ಶಿವಮೊಗ್ಗ, ಜ. 30 : ಆಟವಾಡಲೆಂದು ಸಿಮೆಂಟ್ ಜಿಂಕೆ ಮೇಲೆ ಏರಿದ್ದ ಮಗುವೊಂದು ಜಿಂಕೆ ಪ್ರತಿಮೆ ಮುರಿದು ಬಿದ್ದು ಮೃತಪಟ್ಟ ಘಟನೆ ಮುದ್ದಿನಕೊಪ್ಪದಲ್ಲಿರುವ ಟೀ ಪಾರ್ಕ್ನಲ್ಲಿ ನಡೆದಿದೆ.
ಮೃತಪಟ್ಟ ಬಾಲಕಿ ಶಿವಮೊಗ್ಗ ದ ಹರೀಶ್ ಹಾಗೂ ಲಕ್ಷ್ಮೀ ದಂಪತಿ ಪುತ್ರಿ ಸಮೀಕ್ಷಾ(6) ಎಂದು ಗುರುತಿಸಲಾಗಿದೆ.
ಭಾನುವಾರದಂದು ಟೀ ಪಾರ್ಕ್ನಲ್ಲಿ ಆಟವಾಡಲೆಂದು ಮಗು ಸಿಮೆಂಟ್ ಜಿಂಕೆ ಮೇಲೆ ಕುಳಿತುಕೊಂಡಿದ್ದು, ಭಾರ ತಾಳರಾದರೆ ಸಿಮೆಂಟ್ ಜಿಂಕೆ ಮುರಿದು ಬಿದ್ದು ಅವಘಡ ಸಂಭವಿಸಿದೆ ಎನ್ನಲಾಗಿದೆ.