Subscribe to Updates
Get the latest creative news from FooBar about art, design and business.
Author: admin
ಬೆಂಗಳೂರು, ಫೆ. 02 : ರೈಲಿನಲ್ಲಿ ರಾತ್ರಿ ವೇಳೆ ಪ್ರಯಾಣ ಮಾಡುವವರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ರೈಲ್ವೆ ಇಲಾಖೆ ಹಲವಾರು ಜನಸ್ನೇಹಿ ಕ್ರಮಗಳನ್ನು ಕೈಗೊಂಡಿದೆ. ರಾತ್ರಿ 10 ಗಂಟೆಯ ನಂತರ ಪ್ರಯಾಣಿಕರ ಮೊಬೈಲ್ ಸೌಂಡ್ ಜಾಸ್ತಿ ಮಾಡಿದರೆ, ಅನಾವಶ್ಯಕವಾಗಿ ರೈಲಿನಲ್ಲಿ ಲೈಟ್ಸ್ ಆನ್ ಮಾಡಿದರೆ, ಜೋರಾಗಿ ಮಾತನಾಡಿದರೆ.. ಅಂಥವರ ವಿರುದ್ಧ ರೈಲ್ವೆ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ. ಸುರಕ್ಷಿತ ಹಾಗೂ ನೆಮ್ಮದಿಯ ಪ್ರಯಾಣಕ್ಕೆ ನೈರುತ್ಯ ರೈಲ್ವೆ ವಲಯ ಬೆಂಗಳೂರು ವಿಭಾಗವು ಹಲವು ಕ್ರಮ ಕೈಗೊಂಡಿದೆ.
ಕುಂದಾಪುರ, ಫೆ. 01 : ಕರ್ನಾಟಕ ಸರಕಾರದ ಮಾಂಗಲ್ಯ ಭಾಗ್ಯ ಯೋಜನೆಯಡಿಯಲ್ಲಿ ಉಚಿತ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮವು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಬುಧವಾರ ನಡೆಯಿತು. ಸುಬ್ರಹ್ಮಣ್ಯ ಪೂಜಾರಿ – ಅಶ್ವಿನಿ, ಅಜಿತ – ಮೂಕಾಂಬು, ವಿಠಲ – ಅನಿತ, ಅನಿಲ್ – ವಸಂತಿ, ಚಂದ್ರಶೇಖರ – ಜಲಜಾ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಈ ಸಂದರ್ಭ ವಧುವಿಗೆ 40 ಸಾವಿರ ರೂ. ಮೌಲ್ಯದ ಚಿನ್ನದ ತಾಳಿ, 2 ಚಿನ್ನದ ಗುಂಡು, ವರನಿಗೆ ಹಾರ, ಪಂಚೆ, ಶಲ್ಯ ಶರ್ಟ್ ಕೊಳ್ಳಲು 5 ಸಾವಿರ, ವಧುವಿಗೆ ಪ್ರೋತ್ಸಾಹ ಧನ(ಹೂವಿನ ಹಾರ, ಧಾರೆ ಸೀರೆ ಮತ್ತು ರವಿಕೆ ಕಣಕ್ಕಾಗಿ) ರೂ ಹತ್ತು ಸಾವಿರ ಸೇರಿದಂತೆ ಒಟ್ಟು 55 ಸಾವಿರ ಮೌಲ್ಯದ ಪ್ರೋತ್ಸಾಹಧನವನ್ನು ಪ್ರತಿ ದಂಪತಿಗಳಿಗೆ ವಿತರಿಸಲಾಯಿತು. ಕೊಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ವನಿತಾ ಉದಯ ಶೇರುಗಾರ್, ಕೊಲ್ಲೂರು ದೇವಳದ ಆಡಳಿತಾಧಿಕಾರಿ ರಶ್ಮಿ ಎಸ್. ಆರ್, ಕೊಲ್ಲೂರು ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ವೀರೇಶ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಕಳ, ಜ. 31 : ಅನಂತಪದ್ಮನಾಭ ದೇವಸ್ಥಾನ ಪರಿಸರದ ರಸ್ತೆ ಬದಿಯಲ್ಲಿ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಬುಧವಾರ ನಡೆದಿದೆ. ಮೃತರನ್ನು ಮೂಡುಬಿದ್ರಿ ಗಣೇಶ್ ಕಾಮತ್ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಕಾರ್ಕಳ ನಗರ ಠಾಣಾ ಪೊಲೀಸರು ಅಗಮಿಸಿದ್ದಾರೆ.
