Close Menu
Navaloka Media News Mangalore| Kannada Online News PortalNavaloka Media News Mangalore| Kannada Online News Portal
    Our Picks

    ಪುತ್ತೂರು: ವಿವಾಹಿತ ಯುವಕ ಆತ್ಮಹತ್ಯೆ

    July 29, 2025

    ದೇವರು ಸರ್ವವ್ಯಾಪಿ ಎಂಬ ಮಹತ್ತರ ಸಂದೇಶ ನೀಡುತ್ತಿದೆ ಬ್ರಹ್ಮಸ್ಥಾನಂ- ಕ್ಷೇತ್ರ:ಪ್ರಮೋದ್ ಮಧ್ವರಾಜ್

    July 28, 2025

    ಆಗಸ್ಟ್ 01 : ‘ಎಲ್ಟು ಮುತ್ತಾ’ ಕನ್ನಡ ಚಲನಚಿತ್ರ ಬಿಡುಗಡೆ

    July 27, 2025

    Subscribe to Updates

    Get the latest creative news from FooBar about art, design and business.

    What's Hot

    ಪುತ್ತೂರು: ವಿವಾಹಿತ ಯುವಕ ಆತ್ಮಹತ್ಯೆ

    July 29, 2025

    ದೇವರು ಸರ್ವವ್ಯಾಪಿ ಎಂಬ ಮಹತ್ತರ ಸಂದೇಶ ನೀಡುತ್ತಿದೆ ಬ್ರಹ್ಮಸ್ಥಾನಂ- ಕ್ಷೇತ್ರ:ಪ್ರಮೋದ್ ಮಧ್ವರಾಜ್

    July 28, 2025

    ಆಗಸ್ಟ್ 01 : ‘ಎಲ್ಟು ಮುತ್ತಾ’ ಕನ್ನಡ ಚಲನಚಿತ್ರ ಬಿಡುಗಡೆ

    July 27, 2025
    Facebook X (Twitter) Instagram
    Navaloka Media News Mangalore| Kannada Online News PortalNavaloka Media News Mangalore| Kannada Online News Portal
    • Home
    • Local News
    • State News
    • National/International news
    • Film News
    • Contact Us
    Facebook X (Twitter) Instagram
    Navaloka Media News Mangalore| Kannada Online News PortalNavaloka Media News Mangalore| Kannada Online News Portal
    Home»Uncategorized»ಡಿ. 23 ರಿಂದ ಕಲರ್ಸ್ ಕನ್ನಡದಲ್ಲಿ ಹೊಸ ಧಾರಾವಾಹಿ ‘ನೂರು ಜನ್ಮಕೂ’
    Uncategorized

    ಡಿ. 23 ರಿಂದ ಕಲರ್ಸ್ ಕನ್ನಡದಲ್ಲಿ ಹೊಸ ಧಾರಾವಾಹಿ ‘ನೂರು ಜನ್ಮಕೂ’

    adminBy adminDecember 22, 2024
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter LinkedIn Pinterest Email
    Navaloka media news
    Navaloka media news

    ಬೆಂಗಳೂರು,ಡಿ.22 : ಕಲರ್ಸ್ ಕನ್ನಡದಲ್ಲಿ ಪ್ರಸಾರಗೊಂಡಿರುವ ಹೃದಯಸ್ಪರ್ಶಿ ಧಾರಾವಾಹಿಯವರ ಮತ್ತೊಂದು ಹೊಸ ದೈನಿಕ ಧಾರಾವಾಹಿ ನೂರು ಜನ್ಮಕೂ ಇದೇ 23 ರಿಂದ ಪ್ರತಿ ರಾತ್ರಿ 8. 30 ಕ್ಕೆ ಪ್ರಸಾರಗೊಳ್ಳಲಿದೆ. ಹೊಸ ಧಾರಾವಾಹಿಯು ವಿಭಿನ್ನ ಕಥೆಯನ್ನು ಒಳಗೊಂಡಿದೆ.

    ಪ್ರತಿಷ್ಠಿತ ಕದಂಬ ವಂಶದ ಉತ್ತರಾಧಿಕಾರಿ ಚಿರಂಜೀವಿ ಹಾಗೂ ಮೈತ್ರಿ ಎಂಬ ಸಾಧಾರಣ ಕುಟುಂಬದ ಹುಡುಗಿಯ ನಡುವಿನ ಪ್ರೇಮದ ಕಥೆ ಇದು. ಚಿರಂಜೀವಿ ಅತಿಮಾನುಷ ಶಕ್ತಿಗಳ ಹಿಡಿತಕ್ಕೆ ಸಿಕ್ಕು ನಲುಗುವಾಗ ರಾಘವೇಂದ್ರ ಸ್ವಾಮಿಯ ಪರಮಭಕ್ತೆ ಮೈತ್ರಿ ತನ್ನ ಶ್ರದ್ಧೆ ಹಾಗೂ ನಂಬಿಕೆಗಳ ಮುಖಾಂತರ ಅವನನ್ನು ರಕ್ಷಿಸಲು ಪಣತೊಡುತ್ತಾಳೆ. ಚಿರಂಜೀವಿಯ ಜೀವ ಕಾಪಾಡುತ್ತಲೇ ತಮ್ಮ ಪ್ರೀತಿಯನ್ನೂ ಉಳಿಸಿಕೊಳ್ಳಲು ಒದ್ದಾಡುವುದನ್ನು ತೋರಿಸಲಾಗಿದೆ.

