ಬೆಳ್ತಂಗಡಿ, ಮೇ 18: ಬೆಳ್ತಂಗಡಿ ರಕ್ಷಾ ಆರ್ಕೆಡ್ ನಲ್ಲಿ ಮುಳಿಯ ಗೋಲ್ಡ್ ಆಂಡ್ ಡೈಮಂಡ್ ವಿಸ್ತೃತ ಮುಳಿಗೆಯನ್ನು ಮುಳಿಯ ಸಂಸ್ಥೆಯ ಬ್ರಾಂ ಡ್ ಅಂಬಾಸಿಡರ್ ಹಾಗೂ ನಟ ರಮೇಶ್ ಅರವಿಂದ್ ಅವರು ಶನಿವಾರ ಉದ್ಘಾಟಿಸಿದರು.
ಬೆಳಗ್ಗೆ ಮೂರು ಮಾರ್ಗದಿಂದ ನಟ ರಮೇಶ್ ಅರವಿಂದ್ ಅವರನ್ನು ತೆರೆದ ಕಾರಿನ ಮೂಲಕ ಮೆರವಣಿಗೆಯಲ್ಲಿ ಚೆಂಡೆ, ಹುಲಿವೇಷದೊಂದಿಗೆ ಶೋ ರೂಂವರೆಗೆಕರೆತರಲಾಯಿತು. ಮುಳಿಯ ಸಂಸ್ಥೆಯ ಚೇರ್ಮನ್ ಆಂಡ್ ಮ್ಯಾನೇಜಿಂಗ್ ಡೈರೆಕ್ಟರ್ ಕೇಶವ ಪ್ರಸಾದ್ ಮುಳಿಯ ಹಾಗೂ 7 ಕುಟುಂಬಸ್ಥರು ನಟ ರಮೇಶ್ ಅರವಿಂದ ಅವರನ್ನು ಬರಮಾಡಿಕೊಂಡರು.
ಸಭಾ ಕಾರ್ಯಕ್ರಮದಲ್ಲಿ ಮುಳಿಯ ಸಂಸ್ಥೆಯ ರಾಯಭಾರಿ ಹಾಗೂ ನಟ ರಮೇಶ್ ಅರವಿಂದ್ ಅವರು ಮಾತಾಡಿ, ಮುಳಿಯ ಗೋಲ್ಡ್ ಆಂಡ್ ಡೈಮಂಡ್ ಆಭರಣಗಳ ಮಳಿಗೆ ಗ್ರಾಹಕರ ಗಮನ ಸೆಳೆಯಲು ಕಾರಣ ಇಲ್ಲಿ ದೊರೆಯುವ ಉತ್ತಮ ಗುಣಮಟ್ಟದ ಚಿನ್ನಾಭರಣಗ ಳು. ಇವತ್ತು ಊರಿನ 81 ದೇವಸ್ಥಾನಗಳಿಂದ ದೀಪಗಳನ್ನು ಇಲ್ಲಿ ತಂದು ಬೆಳಗಿಸಿದ್ದಾರೆ. ದೇವಸ್ಥಾನಗಳಿಂದ ದೀಪಗಳನ್ನು ತಂದಿರುವುದಕ್ಕೂ ಅವಿನಾಭಾವ ಸಂಬಂಧ ಇದ್ದಂತಿದೆ. ಸದಾ ಸಂತೋಷ ನೀಡುವುದು ಮುಳಿಯದ ಉದ್ದೇಶ ಅದು ಯಶಸ್ವಿಯಾಗಲಿ ಎಂದು ಹಾರೈಸಿದರು.
ಮುಳಿಯ ಸಂಸ್ಥೆಯ ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ ಅವರು ಮಾತಾಡಿ, ಬೆಳ್ತಂಗಡಿಯಲ್ಲಿ 7 ವರ್ಷಗಳ ನಂತರ ಮತ್ತೆ ಹೊಸತನದೊಂದಿಗೆ ಮುಳಿಯ ಆಭರಣ ಮಳಿಗೆಯನ್ನು ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಆಗಿ ಪ್ರಸ್ತುತ ಪಡಿಸಲು ಹೆಮ್ಮೆ ಎನ್ನಿಸುತ್ತದೆ. 1944ರಿಂದಲೂ ಗ್ರಾಹಕರನ್ನು ಮುಖ್ಯವಾಗಿರಿಸಿಕೊಂಡು ಸೇವೆ ನೀಡುತ್ತಾ ಬಂದಿದ್ದೇವೆ. ಮುಳಿಯ ಅಂದರೆ ನಂಬಿಕೆ, ನಟ ರಮೇಶ್ ಅರವಿಂದ್ ಅವರನ್ನು ಬಹಳ ಸಂತೋಷದಿಂದ ಬ್ಯಾಂಡ್ ಅಂಬಾಸಿಡರ್ ಮಾಡಿದ್ದೇವೆ ಎಂದು ಹೇಳಿದರು.
