ಮಂಗಳೂರು, ಮೇ 11 : ಬಂಗ್ರ ಕೂಳೂರುನಲ್ಲಿರುವ ಗೋಲ್‌ಫಿಂಚ್ ಸಿಟಿ ಮೈದಾನದಲ್ಲಿ ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ವತಿಯಿಂದ ನವೋದಯ ಸ್ವ-ಸಹಾಯ ಗುಂಪುಗಳ ‘ರಜತ ಸಂಭ್ರಮ–2025’ ಸಮಾವೇಶ ಶನಿವಾರ ನಡೆಯಿತು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ‘ರಜತ ಸಂಭ್ರಮ–2025’ ಸಮಾವೇಶದ ಉದ್ಘಾಟನೆಯನ್ನು ನೆರವೇರಿಸಿದರು.
ಉದ್ಘಾಟನೆ ನೆರವೇರಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾತಾನಾಡಿ, ಇಪ್ಪತೈದು ವರ್ಷಗಳ ಹಿಂದೆ ನವೋ ದಯ ಸ್ವ-ಸಹಾಯ ಗುಂಪುಗಳ ಆರಂಭದ ದೀಪ ಬೆಳಗಿಸಿದ್ದೆ. ಆ ಜ್ಯೋತಿ ಇಂದು ಲಕ್ಷಾಂತರ ತಾಯಂದಿರ ಬದುಕಿನಲ್ಲಿ ಆರ್ಥಿಕ ಸ್ವಾವಲಂಬನೆ ಮೂಲಕ ಸಮಾಜದ ಶಕ್ತಿಯನ್ನಾಗಿಸಿದೆ. ನನ್ನ ರಾಜಕೀಯ ಜೀವನ ಆರಂಭವಾಗಿದ್ದೂ ಸಹಕಾರಿ ರಂಗದಿಂದ. ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ರಾಜ್ಯದ, ಸಹಕಾರಿ ಸಂಘಗಳಲ್ಲಿ ಅತೀ ಹೆಚ್ಚು ಸಾಲಗಳು ಮರುಪಾವತಿದೆ. ಡಾ|ಎಂ.ಎನ್.ರಾಜೇಂದ್ರ ಕುಮಾರ್ | ಅವರ ನೇತೃತ್ವದಲ್ಲಿ ಮಹಿಳೆಯರು ಸ್ವಾವಲಂಬನೆಯ ದಾರಿಕಂಡು ಕೊಂಡಿರುವುದು ಶ್ಲಾಘನಾರ್ಹ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ ಮಾತನಾಡಿ, ನವೋದಯ ಗ್ರಾಮೀಣ ವಿಕಾಸ ಸಂಸ್ಥೆ ಇವತ್ತು ಹೆಮ್ಮರವಾಗಿ ಬೆಳೆದಿದೆ. 8 ಜಿಲ್ಲೆಗಳಿಗೆ ಕಾರ್ಯಚಟುವಟಿಕೆ ವಿಸ್ತರಿಸಿ ಈಗ ರಾಜ್ಯ ಮಟ್ಟದ ಸಂಸ್ಥೆ ಯಾಗಿ ಬೆಳೆಸುತ್ತಿರುವುದು ಪ್ರಶಂಸನೀಯ ಎಂದರು.
ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಮಾತನಾಡಿ, ಕರಾವಳಿ ಕರ್ನಾಟಕದ ಮಹಿಳೆಯರು ಸ್ವಾಭಿಮಾನದ ಬದುಕು ಕಟ್ಟುವುದನ್ನು ತೋರಿಸಿಕೊಟ್ಟಿದ್ದಾರೆ. ಮೀನುಗಾರಿಕೆ, ಗೇರು ಕಾರ್ಖಾನೆ, ಬೀಡಿ ಉದ್ಯಮ ಹೀಗೆ ಪ್ರತಿ ಹಂತ ಗಳಲ್ಲೂ ಕುಟುಂಬದ ಉದ್ಧಾರಕ್ಕೆ ಅವರ ದೊಡ್ಡ ಕೊಡುಗೆ ಇದೆ ಎಂದರು.
ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ಇದರ ಸಂಸ್ಥಾಪಕರಾದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಮಾತನಾಡಿ, ದೇಶದ ಗಡಿಯಲ್ಲಿನ ವೀರಯೋಧರಿಗೆ ಗೌರವ ಸಲ್ಲಿಸಿ ಯೋಧರ ಕಲ್ಯಾಣ ನಿಧಿಗೆ 3 ಕೋಟಿ ರೂ. ದೇಣಿಗೆ ನೀಡುವುದಾಗಿ ಸಭೆಯಲ್ಲಿ ಘೋಷಿಸಿದರು. 25 ವರ್ಷದ ಹಿಂದೆ ಸ್ಥಾಪನೆಯಾದ ಸ್ವ ಸಹಾಯ ಗುಂಪುಗಳು ರಾಜ್ಯದ 9 ಜಿಲ್ಲೆಗಳಲ್ಲಿ ಬೆಳೆದಿದೆ. ಮುಂದೆ ಇತರ ಜಿಲ್ಲೆಗೂ ವಿಸ್ತರಿಸುವ ಗುರಿ ಇದೆ ಎಂದರು.