    ‘ನೂರು ಜನ್ಮಕೂ ಧಾರಾವಾಹಿಯನ್ನುಚಿಕ್ಕಮಗಳೂರಿನ ಪರಿಸರದಲ್ಲಿ ಚಿತ್ರೀಕರಣ ಮಾಡಲಾಗಿದೆ. ಮಾನವೀಯ ಅಂತಃಕರಣ ಹಾಗೂ ಅತಿಮಾನುಷ ಶಕ್ತಿಗಳ ಅಟ್ಟಹಾಸವನ್ನು ಬಿಂಬಿಸುವ ಧಾರಾವಾಹಿ. ಉನ್ನತ ಮಟ್ಟದ ಗ್ರಾಫಿಕ್ಸ್ ಬಳಸಲಾಗಿದೆ ಎಂದು ನಿರ್ದೇಶಕರ ಮಾತು.

    ಶ್ರವಂತ್ ರಾಧಿಕಾ ನಿರ್ದೇಶನದ ಈ ಧಾರಾವಾಹಿಯಲ್ಲಿ ಹೆಸರಾಂತ ನಟನಟಿಯರ ದಂಡೇ ಇದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಗೀತಾ’ ಧಾರಾವಾಹಿಯಲ್ಲಿ ನಾಯಕ ವಿಜಯ್ ಆಗಿ ನಟಿಸಿದ್ದ ಧನುಷ್ ಗೌಡ ಇದೀಗ ‘ನೂರು ಜನ್ಮಕೂ’ ಧಾರಾವಾಹಿಯಲ್ಲಿ ಚಿರಂಜೀವಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಧಾರಾವಾಹಿಯಲ್ಲಿ ಚಿರಂಜೀವಿ, ಜಾಲಿ ಆಗಿರೋ ಮನುಷ್ಯ. ಜೀವನದಲ್ಲಿ ಏನೇ ಕಷ್ಟ ಬಂದರೂ ಸ್ಪೋರ್ಟಿವ್ ಆಗಿ ತಗೋತಾನೆ. ಫ್ಯಾಮಿಲಿ ಮ್ಯಾನ್, ಶತ್ರುಗಳನ್ನೂ ಪ್ರೀತಿಸ್ತಾನೆ. ದೆವ್ವ-ದೇವರ ಮೇಲೆ ನಂಬಿಕೆ ಇಲ್ಲ.ಮಿಸ್ ಮಂಗಳೂರು  ಶಿಲ್ಪಾ ಕಾಮತ್ ನಾಯಕಿ ಆಗಿ ಮೈತ್ರಿ ಪಾತ್ರದಲ್ಲಿ ರಂಜಿಸಲಿದ್ದಾರೆ. ಕಥಾ ನಾಯಕಿ ಮೈತ್ರಿ, ರಾಘವೇಂದ್ರ ಸ್ವಾಮಿ ಭಕ್ತೆ. ಆಶಾವಾದಿ, ಸ್ವಾಭಿಮಾನಿ.ದೆವ್ವದ ಪಾತ್ರದಲ್ಲಿ ಚಂದನ ಗೌಡ ನಟಿಸುತ್ತಿದ್ದಾರೆ. ಈ ಪಾತ್ರದ ಹೆಸರು ಕಾಮಿನಿ. ಇವಳಿಗೆ ಚಿರು ಎಂದರೆ ಪ್ರಾಣ. ಶಾರ್ಟ್ ಟೆಂಪರ್, ಹಠ ಮಾರಿ ಹಾಗೂ ಧೈರ್ಯವಂತೆ.

