ಬೆಂಗಳೂರು,ನ.16 : ಡಾ. ಲೀಲಾ ಮೋಹನ್ ಪಿ.ವಿ.ಆರ್. ತಾವೇ ನಿರ್ಮಿಸಿರುವ ಜೊತೆ ನಾಯಕನಾಗಿ ಅಭಿನಯಿಸಿರುವ “ನಾಯಿ ಇದೆ ಎಚ್ಚರಿಕೆ” ಚಿತ್ರವನ್ನು ಇದೇ ನವಂಬರ್ 28ರಂದು ರಾಜ್ಯದ್ಯಂತ ಅದ್ದೂರಿಯಾಗಿ ಬಿಡುಗಡೆ ಮಾಡಲು ಸಿದ್ಧತೆಗಳನ್ನು ಮಾಡಿಕೊಂಡಿರುತ್ತಾರೆ.
ಡಾ. ಲೀಲಾ ಮೋಹನ್ ಪಿ.ವಿ.ಆರ್. ಮೂಲತಃ ಬೆಂಗಳೂರಿನವರಾಗಿದ್ದು , ಇವರು ವೈದ್ಯರು, ಲೇಖಕರು, ಮ್ಯಾರಥಾನ್ ರನ್ನರ್ , ನಟರು ಆಗಿರುತ್ತಾರೆ. ಎಂ.ಬಿ.ಬಿ.ಎಸ್ ಮತ್ತು ಎಂ.ಡಿ ಪದವಿಗಳನ್ನು ಪೂರ್ಣಗೊಳಿಸಿದ ನಂತರ ಬೆಂಗಳೂರಿನ ಪ್ರಮುಖ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆಯನ್ನು ಸಲ್ಲಿಸಿರುತ್ತಾರೆ. ಸರ್ಜಾಪುರ ಬಳಿ ಇರುವ ರೇನ್‌ಬೋ ಆಸ್ಪತ್ರೆ , ಮದರ್‌ಹುಡ್ ಆಸ್ಪತ್ರೆ ಹಾಗೂ ಮಣಿಪಾಲ್ ಆಸ್ಪತ್ರೆಯಲ್ಲಿ ಪರಾಮರ್ಶಕ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದು, ಹೆಚ್ ಎಸ್ ಆರ್ ಲೇಔಟ್‌ನಲ್ಲಿ ಪಡಿತೇಮ್ ಹೆಲ್ತ್ ಕೇರ್ ಎಂಬ ಡೇ ಕೇರ್ ವೈದ್ಯಕೀಯ ಕೇಂದ್ರದ ಸಂಸ್ಥಾಪಕರುತ್ತಾರೆ.
ಡಾ. ಲೀಲಾ ಮೋಹನ್ ಅವರು ಧೂಮಪಾನ ಮತ್ತು ನಿಕೋಟಿನ್ ವ್ಯಸನದಿಂದ ಹೊರಬರುವುದು ಹೇಗೆ ಎಂಬುದನ್ನು ಪುಸ್ತಕ ಮೂಲಕ ತಂದಿದ್ದು, ಕ್ರೀಡೆ ಮತ್ತು ಮ್ಯಾರಥಾನ್ ಓಟದಲ್ಲಿ ಮ್ಯಾರಥಾನ್ ರನ್ನರ್ ಆಗಿರುವ ಅವರು ಕರ್ನಾಟಕ ಹಾಗೂ ಭಾರತದ ಅನೇಕ ಮ್ಯಾರಥಾನ್‌ಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗಳಿಸಿರುತ್ತಾರೆ.ಇವರು ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು, ನೃತ್ಯ, ನಾಟಕ, ಮಕ್ಕಳ ಪ್ರತಿಭಾ ಸ್ಪರ್ಧೆಗಳು, ಮಾದರಿಂಗ್ ಶೋಗಳು, ಚಾರಿಟಿ ಕಾರ್ಯಕ್ರಮಗಳಲ್ಲಿ ಮುಖ್ಯ ಅತಿಥಿಗಳಾಗಿ ಸಹಕಾರ ನೀಡಿರುತ್ತಾರೆ. ಹೆಜ್ಜೆ ಹೆಜ್ಜೆ ರಂಗ ತಂಡ , ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮ, ಶಿಕ್ಷಣ ಟ್ರಸ್ಟ್ , ದೇವಸ್ಥಾನೋತ್ಸವಗಳು ಮತ್ತು ಸಮುದಾಯ ಚಟುವಟಿಕೆಗಳಲ್ಲಿಸಾಥ್ ನೀಡಿದ್ದಾರೆ.
ಡಾ. ಲೀಲಾ ಮೋಹನ್ ಪಿ.ವಿ.ಆರ್. ಅವರು 2016ರಲ್ಲಿ ಗಿರಿರಾಜ. ಬಿ.ಎಂ. , ಪರಮೇಶ್, ಕಲಾಮಧ್ಯಮ ಶಿಕ್ಷಕರಿಂದ ಅಭಿನಯ ಮತ್ತು ರಂಗ ಭೂಮಿ ತರಬೇತಿ ಪಡೆದ ನಂತರ ಕಿರು ಚಿತ್ರಗಳಾದ ಆಕ್ಸಿಡೆಂಟ್, ಓ ಎಸ್ ಟಿ, ಹೈವೇ , ಟ್ರಕ್ ಚಿತ್ರಗಳಲ್ಲಿ ಮತ್ತು, 2018ರಿಂದ ಆಲ್ಬಮ್ ಹಾಡುಗಳಲ್ಲೂ ಕಾಣಿಸಿಕೊಂಡಿದ್ದಾರೆ. ಈಗ ತಾವೇ ನಿರ್ಮಿಸಿರುವ “ನಾಯಿ ಇದೆ ಎಚ್ಚರಿಕೆ” ಚಿತ್ರ ಕೂಡ ಬಿಡುಗಡೆಗೆ ಸಿದ್ಧವಿದೆ. ಈ ಚಿತ್ರ ನಿರ್ಮಿಸುವುದರ ಜೊತೆಗೆ ನಾಯಕನಾಗಿ ಕೂಡ ಅಭಿನಯಿಸಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.