ಕಟ್ಟಡದ ನಿರ್ಮಾಣದಲ್ಲಿ ಸಹಕರಿಸಿದವರನ್ನು ಗೌರವಿಸಲಾಯಿತು. ರಮೇಶ್ ಅರವಿಂದ್ ಅವರ ವಿವಿಧ ಸಿನೆಮಾಗಳ ಜನಪ್ರಿಯ ಹಾಡುಗಳನ್ನು ಅನನ್ಯಾ ಭಟ್ ಹಾಡಿದರು.
ಕಾರ್ಯಕ್ರಮದಲ್ಲಿಸಂಸ್ಥೆಯ ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ, ಮುಳಿಯ ಶ್ಯಾಮ ಭಟ್ಟ ಸುಲೋಚನಾ, ಕೃಷ್ಣ ವೇಣಿ ಪ್ರಸಾದ್ ಮುಳಿಯ, ಅಶ್ವಿನಿ ಎಸ್.ಡಿ.ಎಂ. ಕೃಷ್ಣ ಮುಳಿಯ, ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಡಾ.ಎಸ್.ಸತೀಶ್ಚಂದ್ರ, ಅಸಿಸ್ಟೆಂಟ್ ಎಕ್ಸ್‌ಕ್ಯೂಟಿವ್ ಶಿವಕೃಷ್ಣ ಮೂರ್ತಿ, ಮಾರ್ಕೆಟಿಂಗ್ ಮ್ಯಾನೇಜರ್‌ಸಂಜೀವ ಸಹಿತ ಪ್ರಮುಖರು ಉಪಸ್ಥಿತರಿದ್ದರು. ಮುಳಿಯ ಮಾರ್ಕೆಟಿಂಗ್ ಸಲಹೆ ಗಾರ ವೇಣು ಶರ್ಮ ಪ್ರಾಸ್ತಾವಿಸಿದರು. ಮುಕುಂದ ಶ್ಯಾಮ್ ಸ್ವಾಗತಿಸಿದರು. ಪ್ರಜ್ಞಾ ಓಡಿಲ್ದಾಳ ನಿರೂಪಿಸಿದರು. ಬೆಳ್ತಂಗಡಿ ಶಾಖೆಯ ಶಾಖಾ ಪ್ರಬಂಧಕ ನಾರಾಯಣ ಮುಳಿಯ, ಮುಳಿಯ ಶ್ಯಾಮ ಭಟ್ಟ ಸುಲೋಚನಾ, ಕೃಷ್ಣ ವೇಣಿ ಪ್ರಸಾದ್ ಮುಳಿಯ, ಅಶ್ವಿನಿ ಎಸ್.ಡಿ.ಎಂ. ಕೃಷ್ಣ ಮುಳಿಯ, ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಡಾ.ಎಸ್.ಸತೀಶ್ಚಂದ್ರ, ಅಸಿಸ್ಟೆಂಟ್ ಎಕ್ಸ್‌ಕ್ಯೂಟಿವ್ ಶಿವಕೃಷ್ಣ ಮೂರ್ತಿ, ಮಾರ್ಕೆಟಿಂಗ್ ಮ್ಯಾನೇಜರ್‌ಸಂಜೀವ ಸಹಿತ ಪ್ರಮುಖರು ಉಪಸ್ಥಿತರಿದ್ದರು.
ಮುಳಿಯ ಮಾರ್ಕೆಟಿಂಗ್ ಸಲಹೆಗಾರ ವೇಣು ಶರ್ಮ ಪ್ರಾಸ್ತಾವಿಸಿದರು. ಮುಕುಂದ ಶ್ಯಾಮ್ ಸ್ವಾಗತಿಸಿದರು. ಬೆಳ್ತಂಗಡಿ ಶಾಖೆಯ ಶಾಖಾ ಪ್ರಬಂಧಕ ಲೋಹಿತ್ ಕುಮಾರ್ ವಂದಿಸಿದರು. ಪ್ರಜ್ಞಾ ಓಡಿಲ್ಲಾಳ ನಿರೂಪಿಸಿದರು.ಸಂಸ್ಥೆಯ ವತಿಯಿಂದ ಸ್ಮರಣಿಕೆಯಾಗಿ ಹಣ್ಣಿನ ಗಿಡಗಳನ್ನು ವಿತರಿಸಲಾಯಿತು.