ಉಳ್ಳಾಲ, ಮೇ 18: ಉಳ್ಳಾಲ ದರ್ಗಾ ಉರೂಸ್ ಪ್ರಯುಕ್ತ ಸನದುದಾನ ಮಹಾ ಸಮ್ಮೇಳನ, ಧಾರ್ಮಿಕ ಉಪನ್ಯಾಸ ಸಮಾರೋಪ ದರ್ಗಾ ವಠಾರದಲ್ಲಿ ನಡೆಯಿತು.ಉಳ್ಳಾಲ ಖಾಝಿ ಇಂಡಿಯನ್ ಉಳ್ಳಾಲ ಗ್ಯಾಂಡ್ ಮುಷ್ಟಿ ಎ.ಪಿ.ಅಬೂಬಕರ್ ಮುಸ್ಲಿಯಾರ್ ಅವರು ಅರೆಬಿಕ್ ಕಾಲೇಜು ಶಿಕ್ಷಣ ಪಡೆದು ತೇರ್ಗಡೆ ಹೊಂದಿದ 33 ಮಂದಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. ಸಯ್ಯದ್ ಹಾಮಿದ್ ಇಂಬಿಚ್ಚಿ ತಂಙಳ್ ದುಆ ನೆರವೇರಿಸಿದರು.
ಸಮಸ್ತ ಕೇರಳ ಸುನ್ನಿ ಜಂಇಯ್ಯತುಲ್ ಉಲಮಾ ಅಧ್ಯಕ್ಷ ರಈಸುಲ್ ಉಲಮಾ ಇ. ಸುಲೈಮಾನ್ ಮುಸ್ಲಿಯಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಪೊನ್ಮಲ ಅಬ್ದುಲ್ ಖಾದಿರ್ ಮುಸ್ಲಿಯಾರ್ ಸನದುದಾನ ಭಾಷಣ ಮಾಡಿದರು. ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಯ್ಯಿದ್ ಅತ್ತಾವುಲ್ಲ ತಂಙಳ್ ಆಶೀರ್ವಚನ ನೀಡಿದರು.ಯು.ಟಿ. ಖಾದರ್ ಮಾತನಾಡಿ, ಉಳ್ಳಾಲ ಶೈಕ್ಷಣಿಕ ಕೇಂದ್ರವಾಗಿ ಬೆಳೆಯಬೇಕು. ಇದಕ್ಕೆ ಎಲ್ಲರ ಪ್ರೋತ್ಸಾಹ ಅಗತ್ಯ. ದರ್ಗಾ ಸೌಹಾರ್ದದ ಕೇಂದ್ರ ಆಗಬೇಕು ಎಂದರು. ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಮಾತನಾಡಿ, ಕರ್ನಾಟಕದ ಮುಖ್ಯಮಂತ್ರಿ ಆದರೆ ಎಷ್ಟು ಸಂತೋಷ ಆಗುತ್ತದೆಯೋ ಅಷ್ಟೇ ಸಂತೋಷ ಇಂದಿನ ದಿನ ನನಗೆ ಆಗುತ್ತದೆ. ದೊಡ್ಡ ಯಾತ್ರ ಸ್ಥಳ ಆಗಿರುವ ಉಳ್ಳಾಲ ಅಭಿವೃದ್ಧಿ ಆಗಬೇಕು. ಸ್ಪೀಕರ್, ಖಾದರ್ ಪ್ರಯತ್ನ ಪಟ್ಟರೆ ದೊಡ್ಡ ಕಷ್ಟ ಆಗದು ಎಂದರು. ಕೃಷ್ಣಾಪುರ ಖಾಝಿ ಇಬ್ರಾಹಿಮ್ ಮದನಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಶ್ರಫ್ ತಂಬಳ್ ಆದೂರು, ಅಬ್ದುಲ್ ರಹ್ಮಾನ್ ಮದನಿ ಮೂಳೂರು, ಅಬ್ದುಲ್ ರಹ್ಮಾನ್ ಮಸೂದ್ ತಂಙಳ್, ಉಡುಪಿ ಸಂಯುಕ್ತ ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಅರೆಬಿಕ್ ಕಾಲೇಜು ಪ್ರಾಂಶುಪಾಲ ಅಹ್ಮದ್ ಕುಟ್ಟಿ ಸಖಾಫಿ, ಹುಸೈನ್ ಸಅದಿ ಕೆ.ಸಿ.ರೋಡ್, ಅಬ್ದುಲ್ ಖಾದರ್ ಮದನಿ ಕಲ್ತರ,ಕುಂಜಲನ್ ಮದನಿ ಗೂಡಲ್ಲೂರು, ಎಂ. ವಿ. ಅಬ್ದುಲ್ಲಾ ಮುಸ್ಲಿಯಾರ್ ಪಾಡಾವಳ್ಳಿ, ಶಾಫಿ ಸಅದಿ ಬೆಂಗಳೂರು, ಅಬ್ದುಲ್ ರಶೀದ್ ಝೈನಿ, ಮುಹಮ್ಮದ್ ಫಾಝಿಲ್ ರಝ್ವಿ, ಕಾವಳಕಟ್ಟೆ, ಅಬ್ದುಲ್ ಖಾದಿರ್ ಮದನಿ ಪಲ್ಲಂಗೋಡು, ಸುಫ್ಯಾನ್ ಸಖಾಫಿ, ಯುಟಿ ಇಪ್ತಿಕರ್,ಯೇನಪೊಯ ವಿ.ವಿ. ಕುಲಪತಿ ಯೇನಪೊಯ ಅಬ್ದುಲ್ಲಾ ಕುಂಞ, ದರ್ಗಾ ಮಾಜಿ ಅಧ್ಯಕ್ಷ ಕಣಚೂರು ಮೋನು, ಯು. ಎಸ್. ಹಂಝ, ವಕ್ಸ್ ಬೋರ್ಡ್ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ನಾಸೀರ್ ಲಕ್ಕಿ ಸ್ಟಾರ್, ಜಿ.ಎ. ಬಾವಾ, ಶಾಕಿರ್, ಶೆರೀಫ್, ಝಕರಿಯಾ ಜೋಕಟ್ಟೆ ಎಸ್‌ಎಂಆ ರಶೀದ್, ದರ್ಗಾ ಉಪಾಧ್ಯಕ್ಷ ಅಶ್ರಫ್ ರೈಟ್ ವೇ, ಕಾವ್ಯದರ್ಶಿ ಮುಸ್ತಾಫಾ ಮದನಿನಗರ, ಇಸಾಕ್, ಕೋಶಾಧಿಕಾರಿ ನಾಝೀಮ್ ಮುಕ್ಕಚ್ಚೇರಿ, ಸದಸ್ಯರಾದ ಅಬ್ದುಲ್ ಖಾದರ್ ಕೋಡಿ, ಆಸೀಫ್ ಸುಂದರಿ ಬಾಗ್, ಅಬೂಬಕ್ಕರ್ ಹೈದರಲಿ ನಗರ, ಝೈನುದ್ದೀನ್ ಮೇಲಂಗಡಿ, ಯೂಸುಫ್ ಉಳ್ಳಾಲ, ಸಯ್ಯಿದ್ ಮದನಿ ಅರೆಬಿಕ್ ಕಾಲೇಜು ಪ್ರೊ| ಇಬ್ರಾಹಿಂ ಅಹ್ಸನಿ, ನಜೀಬ್ ನೂರಾನಿ,ನುಹ್ಮಾನ್ ನೂರಾನಿ, ಇಸ್ಮಾಯಿಲ್ ಸ ಅದಿ ಕಿನ್ಯ ಉಪಸ್ಥಿತರಿದ್ದರು.