ಕುಂದಾಪುರ, ಜೂ. 09 : ತ್ರಾಸಿ-ಮರವಂತೆ ಸಮುದ್ರದಲ್ಲಿ ಈಜುತ್ತಿದ್ದಾಗ ಅಲೆಯ ರಭಸಕ್ಕೆ ಸಿಕ್ಕಿ ಸಮುದ್ರ ಪಾಲಾಗುತ್ತಿದ್ದ ಐದು ಮಂದಿಯನ್ನು ಲೈಫ್ ಗಾರ್ಡ್ ಸಿಬ್ಬಂದಿಗಳು ರಕ್ಷಿಸಿದ ಘಟನೆ ಜೂನ್ 7ರ ಸಂಜೆ ಸಂಭವಿಸಿದೆ.ಬೆಂಗಳೂರಿನ ನಾಲ್ಕು ಮಂದಿ ಮತ್ತು ಗೋವಾದ ಓರ್ವ ಮಹಿಳೆ ರಕ್ಷಿಸಲ್ಪಟ್ಟವರು.
ಲೈಫ್ ಗಾರ್ಡ್ ಸಿಬ್ಬಂದಿ ಪೃಥ್ವಿರಾಜ್ ಉಪ್ಪುಂದ, ಪ್ರಮೋದ್ ರಾಜ್ ಉಪ್ಪುಂದ ಹಾಗೂ ಬೀಚ್ ಉಸ್ತುವಾರಿ ಸಿಬ್ಬಂದಿ ಸುರೇಶ್ ಕೊಡೇರಿ, 24×7 ಆಂಬ್ಯುಲೆನ್ಸ್ ಸಿಬ್ಬಂದಿ ಇಬ್ರಾಹಿಂ ಗಂಗೊಳ್ಳಿ ಅವರು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಘಟನೆಯ ಬಳಿಕ ಗಂಗೊಳ್ಳಿ ಪೊಲೀಸ್ ನಿರೀಕ್ಷಕ ಮತ್ತು ಸಿಬ್ಬಂದಿ, ಒನ್-ಟು ಸಿಬ್ಬಂದಿ ಮತ್ತು ಹೈವೇ ಪೆಟ್ರೋಲ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದರು. ಪ್ರವಾಸಿಗರ ಸುರಕ್ಷತೆಗಾಗಿ ಮತ್ತು ಮುನ್ನೆಚ್ಚರಿಕೆ ವಹಿಸಲು ಸೈರನ್ ಮೊಳಗಿಸಿ ಎಚ್ಚರಿಸಲಾಯಿತು.