ಉಳ್ಳಾಲ,ಮೇ.14 :: ಉಳ್ಳಾಲ ದರ್ಗಾ ಉರೂಸ್ ಸಮಾರಂಭಕ್ಕೆ ರಾಜ್ಯ ಸರ್ಕಾರವು ವಿಧಾನಸಭಾ ಸ್ಪೀಕರ್ ಅವರ ಬೇಡಿಕೆಯನ್ನು ಪುರಸ್ಕರಿಸಿ ಮೂರು ಕೋಟಿ ರೂ. ಅನುದಾನವನ್ನು ಮಂಜೂರು ಮಾಡಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
ಅವರು ಖುತ್ ಬುಝಮಾನ್ ಹಝತ್ ಅಸಯ್ಯದ್ ಮುಹಮ್ಮದ್ ಶರೀಫುಲ್ ಮದನಿ ತಂಬಳ್ ಅವರ ಹೆಸರಿನಲ್ಲಿ ನಡೆಯುವ ಉರೂಸ್ ಕಾರ್ಯಕ್ರಮ ಪ್ರಯುಕ್ತ ಮೇ.10, ಶನಿವಾರ ಭೇಟಿ ನೀಡಿ ದರ್ಗಾ ಝಿಯಾರತ್ ನಡೆಸಿದ ಬಳಿಕ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಲಕ್ಷಾಂತರ ಜನರು ಉಳ್ಳಾಲ ದರ್ಗಾ ಉರೂಸ್ ನಲ್ಲಿ ಗೆ ಆಗಮಿಸುತ್ತಾರೆ. ಇಲ್ಲಿನ ಉರೂಸ್ ನ ಕೊನೆಯ ದಿನ ಭಕ್ತಾದಿಗಳಿಗೆ ನೀಡಲಾಗುವ ಅನ್ನದಾನ ವ್ಯವಸ್ಥೆಗೆ 50 ಕುರಿಗಳನ್ನು ನಾನು ದಾನ ನೀಡುತ್ತೇನೆ ಎಂದು ಅವರು ಹೇಳಿದರು.
ಸಂಸ್ಥೆಗೆ ಹಣ ಕೊಡುವುದು ಮುಖ್ಯ ಅಲ್ಲ. ಸಂಸ್ಥೆಯು ಸಾಮಾಜಿಕ, ಶೈಕ್ಷಣಿಕವಾಗಿ ಎಷ್ಟು ಜನರನ್ನು ಪರಿವರ್ತನೆ ಮಾಡುತ್ತದೆ ಎಂಬುದು ಮುಖ್ಯ ಆಗಿರುತ್ತದೆ. ಈ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ದರ್ಗಾ ಸಮಿತಿ ನೀಡಬೇಕು ಎಂದು ಕರೆ ನೀಡಿದರು.
ರಾತ್ರಿ ನಡೆದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಹಂಝ ಮಿಸ್ಟಾಹಿ ಓಟ್ಟಪ್ಪದವ್, ಅಬ್ದುಲ್ ಖಾದರ್ ಸಖಾಫಿ ಮುದುಗುಡ ಮುಖ್ಯ ಭಾಷಣ ಮಾಡಿದರು.ಅಬ್ದುಲ್ ಖಾದರ್ ಹಾಜಿ ಬೆಂಗಳೂರು ದುಆ ನೆರವೇರಿಸಿದರು.
ಕಾರ್ಯಕ್ರಮ ದಲ್ಲಿ ಸ್ಪೀಕರ್ ಯುಟಿ ಖಾದರ್, ಪುತ್ತೂರು ಶಾಸಕ ಅಶೋಕ್ ರೈ, ಸಹ್ಯಾದ್ರಿ ಕಾಲೇಜು ಅಧ್ಯಕ್ಷ ಶಾಸಕ ಮಂಜುನಾಥ ಭಂಡಾರಿ, ಕಾಂಗ್ರೆಸ್ ಮುಖಂಡರಾದ ಇನಾಯತ್ ಅಲಿ, ಮಿಥುನ್ ರೈ, ರಕ್ಷಿತ್ ಶಿವರಾಮ್, ಆರ್.ಪದ್ಮರಾಜ್, ರಾಜ್ಯ ವಕ್ಸ್ ಮಂಡಳಿ ಮೈಸೂರು ವಿಭಾಗದ ವಕೀಲ ನೂರು ಇಬ್ರಾಹಿಮ್ ಖಾನ್, ತಹಶೀಲ್ದಾರ್ ಪುಟ್ಟರಾಜು, ಜಿಲ್ಲಾ ಅಧಿಕಾರಿ ಅಬೂಬಕ್ಕರ್, ರಾಜ್ಯ ವಕ್ಸ್ ಸಲಹಾ ಸಮಿತಿ ಸದಸ್ಯ ರಹ್ಮಾನ್ ಕೋಡಿಜಾಲ್, ಹಳೆ ಕೋಟೆ ಮಸೀದಿ ಅಧ್ಯಕ್ಷ ಮುಹಮ್ಮದ್ ಹಾಜಿ ಕುತ್ತಾರ್, ಖತೀಬ್ ಸಿರಾಜುದ್ದೀನ್ ಹಿಮಮಿ, ಸದ್ ರ್ ಮುಅಲ್ಲಿಂ ಇರ್ಫಾನ್ ಮದನಿ, ಉಪಾಧ್ಯಕ್ಷ ಅಶ್ರಫ್ ರೈಟ್ ವೇ, ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ, ಕಾರ್ಯದರ್ಶಿ ಮುಸ್ತಫಾ ಮದನಿನಗರ, ಇಸ್ಲಾಕ್, ಕೋಶಾಧಿಕಾರಿ ನಾಝೀಮ್ ಮುಕಚೇರಿ, ಸದಸ್ಯ ಅಬ್ದುಲ್ ಖಾದರ್ ಕೋಡಿ, ಇಯ್ತಿಯಾಝ್, ಅಬೂಬಕ್ಕರ್ ಹೈದರಲಿ ನಗರ, ಅರೆಬಿಕ್ ಕಾಲೇಜು ಪ್ರೊಫೆಸರ್ ಇಬ್ರಾಹಿಂ ಅಪ್ಪನಿ, ಆಝಾದ್ ಇಸ್ಮಾಯಿಲ್, ಕೇಂದ್ರ ಜುಮ್ಮಾಮಸೀದಿ ಖತೀಬ್ ಹಾಫಿಕ್ ಅಬ್ದುಲ್ ಮಜೀದ್ ಫಾಳಿಲಿ ಮತ್ತಿತರರು ಉಪಸ್ಥಿತರಿದ್ದರು.