Author: admin

ನವದೆಹಲಿ,ಜ. 23:ಸೋಮವಾರ ತಡರಾತ್ರಿ ಚೀನಾದ ದಕ್ಷಿಣ ಕ್ಸಿನ್ಜಿಯಾಂಗ್ ನ ಲ್ಲಿ 7.2 ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿದೆ. ಯಾವುದೇ ಸಾವು-ನೋವುಗಳು ಮತ್ತು ಆಸ್ತಿಪಾಸ್ತಿಗಳು ಹಾನಿಯಾದ ಬಗ್ಗೆ ವರದಿಯಾಗಿಲ್ಲ. ರಿಕ್ಟರ್ ಮಾಪಕದಲ್ಲಿ ಭೂಕಂಪನ ತೀವ್ರತೆ 7.2 ಎಂದು ಗುರುತಿಸಲಾಗಿದ್ದು ಸುಮಾರು 80 ಕಿಮೀ ಆಳದಲ್ಲಿ ಭೂಕಂಪನದ ಕೇಂದ್ರಬಿಂದು ಪತ್ತೆಯಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ರಾಷ್ಟ್ರ ರಾಜಧಾನಿ ದೆಹಲಿ-ಎನ್ಸಿಆರ್ನ ಕೆಲವು ಭಾಗಗಳಲ್ಲಿ ಕಂಪನದ ಅನುಭವವಾಗಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ .

Read More

ಅಯೋಧ್ಯೆ, ಜ.22 : ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ಶಾಸ್ತ್ರೋಕ್ತವಾಗಿ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬೆಳ್ಳಿ ರಾಮಮಂದಿರ ಪ್ರತಿರೂಪವನ್ನು ಉಡುಗೊರೆಯಾಗಿ ನೀಡಿದರು.ಗೋವಿಂದ್ ದೇವ್ ಗಿರಿ ಜಿ ಮಹಾರಾಜ್ ಸ್ವಾಮೀಜಿ ಮೋದಿಗೆ ಶಾಲು ಹೊದಿಸಿ ಗೌರವಿಸಿದರು. ಅಯೋಧ್ಯೆಯಲ್ಲಿ ಮಧ್ಯಾಹ್ನ 12 ಗಂಟೆ 30 ನಿಮಿಷ 32 ಸೆಕೆಂಡ್ಗಳ ಮಧ್ಯೆ ಅಭಿಜಿತ್ ಮುಹೂರ್ತದಲ್ಲಿ ಶಾಸ್ತ್ರೋಕ್ತವಾಗಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಾಯಿತು. ಅರ್ಚಕರು, ಪಂಡಿತರು ಹಾಗೂ ಯಜಮಾನ ಸ್ಥಾನದಲ್ಲಿದ್ದ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ನೆರವೇರಿತು. ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಸಿಎಂ ಯೋಗಿ ಆದಿತ್ಯನಾಥ್, ಗುಜರಾತ್ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಮತ್ತಿತರರು ಉಪಸ್ಥಿತರಿದ್ದರು.

Read More

ಮಂಗಳೂರು, ಜ. 21 : ಮಂಗಳೂರಿನ ಕಡಲತೀರದಲ್ಲಿ ಮೊದಲಬಾರಿಗೆ ಕಡಲತೀರಕ್ಕೆ ಬಂದು ಮೊಟ್ಟೆಗಳನ್ನಿಟ್ಟು ಹೋಗುವ ವಿಶಿಷ್ಟ ಬದುಕಿನ ಆಲಿವ್ ರಿಡ್ಲೆ ಕಡಲಾಮೆ ಮೊಟ್ಟೆಗಳು  ಪತ್ತೆಯಾಗಿವೆ. ಸುರತ್ಕಲ್ ಆಸುಪಾಸಿನ ಕಡಲತೀರದ ಬಳಿಯ ಮೂರು ಕಡೆಗಳಲ್ಲಿ ಆಲಿವ್ ರಿಡ್ಲೆ ಅಮೆಗಳು ಬಂದು ಮೊಟ್ಟೆ ಇರಿಸಿ ಹೋಗಿರುವುದನ್ನು ಅರಣ್ಯ ಇಲಾಖೆ ಸಿಬಂದಿ ಪತ್ತೆ ಮಾಡಿದ್ದು, ಸಂರಕ್ಷಣೆಗೂ ಕ್ರಮ ತೆಗೆದುಕೊಳ್ಳಲಾಗಿದೆ. ಈ ಮೊದಲು ಮಂಗಳೂರಿನಲ್ಲಿ ಎಲ್ಲಿಯೂ ಆಲಿವ್ ರಿಡ್ಲೆ ಮೊಟ್ಟೆಗಳು ಕಂಡು ಬರಲಿಲ್ಲ  ಹಾಗಾಗಿ ಅರಣ್ಯ ಇಲಾಖೆ ಈ ಬಾರಿ ಮೂರು ಸಮುದ್ರಗಳಲ್ಲಿ ಮಾನವ ಚಟುವಟಿಕೆ ಮೇಲೆ ನಿಯಂತ್ರಣ ಇದ್ದ ಕಾರಣ ಅದೇ ಸಮುದ್ರದಲ್ಲಿ ಮೊಟ್ಟೆ ಇರಿಸಿರುವುದು ಪತ್ತೆಯಾಗಿದೆ.

