ಮಂಗಳೂರು, ಡಿ.23 : ನಂದಿನಿ ನದಿಯ ಹಿನ್ನೀರಿನ ತಟದಲ್ಲಿ ರೋಹನ್ ಎಸ್ಟೇಟ್ ಮುಕ್ಕ ಬಡಾವಣೆ ರ್ಮಾಣವಾಗುತ್ತಿದೆ ಪರಿಸರದ ಶ್ರೀಮಂತಿಕೆಯ ಜತೆಗೆ ಆಕರ್ಷಕವಾಗಿ ಬಡಾವಣೆಯು ಮೂಡಿ ಬರುತ್ತಿದೆ. ಪ್ರಕೃತಿ ಜತೆಗೆ ಮಿಳಿತವಾದ ಬದುಕಿಗಾಗಿ ಈ ಬಡಾವಣೆಯನ್ನು ವಿನ್ಯಾಸಗೊಳಿಸಲಾಗಿದೆ. ಇದೊಂದು ಪರಿಪೂರ್ಣವಾದ ರೆಸಾರ್ಟ್ ಮಾದರಿಯ ಬಡಾವಣೆಯಾಗಿ ರೂಪುಗೊಂಡಿದೆ.
ನದಿ, ಸಮುದ್ರ ಹಾಗೂ ರಾಷ್ಟ್ರೀಯ ಹೆದ್ದಾರಿಯ ನಡುವೆ ವಸತಿ ಬಡಾವಣೆ ನಿರ್ಮಾಣವಾಗುತ್ತಿದೆ. ರೋಹನ್ ಎಸ್ಟೇಟ್ ಮುಕ್ಕ. ಇದು ರೆಸಾರ್ಟ್ ಅಲ್ಲ. ರೆಸಾರ್ಟ್ ಶೈಲಿಯ ವಸತಿ ಬಡಾವಣೆ. ಶ್ರೀಮಂತಿಕೆ, ಐಶಾರಾಮಿ ಮಾದರಿ ಎಂಬಂತೆ ಪ್ರಕೃತಿಯ ಮಡಿಲಿನಲ್ಲಿ ತಲೆ ಎತ್ತಿ ನಿಂತಿರುವ ವಸತಿ ಬಡಾವಣೆಯಾಗಿದೆ. ಇಲ್ಲಿ ವಾಸಿಸುವವರಿಗೆ ರೆಸಾರ್ಟ್ ಶೈಲಿಯ ಜೀವನದ ಅನುಭವ ಸಿಗಲಿದೆ. ನದಿ ಕಿನಾರೆಯಲ್ಲಿ ಸೂಕ್ತ ರೀತಿಯ ತಡೆ ಗೋಡೆಯನ್ನು ಪ್ರವಾಸೋದ್ಯಮದ ನೆಲೆಯಲ್ಲಿ ಆಕರ್ಷಕವಾಗಿ ನಿರ್ಮಾಣ ಮಾಡಲಾಗಿದೆ.
ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೊಸ ವಿಚಾರವನ್ನು ತಂದು ಆ ಮೂಲಕ ಕ್ರಾಂತಿ ಮಾಡಿದ ಸಂಸ್ಥೆ ಎಂದರೆ ಕರಾವಳಿಯ ರೋಹನ್ ಕಾರ್ಪೋರೇಷನ್. ಈ ರೀತಿಯ ವಸತಿ ಬಡಾವಣೆ ನದಿ ಕಿನಾರೆಯಲ್ಲಿ ಸಿಗುವುದೇ ಅಪರೂಪ.ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹೊಸ ಮನ್ವಂತರವನ್ನು ಸೃಷ್ಟಿಸಿರುವ ಮಂಗಳೂರಿನ ರೋಹನ್ ಕಾರ್ಪೋರೇಷನ್, ನಗರದ ಪ್ರತಿಷ್ಠಿತ ಪ್ರದೇಶದಲ್ಲಿ, ಅತಿ ಹೆಚ್ಚು ವಸತಿ ಸಮುಚ್ಚಯ ಹಾಗೂ ವಸತಿ ಬಡಾವಣೆಯನ್ನು ಆಕರ್ಷಕವಾಗಿ ನಿರ್ಮಾಣ ಮಾಡಿದ ಸಂಸ್ಥೆ ಎಂಬ ಹೆಗ್ಗಳಿಗೆ ಪಾತ್ರವಾಗಿದೆ.
