ಕಾರ್ಕಳ, ಮೇ.17 : ಬೃಹತ್ ಗಾತ್ರದ ಬಾವಿಯನ್ನು ಸ್ವಚ್ಛಗೊಳಿಸಲು ಇಳಿದು ಅಪಾಯಕ್ಕೆ ಸಿಲುಕಿದ್ದ ವ್ಯಕ್ತಿಯನ್ನು ಅಗ್ನಿ ಶಾಮಕ ದಳದವರು ರಕ್ಷಿಸಿದ ಘಟನೆ ಕಾರ್ಕಳದಲ್ಲಿ ನಡೆದಿದೆ.
ಕಾರ್ಕಳದ ಸಾಣೂರು ಕ್ಯಾಶ್ಯೂ ಬಳಿಯ ಹಿತ್ತಲಿನ 35 ಅಡಿ ಆಳದ ಬಾವಿಯನ್ನು ಸ್ವಚ್ಛಗೊಳಿಸಲು ಹರೀಶ್ ಆಚಾರ್ಯ (55) ಎಂಬವರು ಶುಕ್ರವಾರ ಬೆಳಿಗ್ಗೆ 11.55 ವೇಳೆಗೆ ಇಳಿದಿದ್ದರು. ಬಳಿಕ ಮೇಲಕ್ಕೆ ಬರಲು ಸಾಧ್ಯವಾಗದೆ ಸಿಲುಕಿದ್ದು , ಅಪಾಯದಲ್ಲಿದ್ದ ಅವರನ್ನು ಕಾರ್ಕಳ ಅಗ್ನಿ ಶಾಮಕ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಯವರು ತಕ್ಷಣ ಕಾರ್ಯಾಚರಣೆ ನಡೆಸಿ ಮೇಲಕ್ಕೆ ಎತ್ತಿ ರಕ್ಷಣೆ ಮಾಡಿದ್ದಾರೆ.