Read More

ಬಂಟ್ವಾಳ, ಜ. 20: ಶಾಲಾ ಬಾಲಕನೋರ್ವ ನೇತ್ರಾವತಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಸಂಜೆ ವೇಳೆ ನಾವೂರ ಎಂಬಲ್ಲಿ ಗುರುವಾರ  ನಡೆದಿದೆ. ಮೃತರನ್ನು ಅಲ್ಲಿಪಾದೆ ನಾವೂರ ಗ್ರಾಮದ ಕೋಡಿಬೈಲು ನಿವಾಸಿ ಪ್ರಜ್ವಲ್ ನಾಯಕ್ (13) ಎಂದು ಗುರುತಿಸಲಾಗಿದೆ. ನಾವೂರ ಗ್ರಾಮದ ನೆಕ್ಕಿಲಾರು ಎಂಬಲ್ಲಿ ಸ್ನೇಹಿತರ ಜೊತೆ ನದಿಯ ಬದಿಗೆ ತೆರಳಿದ ಸಂದರ್ಭ  ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

Read More

ಉತ್ತರ ಪ್ರದೇಶ, ಜ 19 : ಎಲ್ ಪಿ ಜಿ   ಸಿಲಿಂಡರ್ಗಳನ್ನು ಸಾಗಿಸುತ್ತಿದ್ದ ಟ್ರಕ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಭಾರಿ ಸ್ಫೋಟ ಸಂಭವಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ಶುಕ್ರವಾರ ನಡೆದಿದೆ. ಎಲ್ ಪಿ ಜಿ  ಸಿಲಿಂಡರ್ಗಳನ್ನು ತುಂಬಿದ್ದ ಟ್ರಕ್ ಲಕ್ನೋದಿಂದ ಗೊಂಡಾಗೆ ಬರುತ್ತಿದ್ದಾಗ ಗಡಿಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ನಂತರ ಒಂದರಂತೆ ಅನೇಕ ಸಿಲಿಂಡರ್ಗಳು ಸ್ಫೋಟಗೊಳ್ಳುವ ದೃಶ್ಯ ಕಂಡುಬಂದಿದೆ ಎಂದು ವರದಿಯಾಗಿದೆ. ಟ್ರಕ್ ಚಾಲಕ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

Read More

ಕಾವೂರು, ಜ. 18: ಇಲ್ಲಿನ ಶ್ರೀ ಮಹಾ ಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಮಹೋತ್ಸವ ವು ಜ.17, ಬುಧವಾರ ಶ್ರ ದ್ಧಾಭಕ್ತಿಯಿಂದ ನೆರವೇರಿತು.ಅಂದು ಬೆಳಿಗ್ಗೆ  ರುದ್ರಾಭಿಷೇಕ, 10.30ಕ್ಕೆ ರಥ ಕಲಶ, ಮಧ್ಯಾಹ್ನ ಮಹಾಪೂಜೆ ನಡೆದು ರಥಾರೋಹಣ ನೆರವೇರಿತು.ಬಳಿಕ ಮಹಾ ಅನ್ನ ಸಂತರ್ಪಣೆ ನಡೆದುರಾತ್ರಿ ಬ್ರಹ್ಮರಥೋತ್ಸವ ಸಂಪನ್ನಗೊಂಡಿತು. ಬಳಿಕ ಉತ್ಸವ, ಶ್ರೀಭೂತ ಬಲಿ, ಶಯನ, ಕವಾಟ ಬಂಧನ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಈ ಸಂಭ್ರಮ ದಲ್ಲಿ ಪಾಲ್ಗೊಂಡರು.

