ಮಂಗಳೂರು, ,ಜೂ. 07 : ಸ್ನೇಹಾಲಯ ಸಂಸ್ಥೆಯು ಜೂ5 ರಂದು ತನ್ನ ವ್ಯಸನ ನಿವಾರಣಾ ಕೇಂದ್ರದಲ್ಲಿ ಹೊಸದಾಗಿ ನಿರ್ಮಿಸಲಾದ ಟೆರೇಸ್ ರೂಫಿಂಗ್ ಮತ್ತು ನೆಲಹಾಸಿನ ಉದ್ಘಾಟನೆಯನ್ನು ನೆರವೇರಿಸಿದರು. ಈ ಸೌಲಭ್ಯವನ್ನು ಮಂಗಳೂರಿನ ಎಂ ಆರ್ ಪಿ ಎಲ್ ಸಂಸ್ಥೆಯ ಸಾಂಸ್ಥಿಕ ಸಾಮಾಜಿಕ ಯೋಜನೆಯಡಿ(ಸಿ ಎಸ್ ಆರ್ ಉಪಕ್ರಮದ ಅಡಿಯಲ್ಲಿ) ಪ್ರೋತ್ಸಾಹಿಸಲ್ಪಟ್ಟು ಸದರಿ ಸೌಲಭ್ಯವನ್ನು ವ್ಯಸನ ಮುಕ್ತ ಸಾಮಾಜಕ್ಕಾಗಿ ರೊಗಿಗಳ ಚೇತರಿಕೆಯ ಹಾದಿಯಲ್ಲಿ ಸಬಲೀಕರಣಗೊಳ್ಳುವ ಅಭಿವ್ಯಕ್ತಿಶೀಲ ಕಲಾ ಚಿಕಿತ್ಸೆ ಮತ್ತು ವಿವಿಧ ಗುಣಪಡಿಸುವ ಶಾರೀರಿಕ ಹಾಗು ಮಾನಸಿಕ ಚಟುವಟಿಕೆಗಳಿಗೆ ಮೀಸಲಿಡಲಾಗುವುದು.
ಎಂ ಆರ್ ಪಿ ಎಲ್ನ ಸಿ ಎಸ್ ಆರ್ ವಿಭಾಗದ ಹಿರಿಯ ವ್ಯವಸ್ಥಾಪಕ ಶ್ರೀ ಕೆ. ನಾಗರಾಜ್ ರಾವ್ ಅವರು ಮುಖ್ಯ ಅತಿಥಿಯಾಗಿ ಹಾಜರಿದ್ದು, ಎಂ ಆರ್ ಪಿ ಎಲ್ – ಒಎನ್ ಜಿಸಿ ಮಂಗಳೂರಿನ ಗ್ರೂಪ್ ಜನರಲ್ ಮ್ಯಾನೇಜರ್ ಶ್ರೀ ಕೃಷ್ಣ ಹೆಗ್ಡೆ ಮಿಯಾರ್ ಅವರ ಉಪಸ್ಥಿತಿಯಲ್ಲಿ ರಿಬ್ಬನ್ ಕತ್ತರಿಸುವ ಮೂಲಕ ಹೊಸ ಸೌಲಭ್ಯವನ್ನು ಉದ್ಘಾಟಿಸಲಾಯಿತು. ವನಮಹೋತ್ಸವ ಸಾಂಕೇತಿಸಲು ಗಿಡನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಮಂಗಳೂರು ರಚನಾ ಕ್ಯಾಥೊಲಿಕ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಸಂಸ್ಥೆಯಿಂದ ಜಾನ್ ಬಿ. ಮೊಂತೆರೊ, ಉದ್ಯಾವರ ಮಾಡ ಇಲ್ಲಿನ ಅರಸು ಮಂಜಿಹ್ನಾರ್ ಕ್ಷೇತ್ರ ದ ಪೂಜ್ಯಶ್ರೀ ರಾಜ ಬಲ್ಚಡ, ಸ್ನೇಹಾಲಯದ ಚಾಪ್ಲಿನ್ ರೆವರೆಂಡ್ ಫಾದರ್ ಸಿರಿಲ್ ಡಿ’ಸೋಜಾ, ಮಂಗಳೂರಿನ ಪ್ರೇರಣಾ ಭಾಷಣಕಾರರಾದ ರಫೀಕ್ ಮಾಸ್ಟರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸ್ನೇಹಾಲಯದ ಸ್ಥಾಪಕ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಬ್ರದರ್ ಜೋಸೆಫ್ ಕ್ರಾಸ್ತಾ ಅವರು ಅತಿಥಿಗಳನ್ನು ಸ್ವಾಗತಿಸಿದರು.ಕಾರ್ಯಕ್ರಮವನ್ನು ಜಿಯೋ ಡಿಸಿಲ್ವಾ ಅವರು ನೀರೂಪಿಸಿದರು. ಒಲಿವಿಯಾ ಕ್ರಾಸ್ತಾ ಸ್ನೇಹಾಲಯದ ಕಾರ್ಯದರ್ಶಿಗಳು ಅತಿಥಿಗಳಿಗೆ, ವಿಶೇಷವಾಗಿ ಎಂ ಆರ್ ಪಿ ಎಲ್ ಮಂಗಳೂರು ಇವರಿಗೆ ಮತ್ತು ಸ್ನೇಹಾಲಯದ ಕನಸನ್ನು ನನಸಾಗಿಸಲು ಬೆಂಬಲ ನೀಡಿದ ಎಲ್ಲರಿಗೂ ಅಂತರಾಳದ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.