ಶಿವಮೊಗ್ಗ, ಜ. 30 : ಆಟವಾಡಲೆಂದು ಸಿಮೆಂಟ್ ಜಿಂಕೆ ಮೇಲೆ ಏರಿದ್ದ ಮಗುವೊಂದು ಜಿಂಕೆ ಪ್ರತಿಮೆ ಮುರಿದು ಬಿದ್ದು ಮೃತಪಟ್ಟ ಘಟನೆ ಮುದ್ದಿನಕೊಪ್ಪದಲ್ಲಿರುವ ಟೀ ಪಾರ್ಕ್ನಲ್ಲಿ ನಡೆದಿದೆ. ಮೃತಪಟ್ಟ ಬಾಲಕಿ ಶಿವಮೊಗ್ಗ ದ ಹರೀಶ್ ಹಾಗೂ ಲಕ್ಷ್ಮೀ ದಂಪತಿ ಪುತ್ರಿ ಸಮೀಕ್ಷಾ(6) ಎಂದು ಗುರುತಿಸಲಾಗಿದೆ. ಭಾನುವಾರದಂದು ಟೀ ಪಾರ್ಕ್ನಲ್ಲಿ ಆಟವಾಡಲೆಂದು ಮಗು ಸಿಮೆಂಟ್ ಜಿಂಕೆ ಮೇಲೆ ಕುಳಿತುಕೊಂಡಿದ್ದು, ಭಾರ ತಾಳರಾದರೆ ಸಿಮೆಂಟ್ ಜಿಂಕೆ ಮುರಿದು ಬಿದ್ದು ಅವಘಡ ಸಂಭವಿಸಿದೆ ಎನ್ನಲಾಗಿದೆ.
ಮಂಗಳೂರು, ಜ. 29 : ಪದವಿನಂಗಡಿ ನಿವಾಸಿ ಅಶೋಕ್ ಬಂಗೇರ ಅವರು ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ ಅಶೋಕ್ ಬಂಗೇರ ಅವರು ಮಂಗಳೂರಿನ ಪದವಿನಂಗಡಿ ಬಳಿ ಇರುವ ಕೊರಗಜ್ಜನ ಸಾನಿಧ್ಯದಲ್ಲಿ ಕೊರಗಜ್ಜನ ಸೇವೆ ಮಾಡಿಕೊಂಡು ಬರುತ್ತಿದ್ದರು. ಶುಕ್ರವಾರ ರಾತ್ರಿ ರಕ್ತೇಶ್ವರಿ ನೇಮ ಆದ ಬಳಿಕ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಹಲವು ವರ್ಷಗಳಿಂದ ಅವರು ತಮ್ಮನ್ನು ದೈವಾರಾಧನೆಯಲ್ಲಿ ತೊಡಗಿಸಿಕೊಂಡಿದ್ದರು.
ಚಂಡೀಗಢ, ಜ. 28 : ಕೇಂದ್ರದ ಮಾಜಿ ಸಚಿವ ಮತ್ತು ಚಂಡೀಗಢದ ಮಾಜಿ ಸಂಸದ ಹರ್ಮೋಹನ್ ಧವನ್ ದೀರ್ಘಕಾಲದ ಅನಾರೋಗ್ಯದದಿಂದ ಬಳಲುತ್ತಿದ್ದ ಅವರು ಮೊಹಾಲಿಯ ಖಾಸಗಿ ಆಸ್ಪತ್ರೆಯಲ್ಲಿ ಜ. 27 ರಂದು ನಿಧನರಾಗಿದ್ದಾರೆ. 1977 ರಲ್ಲಿ ರಾಜಕೀಯಕ್ಕೆ ಪ್ರವೇಶಿಸಿ ಧವನ್ ಅವರು ದಿವಂಗತ ಪ್ರಧಾನಿ ಚಂದ್ರಶೇಖರ್ ಸರ್ಕಾರದಲ್ಲಿ ಕೇಂದ್ರ ರಾಜ್ಯ ಸಚಿವರಾಗಿದ್ದರು. 1989 ರಲ್ಲಿ ಚಂಡೀಗಢ ಕ್ಷೇತ್ರದಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾದರು ಮತ್ತು ಚಂದ್ರಶೇಖರ್ ಅವರ ಸರ್ಕಾರದಲ್ಲಿ ನಾಗರಿಕ ವಿಮಾನಯಾನ ಸಚಿವರಾಗುವ ಮೂಲಕವೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದರು.
