Subscribe to Updates
Get the latest creative news from FooBar about art, design and business.
Author: admin
ಬೆಂಗಳೂರು, ಫೆ. 21 : ರಾಜ್ಯದ ಹಿರಿಯ ಐಪಿಎಸ್ ಅಧಿಕಾರಿ ಸಿಎಚ್ ಪ್ರತಾಪ್ ರೆಡ್ಡಿ ಫೆ. 09 ರಂದು ರಾಜೀನಾಮೆ ಸಲ್ಲಿಕೆ ಮಾಡಿದ್ದು, ಇದೀಗ ಅವರ ರಾಜೀನಾಮೆಯನ್ನು ರಾಜ್ಯ ಸರ್ಕಾರ ಅಂಗೀಕರಿಸಿದೆ. ಕರ್ನಾಟಕದ ಆಂತರಿಕ ಭದ್ರತೆ ವಿಭಾಗದ ಡಿಜಿಪಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಪ್ರತಾಪ್ ರೆಡ್ಡಿ ವೈಯುಕ್ತಿಕ ಕಾರಣ ನೀಡಿ ರಾಜೀನಾಮೆ ನೀಡಿದ್ದು, ಇದೀಗ ಅವರ ರಾಜೀನಾಮೆಯನ್ನು ರಾಜ್ಯ ಸರ್ಕಾರ ಅಂಗೀಕರಿಸಿದೆ. 1991ರ ಬ್ಯಾಚ್ ನ ಐಪಿಎಸ್ ಅಧಿಕಾರಿ ಪ್ರತಾಪ್ ರೆಡ್ಡಿ ಅವರು ಈ ವರ್ಷದ ಜೂನ್ ಕೊನೆಯ ವಾರದಲ್ಲಿ ನಿವೃತ್ತರಾಗಲಿದ್ದರು. ಹೀಗಿರುವಾಗಲೇ ಸ್ವಯಂ ನಿವೃತ್ತಿ ಕೋರಿ ಸರ್ಕಾರಕ್ಕೆ ಪತ್ರ ಬರೆದಿದ್ದರು.
ನೆಲ್ಯಾಡಿ, ಫೆ 21 : ಮರದಿಂದ ಬಿದ್ದು ವ್ಯಕ್ತಿಯೋರ್ವರು ಸಾವನ್ನಪ್ಪಿರುವ ಘಟನೆ ಉಪ್ಪಿನಂಗಡಿ ನೆಲ್ಯಾಡಿ ಹೊಸಮಜಲು ಎಂಬಲ್ಲಿ ನಡೆದಿದೆ. ಮೃತರು ಬಲ್ಯ ಗ್ರಾಮದ ಹೊಸಮನೆ ನಿವಾಸಿ ರಮೇಶ (48ವ) ಎಂದು ಗುರುತಿಸಲಾಗಿದೆ. ರಮೇಶ್ ಅವರು ಫೆ.18ರಂದು ಸಂಜೆ ಹೊಸಮಜಲುನಲ್ಲಿ ಮನೆ ಸಮೀಪದ ಮಾವಿನ ಮರಕ್ಕೆ ಮಾವಿನ ಮಿಡಿ ಕೊಯ್ಯಲೆಂದು ಹತ್ತಿದ್ದವರು ಆಕಸ್ಮಿಕವಾಗಿ ಕೆಳಕ್ಕೆ ಬಿದ್ದಿದ್ದು. ತಕ್ಷಣ ಅವರನ್ನು ಪುತ್ತೂರಿನ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಸರಗೋಡು, ಫೆ. 18 : ಕಾರು ನಿಯಂತ್ರಣ ತಪ್ಪಿ ಮಗುಚಿ ಬಿದ್ದುಇಬ್ಬರು ಸಾವನ್ನಪ್ಪಿದಘಟನೆ ರಾಷ್ಟ್ರೀಯ ಹೆದ್ದಾರಿಯ ಪೆರಿಯದಲ್ಲಿ ನಡೆದಿದೆ. ಇಂದು ಮುಂಜಾನೆ ಈ ಅಪಘಾತ ನಡೆದಿದೆ. ಅಪಘಾತದಲ್ಲಿ ತಾಯನ್ನೂರಿನ ರಾಜೇಶ್ (35) ಮತ್ತು ರಘುನಾಥ್ (52) ಮೃತಪಟ್ಟಿದ್ದಾರೆ. ರಾಹುಲ್ ಮತ್ತು ರಾಜೇಶ್ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಬೇಕಲ ಠಾಣಾ ಪೊಲೀಸರು ಪ್ರಕರಣ ದಾಖಲಾಗಿದೆ.
