ವಿಟ್ಲ,ಫೆ.28 : ಪತಂಜಲಿ ಯೋಗ ಶಿಕ್ಷಣ ಫೌಂಡೇಶನ್ ಸಹಯೋಗದಲ್ಲಿ ಶಿವರಾತ್ರಿ ಪ್ರಯುಕ್ತ ಶಿವರಾತ್ರಿ ಜಾಗರಣೆ ಮತ್ತು ಸಾಮೂಹಿಕ ಶಿವ ಯೋಗ ನಮಸ್ಕಾರವು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ನೆಡೆಯಿತು.
ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನ ಅನುವಂಶಿಕ ಮೊಕ್ತೇಸರ ಜಯರಾಮ ಬಲ್ಲಾಳ್ ಮತ್ತು ಅರಮನೆಯ ಕೃಷ್ಣಯ್ಯ ಬಲ್ಲಾಳ್ ಉದ್ಘಾಟಿಸಿ ಶುಭ ಹಾರೈಸಿದರು.
ಜಾಗರಣೆಯು ರಾತ್ರಿ 9.30ರಿಂದ ಭಜನೆಯೋಂದಿಗೆ ಅರಂಭವಾದ 108ಬಾರಿ ಮೃತ್ಯುಂಜಯ ಜಪ,1008ಬಾರಿ ಶಿವ ಪಂಚಾಕ್ಷರಿ ಪಠಣೆ, ಶಿವಷ್ಟೋತ್ತರ ಶತನಾಮಾನಿ ಪಠಣೆ, ಹಾಗೂ ಬಿಲ್ವ ಪತ್ರ ಅರ್ಚನೆಯೋಂದಿಗೆ ಒಟ್ಟು 4ಅವೃತ್ತಿಗಳಲ್ಲಿ 11ಯೋಗ ಶಿವ ನಮಸ್ಕಾರವು ಶಿವ ಸ್ತೋತ್ರ ಪಠಣದೊಂದಿಗೆ 6.00ಕ್ಕೆ ಕಾರ್ಯಕ್ರಮ ಸಮಾಪನಗೊಂಡಿತು.
ಸುಮಾರು 200ಕ್ಕೂ ಮಿಕ್ಕಿ ಸಂಖ್ಯೆಯಲ್ಲಿ ವಿಟ್ಲ,ಪುಣಚ,ಕಾಪುಮಜಲು, ಕೆಲಿಂಜ, ಮಾಮೇಶ್ವರ, ಭಾಗದ ಯೋಗ ಬಂಧುಗಳು ಭಾಗವಹಿಸಿದ್ದರು.
ಶ್ರೀ ಕ್ಷೇತ್ರದಲ್ಲಿ ಶಿಸ್ತಿಬದ್ದವಾಗಿ ಯೋಗ ಶಿವ ನಮಸ್ಕಾರ ಮಾಡಲಾಯಿತು. ಜಿಲ್ಲಾ ಸಹ ಸಂಚಾಲಕರಾದ ಶ್ರೀಮತಿ ಮಾಧುರಿ , ವಿಟ್ಲ ನಗರದ ಪ್ರಮುಖರಾದ ಶ್ರೀಮತಿ ಮೀರಾ, ಪ್ರಕಾಶ ಅಣ್ಣಡ್ಕ ಇವರು ಶಿಕ್ಷಣ ವಿಧಿಯ ಮಾರ್ಗದರ್ಶನ ನೀಡಿದರು.
ನಿಶಾ ಅಮೃತ ವಚನ ವಾಚಿಸಿದರು. ಮಹೇಶ ಪಂಚಾಂಗ ಪಠಿಸಿದರು. ಮಾನಸಿಕ ಸಿದ್ಧತೆ ಶ್ವಾಸ ಮತ್ತು ಉಸಿರಾಟದ ಕ್ರಿಯೆಗಳು ಮತ್ತು 4ಅವೃತ್ತಿಯಲ್ಲಿ ಶಿವ ನಮಸ್ಕಾರವನ್ನು ವಿಟ್ಲ ನಗರದ ವಿವಿಧ ಶಾಖೆ ಯೋಗ ಶಿಕ್ಷಕರು ಪ್ರಾತ್ಯಕ್ಷಿಕೆಯಲ್ಲಿ ಜೋಡಿಸಿಕೊಂಡರು.
ಮೀರಾ ಸ್ವಾಗತಿಸಿ ಕಾರ್ಯಕ್ರಮದ ಸಂಚಾಲಕ ತಿರುಮಲೇಶ್ವರ ವಂದಿಸಿದರು. ಪ್ರಾಂತ ಸಂಘಟನಾ ಪ್ರಮುಖರಾದ ಹರೀಶ ಕೋಟ್ಯಾನ್, ಜಿಲ್ಲಾ ಸಂಚಾಲಕ ನಾರಾಯಣ ಪಾವಂಜೆ, ಜಿಲ್ಲಾ ಪ್ರಮುಖರಾದ ಹರೀಶ್ ಅಂಚನ್,ಮತ್ತು ಪ್ರತಾಪ್, ವಿಟ್ಲ ನಗರದ ಪ್ರಮುಖರು ಮತ್ತು ಎಲ್ಲಾ ಶಾಖೆಯ ಯೋಗ ಬಂಧುಗಳು ಭಾಗವಹಿಸಿದ್ದರು..