ಮಂಗಳೂರು, ಜ 27 : ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಅಧಿಕೃತ ಐಸ್ಕ್ರೀಂ ಪಾಲುದಾರನಾಗಿ ಕರಾವಳಿಯ ಹಾಂಗ್ಯೊ ಐಸ್ಕ್ರೀಂ ಸೇರ್ಪಡೆಗೊಂಡಿದೆ. ಐಪಿಎಲ್ 2024ನೇ ಆವೃತ್ತಿ ಪ್ರಾರಂಭವಾಗುತ್ತಿದ್ದು, ಈ ಭಾರಿ ರಾಯಲ್ ಚಾಲೆಂಜರ್ಸ್ (ಆರ್ ಸಿಬಿ) ತಂಡಕ್ಕೆ ಹಾಂಗ್ಯೊ ಐಸ್ಕ್ರೀಂ ಸಾಥ್ ನೀಡಲಿದೆ. ಈ ಕುರಿತು ಬೆಂಗಳೂರಿನಲ್ಲಿ ಎರಡೂ ಸಂಸ್ಥೆಗಳ ಮುಖ್ಯಸ್ಥರು ಒಡಂಬಡಿಕೆಗೆ ಸಹಿ ಹಾಕಿದ್ದು, ಈ ಮೂಲಕ ಕರಾವಳಿಯ ಹಾಂಗ್ಯೊ ಐಸ್ಕ್ರೀಂ ಅಧಿಕೃತವಾಗಿ ಪಾಲುದಾರ ಸಂಸ್ಥೆಯಾಗಿದೆ. ಕ್ರಿಕೆಟ್ ಸ್ಫೋಟಕ ಆಟದೊಂದಿಗೆ ಹಾಂಗ್ಯೋ ಐಸ್ಕ್ರೀಂನ ಆಹ್ಲಾದಕರ ಐಸ್ಕ್ರೀಂಗಳು ಸಂಭ್ರಮದ ವಾತಾವರಣಕ್ಕೆ ಕಾರಣವಾಗುತ್ತದೆ ಎಂದು ಹಾಂಗ್ಯೋ ಐಸ್ಕ್ರೀಮ್ಸ್ ಕಂಪೆನಿ ಪ್ರಕಟನೆಯಲ್ಲಿ ತಿಳಿಸಿದೆ.
ಕೊಲಂಬೋ, ಜ. 26 : ಕೊಲಂಬೊ-ಕಟುನಾಯಕೆ ಎಕ್ಸ್ಪ್ರೆಸ್ವೇಯಲ್ಲಿ ಗುರುವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಶ್ರೀಲಂಕಾದ ರಾಜ್ಯ ಸಚಿವ ಸನತ್ ನಿಶಾಂತ (48) ಮತ್ತು ಪೊಲೀಸ್ ಅಧಿಕಾರಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಗುರುವಾರ ಮುಂಜಾನೆ ಶ್ರೀಲಂಕಾದ ರಾಜ್ಯ ಸಚಿವ ಸನತ್ ನಿಶಾಂತ ಅವರು ಸಂಚರಿಸುತ್ತಿದ್ದ ವಾಹನವು, ಕಂಟೈನರ್ ಟ್ರಕ್ಗೆ ಡಿಕ್ಕಿ ಹೊಡೆದಿದ್ದು, ನಂತರ ರಸ್ತೆಯ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಸಚಿವರು, ಸಚಿವರ ಪೊಲೀಸ್ ಅಧಿಕಾರಿ , ಹಾಗೂ ವಾಹನ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಸಚಿವರು, ಪೊಲೀಸ್ ಅಧಿಕಾರಿ ಸಾವನ್ನಪ್ಪಿದ್ದು, ವಾಹನದ ಚಾಲಕ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರು, ಜ. 25 : ಪಂಬದ ಸಮಾಜವು ಕರಾವಳಿಯ ದೈವರಾಧನೆ ಮೂಲ ಸಂಸ್ಕೃತಿಯನ್ನು ಉಳಿಸುವ ಜೊತೆಗೆ ಮುಂದಿನ ಪೀಳಿಗೆಗೆ ಆ ಸಂಸ್ಕೃತಿಯನ್ನು ಪರಿಚಯಿಸುವ ಕೆಲಸವನ್ನು ಮಾಡುತ್ತಿದೆ. ಪಂಬದ ಸಮಾಜದ ಪರಂಪರೆ ಮತ್ತು ಸಂಸ್ಕೃತಿಯ ಬಗ್ಗೆ ಆಳವಾದ ಅಧ್ಯಯನ ನಡೆಸಬೇಕಾದರೆ ಪಂಬದರ ಅಧ್ಯಯನ ಪೀಠ ಸ್ಥಾಪಿಸಬೇಕಿದೆ. ಈ ನಿಟ್ಟಿನಲ್ಲಿ ಸಂಪೂರ್ಣ ಸಹಕಾರ ನೀಡುವೆ ಎಂದು ರಾಜ್ಯ ವಿಧಾನ ಸಭೆ ಸ್ಪೀಕರ್ ಯು.ಟಿ. ಖಾದರ್ ಪಂಬದರ ಅಭ್ಯುದಯ ಯುವಜನ ಸೇವಾ ಟ್ರಸ್ಟ್ ಪಡುಪೆರಾರ, ತುಳುವ ಬೊಳ್ಳಿ ಪ್ರತಿಷ್ಠಾನ,ಪಂಬದರ ಯಾನೇ ದೈವಾ ದಿಗರ ಸಮಾಜ ಸಂಘ ವತಿಯಿಂದ ಪುರಭವನದಲ್ಲಿ ರವಿವಾರ ನಡೆದ ‘ಪಂಬದೆರೆನಾ ಸಮಾವೇಶ-ಸಿರಿಮುಡಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕೇಮಾರು ಸಾಂದೀಪನಿ ಮಠದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡಿದರು. ದುರ್ಗಾದಾಸ್ ಶೆಟ್ಟಿ ಮಾವಂತೂರು ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಕಟೀಲು ಶ್ರೀದುರ್ಗಾ ಪರಮೇಶ್ವರಿ ದೇಗುಲದ ಆರ್ಚಕರಾದ ಕಮಲಾ ದೇವಿ ಅಸ್ತ್ರಣ್ಣ ,ಅನಂತ ಪದ್ಮನಾಭ ಕ್ಷೇತ್ರದ ಕೃಷ್ಣರಾಜ್ ತಂತ್ರಿ, ಸಂಸದ ನಳಿನ್ ಕುಮಾರ್ ಕಟೀಲು,…
ಉಳ್ಳಾಲ, ಜ. 24 : ಡಿವೈಡರ್ ಗೆ ಬೈಕ್ ಢಿಕ್ಕಿ ಹೊಡೆದು ಸವಾರ ಮೃತಪಟ್ಟ ಘಟನೆ ರಾ.ಹೆ. 66 ರ ನೇತ್ರಾವತಿ ಸೇತುವೆಯಲ್ಲಿ ಮಂಗಳಾವಾರ ತಡರಾತ್ರಿ ಸಂಭವಿಸಿದೆ. ಮೃತರನ್ನು ಬಾಗಲಕೋಟೆ ನಿವಾಸಿ ಸುರೇಶ್ (30) ಗುರುತಿಸಲಾಗಿದೆ. ಮಂಗಳೂರಿನ ಪಂಪ್ವೆಲ್ ಸಮೀಪ ಗ್ಯಾರೇಜ್ ನಡೆಸುತ್ತಿದ್ದ ಸುರೇಶ್ ಅವರು ನಿನ್ನೆ ರಾತ್ರಿ ಗ್ಯಾರೇಜ್ ಕೆಲಸ ಮುಗಿಸಿ ಮನೆಯತ್ತ ವಾಪಸ್ಸಾಗುತ್ತಿದ್ದ ಸಂದರ್ಭ ತಡರಾತ್ರಿ ಬೈಕ್ ಡಿವೈಡರ್ ಗೆ ಬಡಿದು ತಲೆಗೆ ಗಂಭೀರ ಗಾಯವಾಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.












