ಮುಂಬೈ, ಮಾ. 24 : ‘ಪರಿಣೀತಾ’ ಚಿತ್ರ ಖ್ಯಾತಿಯ ಬಾಲಿವುಡ್ ನಿರ್ದೆಶಕ ಪ್ರದೀಪ್ ಸರ್ಕಾರ್ ( 67) ಶುಕ್ರವಾರ ಮುಂಜಾನೆ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಅವರ ಪತ್ನಿ ಪಾಂಚಾಲಿ ತಿಳಿಸಿದ್ದಾರೆ.
ಮಾರ್ಚ್ 22 ರಂದು ಅವರಿಗೆ ವೈರಲ್ ಜ್ವರ ಕಾಣಿಸಿಕೊಂಡಿತ್ತು. ಕೆಲವು ಔಷಧಿ ತೆಗೆದುಕೊಂಡರೂ ಜ್ವರ ಕಡಿಮೆಯಾದರೂ ಸಂಪೂರ್ಣ ಗುಣಮುಖರಾಗಿರಲಿಲ್ಲ. ಹೀಗಾಗಿ ಅವರನ್ನುಆಸ್ಪತ್ರೆಗೆ ದಾಖಲಿಸಲಾಗಿತು. ಆಸ್ಪತ್ರೆಯಲ್ಲಿ ಶುಕ್ರವಾರ ಬೆಳಗಿನ ಜಾವ 3.10ರಿಂದ 3.30ರ ನಡುವೆ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಪತ್ನಿ ತಿಳಿಸಿದ್ದಾರೆ.