ಸಹಕಾರ ಸಚಿವ ಕೆ.ಎನ್. ರಾಜಣ್ಣ ಮಾತನಾಡಿ, ಗ್ರಾಮಗಳಲ್ಲೂ ಆರ್ಥಿಕ ಚಟುವಟಿಕೆಗಳು ಬಲ ಪಡೆದಾಗ ಮಾತ್ರ ಸ್ವಾಭಿಮಾನದ ಬದುಕು ಸಾಧ್ಯ. ಎಲ್ಲ ರಾಜಕರಣಿಗಳು, ಸಹಕರಿಗಳೂ ಪಕ್ಷಾತೀತರಾಗಿ ಗ್ರಾಮೀಣ ಅಭ್ಯುದಯದ ಹೊಣೆ ಹೊರಬೇಕು ಎಂದರು.
ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಮಾತೆಯರನ್ನು ಒಗ್ಗೂಡಿಸಿ ಅವರನ್ನು ಸ್ವಾವಲಂಬಿಯನ್ನಾಗಿ ಮಾಡುವ ಸಹಕಾರಿಯ ಉದ್ದೇಶ ಪ್ರಶಂಸನೀಯ ಎಂದರು.
ರಜತ ಸಂಭ್ರಮದ ‘ಸಂತೃಪ್ತಿ’ ಸ್ಮರಣ ಸಂಚಿಕೆಯನ್ನು ರಾಜ್ಯ ಸಭಾ ಸದಸ್ಯ, ಧರ್ಮ ಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾ ನಾಡಿದರು.
ಸಮಾವೇಶದಲ್ಲಿ ಅಬಕಾರಿ ಸಚಿವ ಬಿ.ತಿಮ್ಮಾಪುರ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಸುನಿಲ್ ಕುಮಾರ್, ವೇದವ್ಯಾಸ್ ಕಾಮತ್, ಡಾ| ಭರತ್ ಶೆಟ್ಟಿ, ರಾಜೇಶ್ ನ್ಯಾಕ್, ಉಮಾನಾಥ ಕೋಟ್ಯಾನ್, ಯಶ್ ಪಾಲ್ ಸುವರ್ಣ, ಅಶೋಕ್ ಕುಮಾರ್ ರೈ, ಕಿರಣ್ ಕುಮಾರ್ ಕೊಡ್ಡಿ ಗುರ್ಮೆ ಸುರೇಶ್ – ಶೆಟ್ಟಿ, ಭಾಗೀರಥಿ ಮುರುಳ್ಯ, ಎಸ್. ಎಲ್.ಭೋಜೇ ಗೌಡ, ಐವನ್ ಡಿಸೋಜಾ, ಮಂಜುನಾಥ ಭಂಡಾರಿ, ಮಾಜಿ ಸಚಿವ ರಾದ ಮುರುಗೇಶ್ ನಿರಾಣಿ, ರಮಾನಾಥ ರೈ, ಅಭಯಚಂದ್ರ ಜೈನ್, ವಿನಯ್ ಕುಮಾರ್ ಸೊರಕೆ, ಮಾಜಿ ಶಾಸಕ ಸಂಜೀವ ಮಠಂದೂರು, ನಾಯಕರಾದ ಮಿಥುನ್ ರೈ, ಪದ್ಮರಾಜ್ ಆರ್, ಉದಯಕುಮಾರ್ ಶೆಟ್ಟಿ, ಪ್ರಸಾದ್ ಕಾಂಚನ್, ರಕ್ಷಿತ್ ಶಿವರಾಮ್, ಇನಾಯತ್ ಆಲಿ, ಕಿಶೋರ್ ಆಳ್ವ, ಐಕಳ ಹರೀಶ್ ಶೆಟ್ಟಿ, ಯು.ಟಿ.ಇಪ್ಟಿಕಾರ್, ಬೆಳ್ಳಿ ಪ್ರಕಾಶ್, ಕೆ.ಜಯವರ್ಮ ಬಲ್ಲಾಳ್, ಇಪ್ಕೋ ವ್ಯವಸ್ಥಾಪಕ ನಿರ್ದೇಶಕ ಡಾ|| ಉದಯ ಶಂಕರ್ ಅವಸ್ಥಿ, ಪ್ರೊ| ಪಿ.ಎಲ್.ಧರ್ಮ, ವಿನಯ ಕುಮಾರ್ ಸೂರಿಂಜೆ, ಬ್ಯಾಂಕ್ ನಿರ್ದೇಶಕರಾದ ಭಾಸ್ಕರ್. ಎಸ್. ಕೋಟ್ಯಾನ್, ಎಂ.ವಾದಿರಾಜ ಶೆಟ್ಟಿ, ಎಸ್.ಬಿ.ಜಯರಾಮ್ ರೈ, ಸದಾಶಿವ ಉಳ್ಳಾಲ್, ರಾಜೇಶ್ ರಾವ್, ಕುಶಾಲಪ್ಪ ಗೌಡ, ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಣಾ – ಧಿಕಾರಿ ಗೋಪಾಲಕೃಷ್ಣ ಭಟ್ ಕೆ., ನವೋದಯ ಟ್ರಸ್ಟಿಗಳಾದ ಮೇಘರಾಜ್ ಆರ್. ಜೈನ್, ಹೇಮಲತಾ ಹೆಗ್ಡೆ, ಸುನಿಲ್ ಕುಮಾರ್ ಬಜಗೋಳಿ, ರವೀಂದ್ರ ಕಂಬಳಿ, ಪೂರ್ಣಿಮಾ ಶೆಟ್ಟಿ ಉಪಸ್ಥಿತರಿದ್ದರು. ರಜತಸಂಭ್ರಮದ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷ ಬೆಳಪು ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಶಶಿಕುಮಾರ್ ರೈ ಬಾಳ್ಕೊಟ್ಟು ವಂದಿಸಿದರು. ನಿತೇಶ್ ಶೆಟ್ಟಿ ಎಕ್ಕಾರು ನಿರೂಪಿಸಿದರು.