ಮಂಗಳೂರು , ಎ. 15 : ಕುಲಾಲ ಪ್ರತಿಷ್ಠಾನ ಮಂಗಳೂರು ವತಿಯಿಂದ ಮಂಗಳೂರು ಉರ್ವಸ್ಟೋರ್ ನಲ್ಲಿರುವ ಅಂಬೇಡ್ಕರ್ ಭವನದಲ್ಲಿ ‘ಕುಲಾಲ ಪರ್ಬ’ ಕಾರ್ಯಕ್ರಮ ರವಿವಾರ ಜರಗಿತು.
‘ಕುಲಾಲ ಪರ್ಬ’ ಕಾರ್ಯಕ್ರಮವನ್ನು ಶ್ರೀಧಾಮ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಉದ್ಘಾಟಿಸಿದರು.ನಂತರ ಮಾತಾಡಿದ ಅವರು,ಕುಲಾಲ ಸಮುದಾಯ ದವರು ಪ್ರೀತಿ, ಬಾಂಧವ್ಯದಿಂದ ಮುನ್ನಡೆಯಬೇಕು. ಕುಲಾಲ ಪ್ರತಿಷ್ಠಾನದಿಂದ ಇನ್ನಷ್ಟು ಉತ್ತಮ ಸಾಮಾಜಿಕ ಕಾರ್ಯಕ್ರಮಗಳು ಆಗಲಿ ಎಂದರು.
ಕುಲಾಲ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಕುಲಾಲ್ ಮಂಗಳಾದೇವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುಲಾಲ ಸಮಾಜದ 25 ಸಾಧಕರಿಗೆ ‘ಕುಲಾಲ ಸಾಧಕ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘದ ಮಾಜಿ ಅಧ್ಯಕ್ಷ ಎಂ.ಪಿ. ಬಂಗೇರ, ಬೆಳ್ವಣ್ ಕುಂಭ ನಿಧಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಕಾರ್ಯಾಧ್ಯಕ್ಷ ಕುಶ ಆರ್. ಮೂಲ್ಯ, ಕುಲಶೇಖರ ಶ್ರೀ ಧರ್ಮಶಾಸ್ತ್ರ ಮಂದಿರ ಟ್ರಸ್ಟ್ನ ಅಧ್ಯಕ್ಷ ರಾಮಪ್ರಸಾದ್ ಎಸ್., ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ಪ್ರಧಾನ ಅರ್ಚಕ ಶಿವಾನಂದ ಕನಡ, ಓಲ್ಡ್ ಕೆಂಟ್ ರೋಡ್ ಶ್ರೀ ದೇವಿ ದೇವಸ್ಥಾನದ ಅಧ್ಯಕ್ಷ ಸದಾಶಿವ ಕುಲಾಲ್ ಅತ್ತಾವರ, ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘ ಮಹಿಳಾ ವಿಭಾಗದ ಅಧ್ಯಕ್ಷೆ ಮಮತಾ ಅಣ್ಣಯ್ಯ ಕುಲಾಲ್, ಕುಲಾಲ ಕುಂಬಾರರ ಯುವ ವೇದಿಕೆಯ ರಾಜ್ಯಾಧ್ಯಕ್ಷ ಗಂಗಾಧರ ಬಂಜನ್, ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷ ರವೀಂದ್ರ ಮುಪ್ಪಾಡಿ, ಸುರತ್ಕಲ್ ಸ್ವರ್ಣಕುಂಭ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ನಾಗೇಶ್ ಕುಲಾಲ್, ಶ್ರೀ ವೀರ ನಾರಾಯಣ ದೇವಸ್ಥಾನದ ಶ್ರೀ ವೀರನಾರಾಯಣ ಸೇವಾ ಸಮಿತಿಯ ಅಧ್ಯಕ್ಷ ಕಿರಣ್ ಕುಮಾರ್್ರ ಅಟ್ಲೂರು, ಸುನಿಲ್ ಸಾಲ್ಯಾನ್, ದೇವಕಿ ಸಾಲ್ಯಾನ್, ಕುಲಾಲ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಬಿ. ಸುರೇಶ್ ಕುಲಾಲ್, ಟ್ರಸ್ಟಿಗಳಾದ ಮಾಸ್ಟರ್ ಬಿ.ಸೀತಾರಾಮ ಕುಲಾಲ್, ಬಿ. ನಾಗೇಶ್ ಕುಲಾಲ್, ಬಿ.ದಿನೇಶ್ ಕುಲಾಲ್, ಬಿ. ಪ್ರೇಮಾನಂದ ಕುಲಾಲ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನೃತ್ಯ, ಸಂಗೀತ ಕಾರ್ಯಕ್ರಮಗಳು ನಡೆದವು.
ಟ್ರಸ್ಟಿ ನ್ಯಾಯವಾದಿ ಲಕ್ಷ್ಮಣ್ ಕುಂದರ್ ಸ್ವಾಗತಿಸಿದರು. ನವೀನ್ ಪುತ್ತೂರು, ಪ್ರವೀಣ್ ಬಸ್ತಿ ಕಾರ್ಯಕ್ರಮ ನಿರ್ವಹಿಸಿದರು. ಸುಧಾ ಪುರುಷೋತ್ತಮ್ ವಂದಿಸಿದರು.