರದಿಂದಾಗಿ ಸಾಂಪ್ರದಾಯಿಕ ಮೀನುಗಾರಿಕಾ ದೋಣಿ ಮಗುಚಿ ಒಬ್ಬ ಮೀನುಗಾರ ಮೃತಪಟ್ಟ ಘಟನೆ ಉಡುಪಿಯ ಪಡುಕೆರೆ ಕಡಲತೀರದಲ್ಲಿ ಸಂಭವಿಸಿದೆ.
ಮೃತರನ್ನು ಪಿತ್ರೋಡಿ ನಿವಾಸಿ ನೀಲು (48ಎಂದು ಗುರುತಿಸಲಾಗಿದೆ.
ಸಮುದ್ರದಲ್ಲಿ ಮೀನುಗಾರಿಕಾ ದೋಣಿ ಮಗುಚಿದ ಸಂದರ್ಭದಲ್ಲಿ ನೀಲು ಅವರು ಸಮುದ್ರಕ್ಕೆ ಎಸೆಯಲ್ಪಟ್ಟಿದ್ದಾರೆ. ಈ ವೇಳೆ ಅವರು ಮೀನುಗಾರಿಕಾ ಬಲೆಗಳು ಮತ್ತು ಇತರ ಸಲಕರಣೆಗಳಲ್ಲಿ ಸಿಲುಕಿಹಾಕಿಕೊಂಡಿದ್ದ ಪರಿಣಾಮ ನೀರಿನಿಂದ ಹೊರಬರಲು ಸಾಧ್ಯವಾಗಲಿಲ್ಲ. ಉಳಿದ ಮೀನುಗಾರರು ಅವರನ್ನು ಬಲೆಯಿಂದ ಬಿಡಿಸಿ ದಡಕ್ಕೆ ತಂದು ನೋಡಿದಾಗ, ಅವರು ಮೃತಪಟ್ಟಿರುವುದು ಕಂಡುಬಂದಿದೆ ಎನ್ನಲಾಗಿದೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.