ಮಂಗಳೂರು,ಜು. 27 : ಹೈ ಫೈವ್ ಸ್ಟುಡಿಯೋಸ್ ಮತ್ತು ಎಸಿಇ 22 ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಿದ್ಧಗೊಂಡ, ಸತ್ಯ ಎಸ್ ಶ್ರೀನಿವಾಸನ್ ನಿರ್ಮಿಸಿರುವ ‘ಎಲ್ಟು ಮುತ್ತಾ’ಎಂಬ ಕನ್ನಡ ಚಲನಚಿತ್ರ ಆ.1ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ನಟ ನವೀನ್ ಡಿ.ಪಡೀಲ್ ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನಟ ಶೌರ್ಯ ಪ್ರತಾಪ್ ಅವರು ಮಾತನಾಡಿ, ನಾನು ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುವ ಜೊತೆಗೆ ಸಹ ಬರವಣಿಗೆ ಮತ್ತು ಸಹ ನಿರ್ದೇಶನದಲ್ಲಿ ಕೂಡ ಸಾಥ್ ಕೊಟ್ಟಿದ್ದೇನೆ. ಇತರೆ ಭಾಷೆಗಳಿಂದ ಡಬ್ಬಿಂಗ್ ಗಾಗಿ ಬೇಡಿಕೆಯ ಕರೆ ಬಂದಿದೆ ಎಂದರು. ಸತ್ಯ ಶ್ರೀನಿವಾಸನ್ ಮತ್ತು ಪವೀಂದ್ರ ಮುತ್ತಪ್ಪ ನಿರ್ಮಾಣದ ಜೊತೆಗೆ ಇಡೀ ತಂಡವನ್ನು ಮುನ್ನೆಡೆಸುತ್ತಿದ್ದಾರೆ. ಪ್ರಸನ್ನ ಕೇಶವ ಅವರು ಈ ಚಿತ್ರಕ್ಕೆ ಸಂಗೀತವನ್ನು ನೀಡಿದ್ದಾರೆ ಎಂದವರು ಹೇಳಿದರು.
ನಿರ್ಮಾಪಕ ಸತ್ಯ ಶ್ರೀನಿವಾಸನ್ ಅವರು ಮಾತನಾಡಿ, ಈ ಚಿತ್ರದಲ್ಲಿ ರುಹಾನ್ ಆರ್ಯ, ಕಾಕ್ರೋಚ್ ಸುಧಿ, ನವೀನ್ ಪಡೀಲ್, ರಾಮ್,ಧನುದೇವಯ್ಯ, ಪ್ರಿಯಾಂಕಾ ಮಳಲಿ, ಸಮ್ರಾಟ್, ಅವಿರೇಶ್, ಪ್ರಶಾಂತ್, ತಾರಕ್, ಜೋಗಿ ರವಿ, ಇತರರು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಮೇಯಪ್ಪ ಭಾಸ್ಕರ ಕ್ಯಾಮೆರಾಮನ್, ಕೆ.ಯೇಸು ವಿನ ಸಂಕಲನವಿದೆ. ಇದರಲ್ಲಿ 5 ಹಾಡುಗಳಿದ್ದು, ಸುಮಾರು 75 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ ಎಂದು ನಿರ್ಮಾಪಕ ಸತ್ಯ ಶ್ರೀನಿವಾಸನ್ ತಿಳಿಸಿದ್ದಾರೆ.