ಮಂಗಳೂರು : ರಾಷ್ಟ್ರೀಯ ಹೆದ್ದಾರಿ 66ರ ನಂತೂರು ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನದ ಸವಾರ ಸಾವನ್ನಪ್ಪಿದ್ದಾರೆ.ಮೃತ ವ್ಯಕ್ತಿಯನ್ನು ಕಾವೂರು ಜ್ಯೋತಿನಗರದ ನಿವಾಸಿ ಪ್ರದೀಪ್ (24) ಎಂದು ಗುರುತಿಸಲಾಗಿದೆ.
ಈ ಘಟನೆ ಸೋಮವಾರ ಸಂಜೆ ಸುಮಾರು 6ಕ್ಕೆ ನಂತೂರು ಬಳಿ ಸ್ಕೂಟರ್ ಮತ್ತು ಕಾರು ಡಿಕ್ಕಿಯಾಗಿ ಬಳಿಕ ಲಾರಿಗೆ ಸ್ಕೂಟರ್ ಡಿಕ್ಕಿಯಾದ ಪರಿಣಾಮವಾಗಿ ಸಂಭವಿಸಿದೆ. ಅಪಘಾತದಲ್ಲಿ ಪ್ರದೀಪ್‌ರ ತಲೆಗೆ ಗಂಭೀರ ಗಾಯವಾಗಿ ಸಾವನ್ನಪ್ಪಿದ್ದಾರೆ.
ಈ ಘಟನೆಯ ಬಗ್ಗೆ ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.