ಮಂಗಳೂರು, ಫೆ.28 : ನಗರದ ಸಿಟಿಲೈಟ್ ಕಾಂಪ್ಲೆಕ್ಸ್ ನಲ್ಲಿ ಸಾಂಪ್ರದಾಯಿಕ ಸಿಹಿತಿನಸು ಬ್ರ್ಯಾಂಡ್ ಗಳಲ್ಲಿ ಒಂದಾಗಿರುವ ಇಂಡಿಯಾ ಸ್ವೀಟ್ ಹೌಸ್ ಇದರ 40ನೇ ಮಳಿಗೆ ಉದ್ಘಾಟನೆಗೊಂಡಿತು.
ಇಂಡಿಯಾ ಸ್ವೀಟ್ ಹೌಸ್ ಮಳಿಗೆಯನ್ನು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರು ಉದ್ಘಾಟಿಸಿ ಶುಭ ಹಾರೈಸಿದರು. ನಂತರ ಎ.ಜೆ. ಗ್ರೂಪ್ ಇದರ ಚೇಯರ್ ಮ್ಯಾನ್ ಡಾ.ಎ.ಜೆ.ಶೆಟ್ಟಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಹಂಪನಕಟ್ಟೆಯ ಸಿಟಿ ಲೈಟ್ ಬಿಲ್ಡಿಂಗ್ ನಲ್ಲಿ ಆರಂಭವಾಗಿರುವ ಈ ಹೊಸ ಮಳಿಗೆ ಈಗ ಮಂಗಳೂರಿನ ಗ್ರಾಹಕರಿಗೆ ಅತ್ಯುತ್ತಮ ಸಿಹಿ ತಿನಿಸುಗಳು ಮತ್ತು ತಿಂಡಿಗಳನ್ನು ಒದಗಿಸಲಿದೆ. ಎಂದು ಸಂಸ್ಥೆಯ ಸಹ ಸಂಸ್ಥಾಪಕರಾದ ವಿಶ್ವನಾಥ ಮೂರ್ತಿ ಹೇಳಿದರು.
ನಮ್ಮ 40ನೇ ಮಳಿಗೆಯನ್ನು ಆರಂಭಿಸಲು ಇದು ಉತ್ತಮ ಸ್ಥಳ ಎನ್ನುವುದು ನಮ್ಮ ಭಾವನೆ. ಹಾಗಾಗಿ ನಮ್ಮ ಮಳಿಗೆಯನ್ನು ಇಲ್ಲಿ ಪ್ರಾರಂಭಿಸಿದ್ದೇವೆ .ನಾವು ಐದು ವರ್ಷಗಳಲ್ಲಿ ಎಷ್ಟು ದೂರ ಬಂದಿದ್ದೇವೆ ಎಂಬುದಕ್ಕೆ ಈ ಮಳಿಗೆ ಅತ್ಯುತ್ತಮ ಪುರಾವೆಯಾಗಿದೆ ಎಂದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಅತಿದೊಡ್ಡ ಹಾಗೂ ವಿಶಿಷ್ಟ ಎನಿಸಿದ 156 ಕೆ.ಜಿ ತೂಕದ ಮೈಸೂರುಪಾಕ್ ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು. ಇಂಡಿಯಾ ಸ್ವೀಟ್ ಹೌಸ್ ಸಂಸ್ಥೆಯು ಹಾಲು, ತುಪ್ಪ ಮತ್ತು ಖೋವಾದಂಥ ಹೈನುಗಾರಿಕೆ ಉತ್ಪನ್ನಗಳನ್ನು ನೇರವಾಗಿ ಫಾರ್ಮ್ ಗಳಿಂದ ಪಡೆದು ಸಾಂಪ್ರದಾಯಿಕ ಪಾಕಪದ್ಧತಿಗಳ ಮೂಲಕ ಖಾದ್ಯಗಳನ್ನು ತಯಾರಿಸುತ್ತದೆ ಮುಖ್ಯ ಸ್ಥರು ತಿಳಿಸಿದ್ದಾರೆ.