ಮಂಗಳೂರು, ಮೇ. 03 : ದುರಸ್ತಿ ಕಾರ್ಯಕ್ಕಾಗಿ ಕಳೆದೊಂದು ತಿಂಗಳಿನಿಂದ ಮುಚ್ಚಲ್ಪಟ್ಟಿದ್ದ ರಾ.ಹೆ.66ರ ಉಳ್ಳಾಲ ನೇತ್ರಾವತಿ ಹಳೆಯ ಸೇತುವೆಯನ್ನು ಶನಿವಾರ ಬೆಳಗ್ಗಿನಿಂದ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಯಿತು.
ಉಳ್ಳಾಲದಿಂದ ಮಂಗಳೂರು ಸಂಪರ್ಕಿಸುವ ನೇತ್ರಾವತಿಯಲ್ಲಿ ಎರಡು ಸೇತುವೆ ಗಳಲ್ಲಿ ಒಂದು ಸೇತುವೆಯನ್ನು ಏ.1 ರಿಂದ ದುರಸ್ತಿ ಕಾರ್ಯಕ್ಕಾಗಿ ಮುಚ್ಚಲಾಗಿತ್ತು. ಹಾಗಾಗಿ ವಾಹನಗಳ ಓಡಾಟಕ್ಕೆ ಹೊಸ ಸೇತುವೆಯ ಒಂದು ಬದಿಯಲ್ಲಿ ಅವಕಾಶ ಕಲ್ಪಿಸಲಾಗಿತ್ತು.ಇದರಿಂದಾಗಿ ತೀವ್ರ ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು. ಶನಿವಾರ ಬೆಳಗ್ಗಿನಿಂದ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಯಿತು. ಇಂದಿನಿಂದ ಎರಡೂ ಸೇತುವೆಗಳು ಈಗ ಕೇರಳ ಮತ್ತು ಮಂಗಳೂರು ಕಡೆಗೆ ಹೋಗುವ ವಾಹನಗಳ ಸಂಚಾರಕ್ಕೆ ಲಭ್ಯವಿದೆ.