ಬಿಜೈ ಬಳಿ ರೋಹನ್ ಸಿಟಿ ಎಂಬ ಬೃಹತ್ ಯೋಜನೆ ಕೈಗೆತ್ತಿಕೊಂಡು ವಾರ್ಷಿಕವಾಗಿ ಶೇ. 7.5ರಷ್ಟು ಖಾತರಿ ರಿಟರ್ನ್ ಅನ್ನು ಗ್ರಾಹಕರಿಗೆ ನೀಡುತ್ತಿರುವ ಹೆಗ್ಗಳಿಕೆಯಾಗಿದೆ. ಮಂಗಳೂರು ನಗರದ ಪ್ರಮುಖ ಪ್ರದೇಶದಲ್ಲಿ ಆಕರ್ಷಕ ವಸತಿ ಸಮುಚ್ಚಯ ನಿರ್ಮಾಣ ಮಾಡಿ, ನಗರಕ್ಕೆ ಹೊಸ ರೂಪವನ್ನು ಸಂಸ್ಥೆಯು ನೀಡುತ್ತಿದೆ ಎಂದು ರೋಹನ್ ಕಾರ್ಪೋರೇಶನಿನ ಆಡಳಿತ ನಿರ್ದೇಶಕರಾದ ರೋಹನ್ ಮೊಂತೆರೊ ಅವರು ನಗರದ ಒಸಿಯನ್ ಪರ್ಲ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ರೋಹನ್ ಎಸ್ಟೇಟ್ ಮುಕ್ಕ – ವಿಶೇಷತೆಗಳು:
ನದಿ ತೀರದಲ್ಲಿನ ವಸತಿ ಬಡಾವಣೆ,ಗೇಟೆಡ್ ಕಮ್ಯೂನಿಟಿ,ಅಂತಾರಾಷ್ಟ್ರೀಯ ಗುಣಮಟ್ಟದ ಕ್ಲಬ್ ಹೌಸ್,ಮರೀನಾ-ಮನರಂಜನಾ ಬೋಟಿಂಗ್ ಚಟುವಟಿಕೆಗಳ ತಾಣ,ಇನ್ಫಿನಿಟಿ ಈಜುಕೊಳ,ಮಕ್ಕಳಿಗೆ ಪ್ರತ್ಯೇಕ ಈಜುಕೊಳ,ಬಡಾವಣೆಯೊಳಗೆ ಫ್ಯಾಮಿಲಿ ರೆಸ್ಟೋರೆಂಟ್,ಸೈಕ್ಲಿಂಗ್ ಟ್ರ್ಯಾಕ್,ವಾಕಿಂಗ್ ಟ್ರ್ಯಾಕ್,ಔಟ್ಡೋರ್ ಜಿಮ್,ಯೋಗ ಲಾನ್,ಮೆಡಿಟೇಷನ್ ಸೆಂಟರ್,ಸ್ಪಾ,ಲೈಫ್ ಸೈಜ್ ಚೆಸ್,ಮಕ್ಕಳಿಗೆ ಆಟದ ಮೈದಾನ,ಸ್ಕೇಟಿಂಗ್ ರಿಂಕ್,ಬ್ಯಾಡ್ಮಿಂಟನ್ ಕೋರ್ಟ್,ಬಿಲಿಯಡ್ರ್ಸ್,ಸಭಾಂಗಣ,ಲಾಡ್ಜಿಂಗ್,ಆ್ಯಂಪಿಥಿಯೇಟರ್,ಸುರಕ್ಷತೆ ದೃಷ್ಟಿಯಿಂದ ಬಡಾವಣೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ, ಬೃಹತ್ ಕಾಂಪೌಂಡ್ ಮತ್ತು ಸುರಕ್ಷತಾ ಗೇಟ್.40 ಅಡಿ ಕಾಂಕ್ರೀಟ್ ಮುಖ್ಯ ರಸ್ತೆ,30 ಅಡಿ ಕಾಂಕ್ರೀಟ್ ಒಳ ರಸ್ತೆ,ಆಕರ್ಷಕ ಸೋಲಾರ್ ಬೀದಿ ದೀಪ ಅಳವಡಿಕೆ,ಪ್ರಧಾನ ದ್ವಾರದಲ್ಲಿ ದಿನದ 24 ಗಂಟೆಯೂ ಸೆಕ್ಯೂರಿಟಿ ವ್ಯವಸ್ಥೆ,ಆಕರ್ಷಕ ಲ್ಯಾಂಡ್ ಸ್ಕೇಪಿಂಗ್,ವಾಸ್ತು ಪ್ರಕಾರ ಪ್ರತಿ ನಿವೇಶನಕ್ಕೂ ಸಂಪರ್ಕ,ಮಳೆ ನೀರು ಕೊಯ್ಲು, ನೀರು ಶುದ್ಧೀಕರಣ ಘಟಕ,ಭೂಗತ ಒಳಚರಂಡಿ ಪೈಪ್ಲೈನ್ ,ಹೂಡಿಕೆ ಮತ್ತು ಮನೆ ನಿರ್ಮಾಣ ಎರಡಕ್ಕೂ ಯೋಗ್ಯ,ಬ್ಯಾಂಕ್ ಸಾಲ ಸೌಲಭ್ಯ,ಸೂಪರ್ ಮಾರ್ಕೆಟ್,ಹಸಿರೀಕರಣಕ್ಕೆ ವಿಶೇಷ ಒತ್ತು,ಭವಿಷ್ಯದಲ್ಲೂ ಸಂಸ್ಥೆಯಿಂದಲೇ ಲೇ ಔಟ್ ನಿರ್ವಹಣೆ ಇರಲಿದೆ ಎಂದು ಅವರು ಹೇಳಿದರು.