ಮಂಗಳೂರು,ಜು. 28 : ಮಂಗಳೂರಿನ ಮಾತಾ ಅಮೃತಾನಂದಮಯಿ ಮಠದಲ್ಲಿ ಗುರು ಪೂರ್ಣಿಮಾ ಆಚರಣೆಯ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಶ್ರೀ ಪ್ರಮೋದ್ ಮಧ್ವರಾಜ್ ಭಾಗವಹಿಸಿ ಮಠದ ಆವರಣದಲ್ಲಿ ಕೈಗೊಳ್ಳಲಾದ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಲೋಕಾರ್ಪಣೆಗೊಳಿಸಿದರು.
ಮಠದ ಮುಖ್ಯಸ್ಥರಾದ ಸ್ವಾಮಿನಿ ಮಂಗಳಾಮೃತ ಪ್ರಾಣ ಇವರ ದಿವ್ಯ ಉಪಸ್ಥಿತಿಯಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಉದ್ಘಾಟನಾ ಭಾಷಣ ಮಾಡಿದ ಅವರು ಅಮ್ಮ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರಿಂದ ಪ್ರತಿಷ್ಠಿತ ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರವು ವಿಶೇಷ ಸ್ಥಾನವನ್ನು ಪಡೆದಿದೆ. ನಾಲ್ಕು ದಿಕ್ಕುಗಳಿಗೆ ಅಭಿಮುಖವಾಗಿ ಒಂದೇ ಕಲ್ಲಿನಿಂದ ಕೆತ್ತಲ್ಪಟ್ಟ ವಿಗ್ರಹ ಅಮ್ಮನವರ ಸಂಕಲ್ಪದಿಂದ ಬಹಳ ಸುಂದರವಾಗಿ ಮೂಡಿಬಂದಿದೆ. ಇದು ದೇವರು ಸರ್ವವ್ಯಾಪಿ ಎಂಬ ಮಹತ್ತರ ಸಂದೇಶ ನೀಡುತ್ತಿದೆ.ಅಮ್ಮನ ಅನುಗ್ರಹದಿಂದ ಇಲ್ಲಿ ನಡೆಯುತ್ತಿರುವ ಮಾನವೀಯ ಸೇವಾ ಉಪಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಯುವ ಮೋರ್ಚಾ ಅಧ್ಯಕ್ಷ ನಂದನ್ ಮಲ್ಯರವರು ಅತಿಥಿಯಾಗಿ ಭಾಗವಹಿಸಿ ಆಶ್ರಮದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸೇವಾಸಮಿತಿಯ ಅಧ್ಯಕ್ಷ ಸುರೇಶ್ ಅಮೀನ್ ಗೌರವಾರಪಣೆಯೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು.ಡಾ.ದೇವದಾಸ್ ಕಾರ್ಯಕ್ರಮ ನಿರೂಪಣೆ ಮಾಡಿದರು.
ಈ ಸಂದರ್ಭದಲ್ಲಿ ಡಾ.ಜೀವರಾಜ್ ಸೊರಕೆ, ಡಾ.ವಸಂತ ಕುಮಾರ್ ಪೆರ್ಲ,ಮುರಳೀಧರ್ ಶೆಟ್ಟಿ, ಡಾ ಸನತ್ ಹೆಗ್ಡೆ,ಶ್ರುತಿ ಹೆಗ್ಡೆ,ಸಿ.ಎ.ರಾಮನಾಥ್ ,ಡಾ ಸುಚಿತ್ರಾ ರಾವ್,ಪ್ರೇಮರಾಜ್,ಪ್ರವೀಣ್ ಶಬರೀಶ್ ಮೊದಲಾದ ಪದಾಧಿಕಾರಿಗಳು ಭಾಗವಹಿಸಿದ್ದರು.