ಮಂಗಳೂರು ,ಜುಲೈ, 24 : ಪಂಪ್ ವೆಲ್ ನಲ್ಲಿರುವ ಇಂಡಿಯಾ ಆಸ್ಪತ್ರೆ ಹಾಗೂ ಹೃದಯ ಸಂಸ್ಥೆಯು
ಎರಡು ವಾಲ್ವ್-ಇನ್-ವಾಲ್ವ್ ಟಿ ಎವಿ ಆರ್ ಅಪರೂಪದ ಚಿಕಿತ್ಸಾ ಪ್ರಕ್ರಿಯೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಈ ಸ್ವರೂಪದ ಬಹು ಸವಾಲಿನ ಚಿಕಿತ್ಸೆ ಕರಾವಳಿಯ ಭಾಗದಲ್ಲಿ ನಡೆಯುವುದು ಇದೇ ಮೊದಲು ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಯೂಸುಫ್ ಕುಂಬ್ಳೆ ಅವರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತೀವ್ರವಾದ ಆಯೋರ್ಟಿಕ್ ವಾಲ್ವ್ ರೋಗ ಹೊಂದಿರುವ ರೋಗಳಿಗೆ ಸಾಮಾನ್ಯವಾಗಿ ಹೃದಯ ಶಸ್ತ್ರಚಿಕಿತ್ಸೆಯ ಮೂಲಕ ವಾಲ್ವ್ ಬದಲಾವಣೆ ಮಾಡಲಾಗುತ್ತದೆ. ಆದರೆ ಸುಮಾರು 10ರಿಂದ 15 ವರ್ಷಗಳಲ್ಲಿ ಆ ವಾಲುಗಳು ಕುಗ್ಗಿ ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ. ಪುನಃ ವಾಲ್ವ್ ಬದಲಿಸಲು ಮತ್ತೆ ತೆರೆದ ಹೃದಯದ ಶಸ್ತ್ರ ಚಿಕಿತ್ಸೆ ಅಗತ್ಯವಿದ್ದು, ಇದು ವಯಸ್ಕ ರೋಗಿಗಳಿಗೆ ಅಪಾಯವನ್ನುಂಟು ಮಾಡುವ ಸಾಧ್ಯತೆ ಇದೆ. ಅಂತಹ ಪರಿಸ್ಥಿತಿಯಲ್ಲಿ, ನೂತನ ತಂತ್ರಜ್ಞಾನದ ಮೂಲಕ ಹಳೆಯ ವಾಲ್ವ್ ಒಳಗೆ ಹೊಸ ವಾಲ್ವ್ ಅನ್ನು ಸ್ವಾಪಿಸಲಾಗುತ್ತದೆ. ಆದರೆ ಈ ವಿಧಾನ ಸಾಮಾನ್ಯ ಟಿಎವಿಆರ್ ಗಿಂತ ಹೆಚ್ಚು ಜಟಿಲವಾದದ್ದು ತಾಂತ್ರಿಕ ನೈಪುಣ್ಯದಿಂದ ನಿಭಾಯಿಸಬೇಕಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಇಂಡಿಯಾನ ಆಸ್ಪತ್ರೆ ಮಾರುಕಟ್ಟೆ ಸಲಹೆಗಾರರಾದ ಶಿವಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.