ಬೆಂಗಳೂರು,ಮೇ.23 : ‘ಮಾರ್ಕೋ’ ಚಿತ್ರದ ನಿರ್ಮಾಪಕ ಶರೀಫ್ ಮೊಹಮ್ಮದ್ (ಕ್ಯೂಬ್ಸ್ ಎಂಟರ್ಟೈನ್ಮೆಂಟ್ಸ್) ಮತ್ತೊಂದು ಅದ್ದೂರಿ ಚಿತ್ರಕ್ಕೆ ಕೈ ಹಾಕಿದ್ದಾರೆ. ಆಕ್ಷನ್ ಥ್ರಿಲ್ಲರ್ ‘ಕಾಟ್ಟಾಲನ್’ ಚಿತ್ರದಲ್ಲಿ ಆಂಟೋನಿ ವರ್ಗೀಸ್ (ಪೆಪೆ) ನಾಯಕರಾಗಿದ್ದು, ಪಾಲ್ ಜಾರ್ಜ್ ನಿರ್ದೇಶನ ಮಾಡುತ್ತಿದ್ದಾರೆ. ಇದು ಪ್ಯಾನ್-ಇಂಡಿಯನ್ ಮಟ್ಟದಲ್ಲಿ ತಯಾರಾಗುತ್ತಿದೆ.
ಈ ಚಿತ್ರದ ಇನ್ನೊಂದು ಮುಖ್ಯ ಅಂಶವೆಂದರೆ, ‘ಕಾಂತಾರ 2’ ಚಿತ್ರಕ್ಕೆ ಸಂಗೀತ ನೀಡಿದ್ದ ಜನಪ್ರಿಯ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮತ್ತು ಶರೀಫ್ ಮೊಹಮ್ಮದ್ ಅವರ ಹೊಸ ಸಹಯೋಗ. ಅಜನೀಶ್ ಅವರ ಉತ್ತಮ ಸಂಗೀತವು ‘ಕಾಟ್ಟಾಲನ್’ ಚಿತ್ರದ ಪ್ರಭಾವವನ್ನು ಮತ್ತಷ್ಟು ಹೆಚ್ಚಿಸಲಿದೆ.
ಚಿತ್ರದ ಮೊದಲ ನೋಟದ ಪೋಸ್ಟರ್ ಈಗಾಗಲೇ ಬಿಡುಗಡೆಗೊಂಡಿದೆ. ಪೋಸ್ಟರ್ ನಲ್ಲಿ ಮಳೆಯಲ್ಲಿ ಒದ್ದೆಯಾಗಿ, ಬಿದ್ದಿರುವ ಶವಗಳು ಮತ್ತು ಆನೆಯ ದಂತಗಳ ನಡುವೆ ನಿಂತಿರುವ ಪೆಪೆ ಕಾಣಬಹುದು.’ಜೈಲರ್’, ‘ಲಿಯೋ’, ‘ಜವಾನ್’ ಮತ್ತು ‘ಕೂಲಿ’ ಚಿತ್ರಗಳ ಫಾಂಟ್ಗಳನ್ನು ವಿನ್ಯಾಸಗೊಳಿಸಿದ ಐಡೆಂಟ್ ಲ್ಯಾಬ್ಸ್, ‘ಕಾಟ್ಟಾಲನ್’ ಚಿತ್ರದ ಶೀರ್ಷಿಕೆಯ ವಿನ್ಯಾಸವನ್ನು ಮಾಡಿದ್ದಾರೆ. ಕೊಡಲಿಗಳು ಮತ್ತು ದಂತಗಳನ್ನು ಬಳಸಿ ರಚಿಸಲಾದ ಈ ಶೀರ್ಷಿಕೆ, ಅಭಿಮಾನಿಗಳಲ್ಲಿ ಕುತೂಹಲವನ್ನು ಮೂಡಿಸಿದೆ .