ಮಂಗಳೂರು, ಜೂ.25: ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ (ಐಸಿಎಐ) ಮಂಗಳೂರು ಶಾಖೆಯ ವತಿಯಿಂದ ಅಂತಾರಾಷ್ಟ್ರೀಯ ಎಂಎಸ್‌ಎಂಇ ದಿನಾಚರಣೆ ಪ್ರಯುಕ್ತ ಜೂ.27ರಂದು ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಮಂಗಳೂರಿನ ಕರಂಗಲ್ಪಾಡಿಯ ಮಹೇಂದ್ರ ಆರ್ಕೆಡ್‌ನಲ್ಲಿರುವ ಐಸಿಎಐ ಭವನದಲ್ಲಿ ‘ಐಸಿಎಐ ಎಂಎಸ್ ಎಂಇ ಮಹೋತ್ಸವ’ ಎಂಬ ಕಾರ್ಯಕ್ರಮ ನಡೆಯಲಿದೆ ಎಂದು ಐಸಿಎಐ ಎಸ್ ಐಆರ್‌ಸಿಯ ಮಂಗಳೂರು ಶಾಖೆಯ ಅಧ್ಯಕ್ಷ ಸಿಎ ಪ್ರಶಾಂತ್ ಪೈ ಕೆ. ಅವರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು, ಭಾರತೀಯ ಕೈಗಾರಿಕಾ ಒಕ್ಕಟದ ಅಧ್ಯಕ್ಷ ನಟರಾಜ್ ಹೆಗ್ಡೆ, ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಲಿ.ನ ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಡಿ, ಎಂ.ಎಸ್.ಎಂ ಸಚಿವಾಲಯದ ಎಂಎಸ್ ಎಂಇ ಅಭಿವೃದ್ಧಿ ಮತ್ತು ಸೌಲಭ್ಯ ಕಚೇರಿಯ ನಿವೃತ್ತ ಜಂಟಿ ನಿರ್ದೇಶಕ ಡಾ| ಕೆ.ಸಾಕ್ರೆಟಿಸ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳಲಿದ್ದಾರೆ. ತಜ್ಞರ ಅಧಿವೇಶನದಲ್ಲಿ ಎ ಸಂಕೇತ್ ನಾಯಕ್ ಬೆಂಗಳೂರು ಅವರು ಎಂಎಸ್ ಎರರಗಳು ಮತ್ತು ಸ್ಟಾರ್ಟ್‌ಪ್‌ಗಳ ಪ್ರಯೋಜನಗಳು, ಹಣಕಾಸು ಮತ್ತು ತೆರಿಗೆಯನ್ನು ಅರ್ಥಮಾಡಿಕೊಳ್ಳುವುದರ ವಿಚಾರವಾಗಿ ಮಾತನಾಡಲಿದ್ದಾರೆ ಎಂದರು.
ಭಾರತೀಯ ಲೆಕ್ಕಪರಿಶೋಧಕ ಸಂಸ್ಥೆ ಐಸಿಎಐ ಎಂಎಸ್‌ಎಂಇ ದಿನದ ನೆನಪಿಗಾಗಿ ದೇಶದಾದ್ಯಂತ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದರಂತೆ ಮಂಗಳೂರಿನಲ್ಲಿಯೂ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಎಂಎಸ್‌ಎಂಇಗಳ ನೋಂದಣಿ, ಉದ್ಯಮ ಪೋರ್ಟಲ್‌ನಲ್ಲಿ ನವೀಕರಣ, ವಿವಿಧ ಸರಕಾರಿ ಯೋಜನೆಗಳ ಬಗ್ಗೆ ತಿಳಿವಳಿಕೆ ನೀಡಲಾಗುವುದು. ಅಲ್ಲದೆ ಭಾಗವಹಿಸುವ ಎಂಎಸ್ ಎಂಇಗಳಿಗೆ ಸ್ಥಳದಲ್ಲೇ ಸಮಸ್ಯೆ ಪರಿಹಾರ ಸುಗಮಗೊಳಿಸಲು ಚಾರ್ಟರ್ಡ್ ಅಕೌಂಟೆಂಟ್ ಗಳು, ಬ್ಯಾಂಕ್ ಗಳು ಮತ್ತು ಸರಕಾರಿ ಪ್ರತಿನಿಧಿಗಳಿಂದ ನಿರ್ವಹಿಸಲ್ಪಡುವ ಸಹಾಯವಾಣಿಗಳು ಇರುತ್ತವೆ. ಈ ಎಲ್ಲಾ ಸೇವೆಗಳು ಉಚಿತವಾಗಿ ಲಭ್ಯವಿರಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಂಗಳೂರು ಶಾಖೆಯ ಉಪಾಧ್ಯಕ್ಷ ಸಿಎ ಡೇನಿಯಲ್ ಮಾರ್ಚ್ ಪೆರೇರಾ, ಕಾರ್ಯದರ್ಶಿ ಮಮತಾ ರಾವ್, ಖಜಾಂಚಿ ಸಿಎ ಬಾಲಸುಬ್ರಹ್ಮಣ್ಯಂ ಎನ್. ಸಿಐಸಿಎಎಸ್ ಐ ಅಧ್ಯಕ್ಷ ಸಿಎ ನಿತಿನ್ ಬಾಳಿ, ಸಿಎ ಕೃಷ್ಣಾನಂದ ಪೈ ಉಪಸ್ಥಿತರಿದ್ದರು.