ಬೆಳ್ತಂಗಡಿ, ಮಾ 04 : ಕೊಕ್ಕಡದಲ್ಲಿ ನೀರಿನ ಟ್ಯಾಂಕರ್ ಪಲ್ಟಿಯಾಗಿ ಕಾರ್ಮಿಕನೊರ್ವ ಟ್ಯಾಂಕರ್ ನ ಅಡಿಗೆ ಸಿಲುಕಿ ಮೃತಪಟ್ಟ ಘಟನೆ ಮಾ.1 ರಂದು ನಡೆದಿದೆ. ಹಾವೇರಿ ನಿವಾಸಿಯಾಗಿರುವ ಸುರೇಶ್ ಮಲ್ಲಪ್ಪ ಹೊಸಮನಿ ಮೃತರು.
ಕೊಕ್ಕಡ ಗ್ರಾಮದ ಮೈಪಾಳದಲ್ಲಿ ಸೇತುವೆ ಮತ್ತು ಡ್ಯಾಮ್ ಕಾಮಗಾರಿ ನಡೆಯುತ್ತಿದ್ದು,ಟ್ಯಾಂಕರ್ ನಲ್ಲಿ ನೀರು ತುಂಬಿಕೊಂಡು ಬರುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಮಗುಚಿ ಬಿದ್ದಿದೆ. ಈ ವೇಳೆ ಟ್ಯಾಂಕರ್ ಅಡಿಗೆ ಸಿಲುಕಿದ ಸುರೇಶ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.