    ಹಿರಿಯ ನಟಿ ಗಿರಿಜಾ ಲೋಕೇಶ್, ಭಾಗ್ಯಶ್ರೀ, ಬಿ ಎಂ ವೆಂಕಟೇಶ್ ಮತ್ತು ಗಾಯಕಿ ಅರ್ಚನಾ ಉಡುಪ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜತೆಗೆ ಮಜಾ ಟಾಕೀಸ್  ರೆಮೋ ಕೂಡ ಬಣ್ಣ ಹಚ್ಚಿದ್ದಾರೆ. ಚಿತ್ರಾ ಶೆಣೈ ತಮ್ಮ ಗುಡ್ ಕಂಪನಿ ಸಂಸ್ಥೆಯಿಂದ ನೂರು ಜನ್ಮಕೂ ಧಾರಾವಾಹಿ ನಿರ್ಮಾಣ ಮಾಡುತ್ತಿದ್ದಾರೆ.

    Navaloka media news
    Navaloka media news
    Share. Facebook Twitter Pinterest LinkedIn WhatsApp Reddit Tumblr Email
    admin
    • Website

    Related Posts

    Local News July 28, 2025

    ದೇವರು ಸರ್ವವ್ಯಾಪಿ ಎಂಬ ಮಹತ್ತರ ಸಂದೇಶ ನೀಡುತ್ತಿದೆ ಬ್ರಹ್ಮಸ್ಥಾನಂ- ಕ್ಷೇತ್ರ:ಪ್ರಮೋದ್ ಮಧ್ವರಾಜ್

    Uncategorized July 20, 2025

    ಧರ್ಮಸ್ಥಳ ಪ್ರದೇಶದಲ್ಲಿ ಸರಣಿ ಹತ್ಯೆ ಆರೋಪ : ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ವರ್ಗಾಯಿಸಿ ಸರಕಾರ ಆದೇಶ

    Uncategorized June 23, 2025

    ಜೂನ್ 27 ರಂದು ಎಚ್.ಎಮ್. ಪೆರ್ನಾಲ್ ಅವರ ನಾಲ್ಕನೆಯ ಕವನ ಸಂಕಲನ ʼಜನೆಲ್ʼ ಬಿಡುಗಡೆ

    Local News June 20, 2025

    ಜೂ.21-22 : ಬೆಂದೂರ್‌ವೆಲ್ನ ಸೈಂಟ್ ಸೆಬಾಸ್ಟಿಯನ್ ಸಭಾಂಗಣದಲ್ಲಿ ‘ಕುಡ್ಲ ಪೆಲಕಾಯಿ ಪರ್ಬ’

    Local News June 18, 2025

    ದ.ಕ., ಉಡುಪಿ ಜಿಲ್ಲೆಗಳ ಜಿಲ್ಲಾಧಿಕಾರಿಗಳ ವರ್ಗಾವಣೆ : ದ.ಕ. ಜಿಲ್ಲಾಧಿಕಾರಿಯಾಗಿ ದರ್ಶನ್ ಎಚ್ ವಿ , ಉಡುಪಿ ಜಿಲ್ಲಾಧಿಕಾರಿಯಾಗಿ ಸ್ವರೂಪ ಟಿ.ಕೆ ನೇಮಕ

    Uncategorized June 17, 2025

    ಕುಂದಾಪುರ: ಬಸ್‌ಗೆ ಡಿಕ್ಕಿಯಾಗಿ ಹೊತ್ತಿ ಉರಿದ ಬೈಕ್ – ಸವಾರ ಸಾವು

    Comments are closed.

    Demo
    Don't Miss
    Local News July 29, 2025

    ಪುತ್ತೂರು: ವಿವಾಹಿತ ಯುವಕ ಆತ್ಮಹತ್ಯೆ

    ಪುತ್ತೂರು,ಜು. 29 : ವಿವಾಹಿತ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿನ ಗಣೇಶ್ ಬಾಗ್…

    ದೇವರು ಸರ್ವವ್ಯಾಪಿ ಎಂಬ ಮಹತ್ತರ ಸಂದೇಶ ನೀಡುತ್ತಿದೆ ಬ್ರಹ್ಮಸ್ಥಾನಂ- ಕ್ಷೇತ್ರ:ಪ್ರಮೋದ್ ಮಧ್ವರಾಜ್

    July 28, 2025

    ಆಗಸ್ಟ್ 01 : ‘ಎಲ್ಟು ಮುತ್ತಾ’ ಕನ್ನಡ ಚಲನಚಿತ್ರ ಬಿಡುಗಡೆ

    July 27, 2025

    ಆ.1-2: ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ‘ಆಳ್ವಾಸ್ ಪ್ರಗತಿ-2025’ ಬೃಹತ್ ಉದ್ಯೋಗ ಮೇಳ

    July 26, 2025
    Stay In Touch
    • Facebook
    • Twitter
    • Pinterest
    • Instagram
    Facebook X (Twitter) Instagram Pinterest
    • Home
    • Local News
    • State News
    • National/International news
    • Film News
    • Contact Us
    © 2025 All Right Reserved. Designed by Blueline Computers.

    Type above and press Enter to search. Press Esc to cancel.