ಉರ್ವಸ್ಟೋರ್, 04 : ಕುಂದಾಪ್ರದ ವಾಟ್ಸಾಪ್ ಬಳಗದ ವತಿಯಿಂದ ‘ಕುಂದಾಪ್ರ ಕನ್ನಡ ಹಬ್ಬ’ ಕಾರ್ಯಕ್ರಮ ಮಂಗಳೂರಿನ ಉರ್ವಸ್ಟೋರ್ ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ಬೆಂಗಳೂರಿನ ಕುಂದಾಪುರ ಕನ್ನಡ ಪ್ರತಿಷ್ಠಾನದ ಅಧ್ಯಕ್ಷ ಡಾ| ದೀಪಕ್ ಶೆಟ್ಟಿ ಅವರು ಮಾತಾನಾಡಿ, ಕುಂದಾಪುರದ ಮೂಲ ಭಾಷೆಯ ಆಚಾರ ವಿಚಾರ ಮತ್ತು ಅದರ ಮಹತ್ವವನ್ನು ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶ ದಿಂದ ಈ ‘ಕುಂದಾಪ್ರ ಕನ್ನಡ ಹಬ್ಬ’ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಮ್ಮವರೊಂದಿಗೆ ನಮ್ಮ ಭಾಷೆ ಬಳಸಿ ಅಗತ್ಯಕ್ಕೆ ತಕ್ಕಂತೆ ಇತರ ಭಾಷೆ ಬಳಸಬೇಕು.ಮಂಗಳೂರಿನಲ್ಲಿರುವ ಕುಂದಾಪ್ರ ಕನ್ನಡಿಗರು ತಮ್ಮ ಮೂಲ ಭಾಷೆಯೊಂದಿಗೆ ತುಳುವನ್ನು ಕೂಡ ಬಳಸುತ್ತಾರೆ. ಸ್ವಾತಂತ್ರ್ಯ ಹೋರಾಟ,ಸಾಹಿತ್ಯ, ಯಕ್ಷಗಾನ, ಧಾರ್ಮಿಕ ಕ್ಷೇತ್ರಕ್ಕೂಕುಂದಾಪುರದವರ ಕೊಡುಗೆ ಅಪಾರ.ಭಾವನಾತ್ಮಕ ಸಂಬಂಧ, ಭಾಷೆಯ ಬಗ್ಗೆ ಮಾತನಾಡುವವರ ಅಭಿಮಾನದಿಂದ ವಿಶ್ವ ಕುಂದಾಪುರ ಕನ್ನಡ ದಿನ ಯಶಸ್ವಿಯಾಗಿದೆ ಎಂದರು.
ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಅಧ್ಯಕ್ಷ ಕಿಶೋರ್ ಕುಮಾರ್ ಬಿ. ಮಾತನಾಡಿ, ಭಾಷೆಯ ಹೆಸರಿನಲ್ಲಿ ವಿಶ್ವ ಮಟ್ಟದ ಕಾರ್ಯಕ್ರಮ ಆಯೋಜನೆಯ ಕೀರ್ತಿ ಕುಂದಾಪ್ರ ಕನ್ನಡಕ್ಕೆ ಸಲ್ಲುತ್ತದೆ.ತುಳುವಿನಂತೆ ಕುಂದಾಪ್ರ ಕನ್ನಡ ಭಾವನಾತ್ಮಕ ಭಾಷೆಯಾಗಿದ್ದು ಯುವ ಪೀಳಿಗೆ ಭಾಷೆಯನ್ನು ಬಳಸುವುದು ಅಗತ್ಯ,ಎಂದರು.
ಸಿಎಎಸ್.ಎಸ್. ನಾಯಕ್ ನಾಯಕ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಈ ಸಂದರ್ಭದಲ್ಲಿ ಸಾಧಕರಾದ ಡಾ| ಅಣ್ಣಯ್ಯ ಕುಲಾಲ್, ಡಾ|ಅರುಣ್ ಕುಮಾರ್ ‘ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ಕುಂದಾಪ್ರದ ವಾಟ್ಸಾಪ್ ಬಳಗದ ಅಧ್ಯಕ್ಷೆ ಮಾಲಾ ಎಸ್. ಶೆಟ್ಟಿ ಪ್ರಸ್ತಾವಿಸಿ, ಸ್ವಾಗತಿಸಿದರು. ನಯನಾ, ಕರುಣಾಕರ ಬಳ್ಳೂರು ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಜಿ.ಕೆ.ಶೆಟ್ಟಿ, ಸಂಚಾಲಕ ಸಂತೋಷ್ ಶೆಟ್ಟಿ ಕಾರ್ಯದರ್ಶಿ ಲಿಖಿತಾ ಶೆಟ್ಟಿ, ಕೋಶಾಧಿಕಾರಿ ಶರತ್ ಆಚಾರ್ಯ ಉಪಸ್ಥಿತರಿದ್ದರು.
ಬೆಳಗ್ಗೆ ನಡೆದ ಗ್ರಾಮೀಣ ಕ್ರೀಡಾಕೂಟವನ್ನು ಮನಸ್ವಿನಿ ಆಸ್ಪತ್ರೆಯ ಡಾ| ರವೀಶ್ ತುಂಗ ಉದ್ಘಾಟಿಸಿದರು. ರೆಡ್ ಕ್ರಾಸ್ ಚೇರ್ಮನ್ ಸಿಎ ಶಾಂತಾರಾಮ್ ಶೆಟ್ಟಿ ಭಾಗವಹಿಸಿದ್ದರು.