ಮಂಗಳೂರು ಜುಲೈ, 22 : ಬಿಜೈ ಕಾಪಿಕಾಡ್ನಲ್ಲಿ ಶ್ರೀ ವಿನಾಯಕ ಫ್ರೆಂಡ್ಸ್ ಕ್ಲಬ್ (ರಿ) ವತಿಯಿಂದ 5ನೇ ವರ್ಷದ ಆಟಿಡೊಂಜಿ ಕೂಟ ಜುಲೈ,, 20 ರವಿವಾರ ಕುದ್ಮುಲ್ ರಂಗರಾವ್ ಸ್ಮಾರಕ ಸಭಾಂಗಣದಲ್ಲಿ ನಡೆಯಿತು.
ಸಮಾರಂಭವನ್ನು ಮಂಗಳೂರು ಮಹಾನಗರಪಾಲಿಕೆಯ ಮಾಜಿ ಮೇಯರ್, ಸದಸ್ಯರು ಎಂ. ಶಶಿಧರ್ ಹೆಗ್ಡೆ ಅವರು ಉದ್ಘಾಟಿಸಿ. ಮಾತಾಡಿದರು.
ಶಿಕ್ಷಕಿ ವಿಜಯಲಕ್ಷ್ಮೀ ಕಟೀಲು ಅವರು ಮಾತಾಡಿ, ಹಿಂದಿನ ಕಾಲದಲ್ಲಿ ಆಟಿ ದಿನಗಳು ಕಷ್ಟಕರವಾಗಿದ್ದವು. ಅಂದಿನ ದಿನಗಳನ್ನು ನೆನಪಿಸುವ ಸಲುವಾಗಿ ಈ ಆಟಿಡೊಂಜಿ ಕೂಟ ಕಾರ್ಯಕ್ರಮ ಆಚರಿಸುತ್ತಾರೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ವಿನಾಯಕ ಫ್ರೆಂಡ್ಸ್ ಕ್ಲಬ್ ಇದರ ಅಧ್ಯಕ್ಷರು ಎಚ್. ನವೀನ್ ಕುಮಾರ್ ಹೆಜಮಾಡಿ,ಮಂಗಳೂರು ಮಹಾನಗರ ಪಾಲಿಕೆ ಮಾಜಿ ಉಪ ಮೇಯರ್ ರಜನೀಶ್ ಕಾಪಿಕಾಡ್ ಸಮಾರಂಭದಲ್ಲಿ ಮಾತಾಡಿದರು.
ಸಮಾರಂಭದಲ್ಲಿ ಸಾಧಕರಿಗೆ ಸನ್ಮಾನ, 2025ರ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಕಾರ್ಯಕ್ರಮದಲ್ಲಿ ಮಂಗಳೂರು ಪ್ರಾಥಮಿಕ ಆರೋಗ್ಯ ಕೇಂದ್ರ ಬೋಂದೆಲ್ ನ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಆಶಾ ಸೋಮಶೇಖರ್, ನಮ್ಮ ಕುಡ್ಲ ಟಿ.ವಿ. ಚಾನೆಲ್ ನಿರೂಪಕಿ ಪ್ರಿಯ ಹರೀಶ್, ಬಿಜೈ ಕಾಪಿಕಾಡ್ ಶ್ರೀ ಕುದ್ಮುಲ್ ರಂಗರಾವ್ ಸ್ಮಾರಕ ಸೇವಾ ಸಂಘದ ಅಧ್ಯಕ್ಷರು, ಉಮೇಶ್ ಕುಮಾರ್ ಕಾಪಿಕಾಡ್, ಸಮಾಜ ಸೇವಕಿ ಹಾಗೂ ಯೋಗ ಶಿಕ್ಷಕಿ ಸುನಂದ ಕೊಟ್ಟಾರ ಕ್ರಾಸ್ ಮೊದಲಾದವರು ಉಪಸ್ಥಿತರಿದ್ದರು.