ಉಡುಪಿ, ಜೂ. 24 : ಲೊಂಬಾರ್ಡ್ ಸ್ಮಾರಕ ಆಸ್ಪತ್ರೆಯಲ್ಲಿ, ಲೊಂಬಾರ್ಡ್ ಹೋಮ್ ಕೇರ್ ಸರ್ವಿಸ್ ಮತ್ತು ನೇತ್ರಚಿಕಿತ್ಸಾ ವಿಭಾಗದ ಸೌಲಭ್ಯಗಳನ್ನು ಜೂ 21ರಂದು ಶುಕ್ರವಾರ ಆಸ್ಪತ್ರೆ ಆವರಣದಲ್ಲಿ ಉದ್ಘಾಟನೆಗೊಂಡಿತು.
ನೂತನ ಸೇವೆಗಳನ್ನು ಉದ್ಘಾಟಿಸಿದ ಸಿಎಸ್ಎ ಕರ್ನಾಟಕ ದಕ್ಷಿಣ ಧರ್ಮ ಪ್ರಾಂತ್ಯದ ಬಿಷಪ್ ಅತಿ ವಂ.ಹೇಮಚಂದ್ರ ಕುಮಾರ್ ಆಶೀವರ್ಚನ ನೀಡಿ, ನಮಗೆ ದೊರೆತ ವಿದ್ಯೆ ಸೇರಿದಂತೆ ಎಲ್ಲ ರೀತಿಯ ಸ್ಥಾನಮಾನಗಳು ದೇವರು ಕೊಟ್ಟ ಕೊಡುಗೆಯಾಗಿದೆ. ಅದನ್ನು ಸೇವೆಯ ಮೂಲಕ ಸಮಾಜಕ್ಕೆ ನೀಡುವ ಕಾರ್ಯ ಮಾಡಬೇಕು. ಈ ಮೂಲಕ ದೇವರನ್ನು ಸ್ಮರಿಸಬೇಕು. ದೀಪ ಬೆಳಗಿಸಿ ಬುಟ್ಟಿಯ ಕೆಳಗೆ ಇಟ್ಟರೆ ಪ್ರಯೋಜನವಿಲ್ಲ. ಕ್ರಿಶ್ಚಿಯನ್ ಸಮುದಾಯವು ತಮ್ಮನ್ನು ತಾವು ಬೆಳಗಿಸುವ ಮತ್ತು ಜಗತ್ತನ್ನು ಬೆಳಗಿಸುವ ಮೇಣದಬತ್ತಿಗಳಂತೆ ಬಹಳ ಹಿಂದಿನಿಂದಲೂ ಸೇವೆಯಲ್ಲಿ ತೊಡಗಿಸಿಕೊಂಡಿದೆ.ಇಲ್ಲಿ ಹೋಮ್ ಕೇರ್ ಹಾಗೂ ನೇತ್ರ ವಿಭಾಗದ ಸೇವೆಗಳನ್ನು ಆರಂಭಿಸಿರುವುದು ಅತ್ಯುತ್ತಮವಾಗಿದೆ. ಈ ಆಸ್ಪತ್ರೆ ಇನ್ನಷ್ಟು ವಿಸ್ತಾರವಾಗಲಿ ಎಂದು ಹೇಳಿದರು.
ಸಿ ಎಸ್ ಐ ಕರ್ನಾಟಕ ದಕ್ಷಿಣ ಧರ್ಮಪ್ರಾಂತ್ಯದ ಬಿಷಪ್ ಅತಿ ವಂದನೀಯ ಹೇಮಚಂದ್ರ ಕುಮಾರ್, ಜೊತೆಗೆ ಗಣ್ಯರಾದ ಡಾ ನರೇಂದ್ರ ಶೆಣೈ, ಸಲಹೆಗಾರ ನೇತ್ರತಜ್ಞ ಎಲ್ಎಂಎಚ್; ಡಾ ಆರ್ಥರ್ ರೋಡ್ರಿಗಸ್, ಸಲಹೆಗಾರ ನೇತ್ರತಜ್ಞ ಎಲ್ಎಂಎಚ್, ನಿರ್ದೇಶಕ ಎಲ್ಎಂಎಚ್; ಡಾ ಗಣೇಶ್ ಕಾಮತ್, ಹಿರಿಯ ವೈದ್ಯಾಧಿಕಾರಿ ಮತ್ತು ಭಾರತಿ ಹೇಮಚಂದ್ರಕುಮಾರ್ ಉಪಸ್ಥಿತರಿದ್ದರು.