Read More

ಆಂಧ್ರಪ್ರದೇಶ, ಜ. 17 : ಆಂಧ್ರಪ್ರದೇಶ ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷೆಯಾಗಿ ವೈಎಸ್ ಶರ್ಮಿಳಾ ನೇಮಕಗೊಂಡಿದ್ದಾರೆ. ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಸಹೋದರಿ ವೈಎಸ್ ಶರ್ಮಿಳಾ ಅವರನ್ನು ಮಂಗಳವಾರ ಕಾಂಗ್ರೆಸ್ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಶರ್ಮಿಳಾ ಅವರು ತಮ್ಮ ವೈಎಸ್ಆರ್ ತೆಲಂಗಾಣ ಪಕ್ಷವನ್ನು ಕಾಂಗ್ರೆಸ್ ಪಕ್ಷದದೊಂದಿಗೆ ವಿಲೀನಗೊಳಿಸುವುದಾಗಿ ಘೋಷಿಸಿದ್ದರಿಂದ ಜನವರಿ 4 ರಂದು ಕಾಂಗ್ರೆಸ್‌ಗೆ ಸೇರಿದ್ದಾರೆ ಎಂದು ವರದಿಯಾಗಿದೆ.

Read More

ಶ್ರೀನಗರ, ಜ. 16 : ಜಮ್ಮು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಗುರುವಾರ ಲಘು ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ. ಬೆಳಗಿನ ಜಾವ 3.49 ನಿಮಿಷಕ್ಕೆ ಭೂಮಿ ನಡುಗಿದ್ದು, ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 3.6 ದಾಖಲಾಗಿದೆ. ಭೂಕಂಪನದ ಕೇಂದ್ರ ಬಿಂದು 10 ಕಿ.ಮೀ. ಆಳದಲ್ಲಿ ಪತ್ತೆಯಾಗಿದೆ. ಎಂದು ಭೂಕಂಪನಶಾಸ್ತ್ರ ರಾಷ್ಟ್ರೀಯ ಕೇಂದ್ರ ತಿಳಿಸಿದೆ. ಭೂಕಂಪದಿಂದ ಯಾವುದೇ ಅನಾಹುತಗಳ ಬಗ್ಗೆ ನಡೆದಿಲ್ಲ. ರಾತ್ರೋರಾತ್ರಿ ಭೂಮಿ ನಡುಗಿದ ಕಾರಣ ಜನರು ಭಯಭೀತರಾಗಿದ್ದಾರೆ ಎಂದು ವರದಿ ತಿಳಿಸಿದೆ.

