ಮಂಗಳೂರು,ಮಾ.16 : ಸಮಾಜಮುಖಿ ಕಾರ್ಯಕ್ರಮಗಳಿಗೆ ಸ್ಪಂದಿಸುವ, ಮಾನಸಿಕ ಅಸ್ವಸ್ಥರಿಗೆ ಉಭಯಹಸ್ತ ನೀಡಿ ಅಶ್ರಯದಾತರಾಗಿ ಹೆಸರುವಾಸಿಯಾಗಿರುವ ಸ್ನೇಹಾಲಯ ಚ್ಯಾರಿಟೇಬಲ್ ಸಂಸ್ಥೆ ಮಂಜೆಶ್ವರ ಇದರ ವಿವಿಧ ಅಭಿವೃದ್ಧಿ ಯೋಜನೆಗಗಳಿಗೆ ಆಧಾರವಾಗಿ ಸಂಗೀತಗಾರ ಕೆವಿನ್ ಮಿಸ್ಕಿತ್ ಇವರ 54ನೇ ಕೊಂಕಣಿ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ.
ಇದೇ ಜೂನ್ 21ನೇ ಭಾನುವಾರ ಸಂಜೆ 6.00 ಘಂಟೆಗೆ ಸರಿಯಾಗಿ ಮಂಗಳೂರಿನ ಟೌನ್ ಹಾಲ್ ಸಭಾಂಗಣದಲ್ಲಿ ಈ ಕಾರ್ಯಕ್ರಮ ನೆರವೇರಲಿದೆ . ಈ ಪ್ರಯುಕ್ತ ಪ್ರಚಾರ ಘೊಷಣೆಯ ಪೊಸ್ಟರ್ ಬಿಡುಗಡೆ ಕಾರ್ಯಕ್ರಮ ಸ್ನೇಹಾಲಯ ಸಂಸ್ಥೆಯ ಮಂಗಳೂರಿನ ಪ್ರಧಾನ ಕಛೇರಿಯಲ್ಲಿ ನಡೆಯಿತು.
ಸಂಸ್ಥೆಯ ಸ್ಥಾಪಕರೂ, ಅಧ್ಯಕ್ಷರು ಆಗಿರುವ ಜೋಸೆಫ್ ಕ್ರಾಸ್ತಾ ಪೊಸ್ಟರ್ ಬಿಡುಗಡೆ ಮಾಡಿ ಸಾರ್ವಜನಿಕರ ಸಂಪೂರ್ಣ ಸಹಕಾರ ಕೋರಿದರು.
ಸಭಾರಂಭದಲ್ಲಿ ಸ್ನೇಹಾಲಯದ ಹಲವು ಅಭಿಮಾನಿಗಳ ಉಪಸ್ಥಿಯಲ್ಲಿ = ಶೆಲ್ಡಾನ್ ಕ್ರಾಸ್ತ, ಸಂಸ್ಥೆಯ ಕಾರ್ಯದರ್ಶಿಗಳಾದ ಒಲಿವಿಯಾ ಕ್ರಾಸ್ತಾ, ಸಂಗೀತಗಾರ ಕೆವಿನ್ ಮಿಸ್ಕಿತ್, ಸಲಹೆಗಾರರಾದ ಜಿಯೋ ಡಿ ಸಿಲ್ವ, ಅಗ್ರಾರ್, ಜಾಕ್ಸನ್ ಕಿನ್ನಿಗೋಳಿ ಹಾಗು ಇತರರು ಹಾಜರಿದ್ದರು.










