ಬೆಂಗಳೂರು,ನ.13 : ಶರೀಫ್ ಮೊಹಮ್ಮದ್ ಅವರು ಕ್ಯೂಬ್ಸ್ ಎಂಟರ್ಟೈನ್ ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿರುವ ಭವ್ಯ ಆಕ್ಷನ್ ಥ್ರಿಲ್ಲರ್ ‘ಕಾಟ್ಟಾಲನ್’ ಮಲಯಾಳಂ ಚಿತ್ರ ವಿದೇಶಿ ವಿತರಣಾ ಒಪ್ಪಂದವನ್ನು ಪಡೆದುಕೊಂಡಿದೆ. ಫಾರ್ಸ್ಫಿ ಲ್ಮ್ಸ್ ಸಹಯೋಗದೊಂದಿಗೆ ಈ ಚಿತ್ರವು ಅಂತರಾಷ್ಟ್ರೀಯ ಬಿಡುಗಡೆಗೆ ಸಜ್ಜಾಗುತ್ತಿದೆ. ಪ್ರಮುಖ ಪಾತ್ರದಲ್ಲಿ ಆಂಟೋನಿ ವರ್ಗೀಸ್ ಪೆಪೆ ನಟಿಸಿರುವ ‘ಕಾಟ್ಟಾಲನ್’ ಚಿತ್ರವು ‘ಮಾರ್ಕೋ’ ನಂತರ, ಶರೀಫ್ ಮೊಹಮ್ಮದ್ ನಿರ್ಮಿಸಿರುವ ಕ್ಯೂಬ್ಸ್ ಎಂಟರ್ಟೈನ್ಮೆಂಟ್ಸ್ನ ಮತ್ತೊಂದು ದೊಡ್ಡ ಬಜೆಟ್ ಚಿತ್ರವಾಗಿದೆ ಎಂದು ಚಿತ್ರತಂಡ ಹೇಳಿದೆ.
ಥೈಲ್ಯಾಂಡ್‌ನಲ್ಲಿ ನಡೆದ ಚಿತ್ರೀಕರಣದ ವೇಳೆ, ಆನೆ ಒಳಗೊಂಡಿದ್ದ ಅತಿ ತೀವ್ರವಾದ ಆಕ್ಷನ್ ದೃಶ್ಯವೊಂದರಲ್ಲಿ ನಾಯಕ ನಟ ಆಂಟೋನಿ ವರ್ಗೀಸ್ ಅವರು ಗಾಯಗೊಂಡಿದ್ದರು.’ಕಾಟ್ಟಾಲನ್’ ಚಿತ್ರದ ಆಕ್ಷನ್ ಸೀಕ್ವೆನ್ಸ್‌ಗಳಿಗೆ ಸ್ಟಂಟ್ ಮಾಸ್ಟರ್ ಕೆಚಾ ಖಾಂಫಕ್ಡೀ ಮತ್ತು ಅವರ ತಂಡವು ಮೇಲ್ವಿಚಾರಣೆ ನಡೆಸಿದ್ದಾರೆ. ಒಂಗ್-ಬಕ್ ಚಿತ್ರಗಳ ಮೂಲಕ ಖ್ಯಾತಿ ಪಡೆದ ಆನೆ “ಪಾಂಗ್” ಕೂಡ ‘ಕಾಟ್ಟಾಲನ್’ನಲ್ಲಿ ಕಾಣಿಸಿಕೊಳ್ಳಲಿದೆ.ಕಾಂತಾರ ಮತ್ತು ಮಹಾರಾಜ ಚಿತ್ರದಸಂಗೀತ ನಿರ್ದೇಶಕರು ಅಜನೀಶ್ ಲೋಕನಾಥ್ ಇವರ ಸಂಗೀತವಿದೆ.
ಪುಷ್ಪಾ ಮತ್ತು ಜೈಲರ್ ಚಿತ್ರದಕಬೀರ್ ದುಹಾನ್ ಸಿಂಗ್,ಮತ್ತೊಬ್ಬ ತೆಲುಗು ನಟ ರಾಜ್ ತೀರಂದಾಸು,ಮಲಯಾಳಂ ಚಿತ್ರರಂಗದಿಂದ: ಜಗದೀಶ್, ಸಿದ್ದಿಕ್, ವ್ಲಾಗರ್-ಗಾಯಕಿ ಹನನ್ ಶಾ, ಮತ್ತು ರ್ಯಾಪರ್ ಬೇಬಿ ಜೀನ್ ಚಿತ್ರಕಥೆಯನ್ನು ಜೋಬಿ ವರ್ಗೀಸ್, ಪಾಲ್ ಜಾರ್ಜ್, ಮತ್ತು ಜೆರೋ ಜಾಕೋಬ್ ಬರೆದಿದ್ದು, ಸಂಭಾಷಣೆಗಳನ್ನು ಉಣ್ಣಿ ಆರ್ ಒದಗಿಸಿದ್ದಾರೆ.’ಕಾಟ್ಟಾಲನ್’ ಚಿತ್ರವು ಮಲಯಾಳಂ, ತಮಿಳು, ತೆಲುಗು, ಕನ್ನಡ, ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ವರದಿಗಳ ಪ್ರಕಾರ ಮೇ 2026 ರಲ್ಲಿ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.