Read More

ಉಡುಪಿ, ಜ. 15: ಉಡುಪಿ ಶ್ರೀಕೃಷ್ಣ ಮಠದ ವಾರ್ಷಿಕ ಜಾತ್ಸೋತ್ಸವ ಎಂದೇ ಕರೆಯುವ ಸಪ್ತೋತ್ಸವವು ಜ.15, ರವಿವಾರ ಹಗಲಿನ ರಥೋತ್ಸವ ‘ಚೂರ್ಣೋತ್ಸವ’ ದೊಂದಿಗೆ’ ಸಂಪನ್ನಗೊಂಡಿತು. ಬೆಳಗ್ಗೆ 8.30ಕ್ಕೆ ಮಹಾಪೂಜೆ ಬಳಿಕ ಶ್ರೀಕೃಷ್ಣ ಹಾಗೂ ಮುಖ್ಯಪ್ರಾಣ ದೇವರನ್ನು ಬ್ರಹ್ಮರಥದಲ್ಲಿರಿಸಿ ಪರ್ಯಾಯ ಶ್ರೀಪಾದರ ಸಹಿತ ಅಷ್ಟಮಠದ ಯತಿಗಳು ಮಂಗಳಾರತಿ ಬೆಳಗಿದರು. ಬಳಿಕ ಭಕ್ತರಿಗೆ ಪ್ರಸಾದಗಳನ್ನು ವಿತರಿಸಲಾಯಿತು. ಪರ್ಯಾಯ ಶ್ರೀಗಳ ಸಹಿತ ವಿವಿಧ ಮಠಾಧೀಶರು ಬ್ರಹ್ಮರಥವನ್ನು ಎಳೆಯುವ ಮೂಲಕ ಹಗಲು ತೇರಿನ ಮೆರವಣಿಗೆ ಪ್ರಾರಂಭಗೊಂಡಿತು ನಂತರ ವಸಂತ ಮಂಟಪದಲ್ಲಿ ಓಕುಳಿ ಪೂಜೆ, ಅಷ್ಟ ಮಠದ ಸ್ವಾಮೀಜಿಯವರಿಗೆ ಪರ್ಯಾಯ ಮಠದಿಂದ ಗೌರವ ಸಮರ್ಪಣೆ, ಸೇವಾಕರ್ತೃಗಳಿಗೆ ಪ್ರಸಾದ ವಿತರಣೆ ನಡೆಯಿತು. ಬಳಿಕ ಮಧ್ವ ಸರೋವರದಲ್ಲಿ ಶ್ರೀಕೃಷ್ಣ ಮುಖ್ಯಪ್ರಾಣದೇವರ ಅವಭೃತಥೋತ್ಸವ ನಡೆಯಿತು.

Read More

ಕೊಣಾಜೆ, ಜ. 14 : ನರಿಂಗಾನ ಕಂಬಳೋತ್ಸವ ವು ನರಿಂಗಾನ ಗ್ರಾಮದ ಮೋರ್ಲ ಬೋಳದ ಲವ-ಕುಶ ಜೋಡುಕರೆಯಲ್ಲಿ ಶನಿವಾರ ಉದ್ಘಾಟನೆಗೊಂಡಿತು. ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಯವರು ಕಂಬಳವನ್ನು ದೀಪ ಬೆಳಗಿಸಿ ಉದ್ಘಾಟಿಸಿ ನಂತರ ಮಾತನಾಡಿ, ಕಂಬಳ ಕ್ರೀಡೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನರಿಂಗಾನದ ವಿಸ್ತಾರವಾದ ಜಾಗದಲ್ಲಿ ಸರ್ಕಾರಿ ಕಂಬಳ ನಡೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ, ತುಳುನಾಡಿನ ಕೃಷಿ ಹಾಗೂ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿರುವ ಕಂಬಳ ಈ ನಾಡಿನ ಹೆಮ್ಮೆಯ ಕಲೆಯಾಗಿ ರಾಷ್ಟ್ರಮಟ್ಟದಲ್ಲಿ ಮನ್ನಣೆ ಪಡೆಯುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಕಂಬಳ ಸಮಿತಿ ಅಧ್ಯಕ್ಷರು ಹಾಗೂ ವಿಧಾನಸಭೆ ಅಧ್ಯಕ್ಷರಾದ ಯು.ಟಿ.ಖಾದರ್, ಕಂಬಳ ಸಮಿತಿಯ ಗೌರವಾಧ್ಯಕ್ಷರಾದ ವೆಂಕಪ್ಪ ಕಾಜವ ಮಿತ್ತಕೋಡಿ, ಮುಖಂಡರಾದ ಗುಣಪಾಲ್ ಕಡಂಬ, ಧಾರ್ಮಿಕ ಕ್ಷೇತ್ರದ ಮುಂದಾಳುಗಳಾದ ಪ್ರಮೋದ್ ರೈ, ಗುಣಕರ ಆಳ್ವ, ಕುರ್ನಾಡು ಗುತ್ತುವಿನ ಸುಧಾಕರ ಶೆಟ್ಟಿ, ಅರ್ಚಕರಾದ ರಾಘವೇಂದ್ರ ಆಚಾರ್, ಕಿನ್ಯ ಗುತ್ತು ನಾರಾಯಣ ಶೆಟ್ಟಿ, , ಮನಮೋಹನ ಕೊಂಡೆ ಮೊದಲಾದವರು ಉಪಸ್ಥಿತರಿದ್ದರು.

Read More