ಕಜ್ಕೆಫೆ.,17 : ಶ್ರೀ ವಿಶ್ವಕರ್ಮ ಜಗದ್ಗುರು ಪೀಠ ಅರೇಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನ ಕಜ್ಕೆ ಶಾಖಾ ಮಠದ ಶ್ರೀ ಶ್ರೀ ಅನ್ನಪೂರ್ಣೇಶ್ವರಿ, ಶ್ರೀ ಗಣಪತಿ ಮತ್ತು ಶ್ರೀಆದಿ ಶಂಕರಾಚಾರ್ಯರ ಶಿಲಾಮಯ ದೇವಸ್ಥಾನದಲ್ಲಿ ಶ್ರೀ ನಾಗದೇವರ ಪ್ರತಿಷ್ಠೆ ಗುರುವಾರ ನೆರವೇರಿತು. ಪರಮಪೂಜ್ಯ ಶ್ರೀಶ್ರೀ ಶಿವಸುಜ್ಞಾನತೀರ್ಥ ಮಹಾ ಸ್ವಾಮೀಜಿ ಮಾರ್ಗದರ್ಶನ ನೀಡಿದರು. ಕಜ್ಕೆ ಶ್ರೀ ಅನ್ನಪೂರ್ಣೇಶ್ವರಿಯ ಶಿಲಾಮಯ ದೇವಸ್ಥಾನದ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ಹೆಬ್ರಿ ಮಠದಬೆಟ್ಟು ರಾಜೇಶ ಆಚಾರ್ಯ ಲೀಲಾವತಿ ಆಚಾರ್ಯ ದಂಪತಿಗಳು ಪೂಜೆ ನೇರವೇರಿಸಿದರು. ತಂತ್ರತಿಗಳಾದ ವೇದಮೂರ್ತಿ ಉದ್ಯಾವರ ವಿಶ್ವನಾಥ ಪುರೋಹಿತ್, ವೇದಮೂರ್ತಿ ಕೇಶವ ಪುರೋಹಿತ್ ಮೂಡಬಿದರೆ ನೇತ್ರತ್ವದಲ್ಲಿ ನಾರಾಯಣ ಆಚಾರ್ಯ ಪೂರೋಹಿತ್, ವಿದ್ವಾನ್ ಚಂದ್ರಕಾಂತ್ ಶರ್ಮಾ ಹೆಬ್ರಿ, ರವೀಂದ್ರ ಪುರೋಹಿತ್ ಹೆಬ್ರಿ, ಸೀತಾರಾಮ ಪುರೋಹಿತ್ ಮಿಯ್ಯಾರು ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿದರು. ಕಜ್ಕೆ ಶ್ರೀ ಅನ್ನಪೂರ್ಣೇಶ್ವರಿಯ ಶಿಲಾಮಯ ದೇವಸ್ಥಾನ ಸಮಿತಿಯ ಗೌರವ ಪ್ರಧಾನ ಮಾರ್ಗದರ್ಶಕ ಕರುಣಾಕರ ಶೆಟ್ಟಿ ಕಜ್ಕೆ, ಸ್ವಾಗತ ಸಮಿತಿಯ ಅಧ್ಯಕ್ಷ ಕಜ್ಕೆ ಕಾಶಿನಾಥ ಶೆಣೈ, ಕಜ್ಕೆ ಶ್ರೀ ಅನ್ನಪೂರ್ಣೇಶ್ವರಿಯ ಶಿಲಾಮಯ ದೇವಸ್ಥಾನ…
ಕಜ್ಕೆ, ಫೆ.17 : ಶ್ರೀ ವಿಶ್ವಕರ್ಮ ಜಗದ್ಗುರು ಪೀಠ ಅರೇಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನ ಕಜ್ಕೆ ಶಾಖಾ ಮಠದ ಶ್ರೀ ಶ್ರೀ ಅನ್ನಪೂರ್ಣೇಶ್ವರಿ, ಶ್ರೀ ಗಣಪತಿ ಮತ್ತು ಶ್ರೀಆದಿ ಶಂಕರಾಚಾರ್ಯರ ಶಿಲಾಮಯ ದೇವಸ್ಥಾನದ ಲೋಕಾರ್ಪಣೆ, ಶಿಲಾ ಬಿಂಬ ಪ್ರತಿಷ್ಠೆ ಮತ್ತು ಮಹಾ ಕುಂಭಾಭಿಷೇಕವು ಇದೇ 21ರಂದು ನಡೆಯಲಿದ್ದು ಮಹಾಕಾರ್ಯದ ವಿವಿಧ ಧಾರ್ಮಿಕ ವಿಧಿವಿಧಾನಗಳು ಮಂಗಳವಾರ ಆರಂಭಗೊಂಡಿತು. ಪರಮಪೂಜ್ಯ ಶ್ರೀಶ್ರೀ ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿ, ತಂತ್ರಿಯವರು, ವೈಧಿಕರ ವಿದ್ಯುಕ್ತ ಸ್ವಾಗತ, ಶಿಲ್ಪ ಪೂಜೆ, ಶಿಲ್ಪ ಗೌರವ, ಆಲಯ ಪರಿಗ್ರಹ, ಸಾಮೂಹಿಕ ದೇವತಾ ಪ್ರಾರ್ಥನೆ, ತೋರಣ ಪ್ರತಿಷ್ಠೆ, ಧ್ವಜಾರೋಹಣ ಸಹಿತ ಧಾರ್ಮಿಕ ಕಾರ್ಯಗಳು ನಡೆಯಿತು. ಕಜ್ಕೆ ಶ್ರೀ ಅನ್ನಪೂರ್ಣೇಶ್ವರಿಯ ಶಿಲಾಮಯ ದೇವಸ್ಥಾನದ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ಹೆಬ್ರಿ ಮಠದಬೆಟ್ಟು ರಾಜೇಶ ಆಚಾರ್ಯ ಲೀಲಾವತಿ ಆಚಾರ್ಯ ದಂಪತಿಗಳು ಪೂಜೆ ನೇರವೇರಿಸಿದರು. ತಂತ್ರತಿಗಳಾದ ವೇದಮೂರ್ತಿ ಉದ್ಯಾವರ ವಿಶ್ವನಾಥ ಪುರೋಹಿತ್, ವೇದಮೂರ್ತಿ ಕೇಶವ ಪುರೋಹಿತ್ ಮೂಡಬಿದರೆ ನೇತ್ರತ್ವದಲ್ಲಿ ನಾರಾಯಣ ಆಚಾರ್ಯ ಪೂರೋಹಿತ್, ವಿದ್ವಾನ್ ಚಂದ್ರಕಾಂತ್ ಶರ್ಮಾ ಹೆಬ್ರಿ, ರವೀಂದ್ರ ಪುರೋಹಿತ್ ಹೆಬ್ರಿ…
ಮಂಗಳೂರು, ಫೆ. 17: ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದದಲ್ಲಿ ಮಂಗಳೂರು ರಥೋತ್ಸವವು ಶುಕ್ರವಾರ ವಿಜೃಂಭಣೆಯಿಂದ ಜರಗಿತು. ಬ್ರಹ್ಮರಥೋತ್ಸವ ಪ್ರಯುಕ್ತ ಬೆಳಗ್ಗೆ ಮಹಾಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡು ಶ್ರೀ ದೇವರಿಗೆ ಶತಕಲಶಾಭಿಷೇಕ, ಗಂಗಾಭಿಷೇಕ, ಪುಳಕಾಭಿಷೇಕವು ಕಾಶಿ ಮಠ ಸಂಸ್ಥಾನದ ಮಠಾಧೀಶರಾದ ಶ್ರೀಮತ್ ಸಂಯಮೀಂದ್ರತೀರ್ಥ ಸ್ವಾಮೀಜಿ ಯವರ ದಿವ್ಯ ಹಸ್ತಗಳಿಂದ ನೆರವೇರಿತು. ಯಜ್ಞಮಂಟಪದಲ್ಲಿ ಮಹಾಯಜ್ಞ, ಮಹಾ ಪೂರ್ಣಾಹುತಿ ಬಳಿಕ ಶ್ರೀ ದೇವರು ಸ್ವರ್ಣ ಪಲ್ಲಕಿಯಲ್ಲಿ ವಿರಾಜಮಾನರಾಗಿ ಭವ್ಯ ಬ್ರಹ್ಮರಥದಲ್ಲಿ ರಥಾರೂಢರಾಗಿ ಮಂಗಳೂರು ರಥೋತ್ಸವವು ವಿಜೃಂಭಣೆಯಿಂದ ನೆರವೇರಿತು. ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು.
ಉರ್ವಸ್ಟೋರ್, ಫೆ 16: ಉರ್ವ ಸ್ಟೋರ್ ಮಹಾಗಣಪತಿ ದೇವಸ್ಥಾನಲ್ಲಿ ಗುರುವಾರ ಅಷ್ಟಬಂಧ ಬ್ರಹ್ಮಕಲಶೋತ್ಸವ ಜರಗಿತು. ಬ್ರಹ್ಮಶ್ರೀ ದೇರೆಬೈಲ್ ಡಾ| ಶಿವಪ್ರಸಾದ್ ತಂತ್ರಿಗಳ ನೇತೃತ್ವದಲ್ಲಿ ದೇಗುಲದ ಪ್ರಧಾನ ಅರ್ಚಕ ವೇ। ಮೂ। ರತ್ನಾಕರ ಭಟ್ ಅವರ ಸಹಯೋಗದಲ್ಲಿ ಬೆಳಗ್ಗೆಯಿಂದಲೇ ವಿವಿಧ ವೈದಿಕ ವಿಧಿ-ವಿಧಾನಗಳು ನಡೆದವು. ದಿನವಿಡೀ ನಡೆದ ಕಾರ್ಯಕ್ರಮದಲ್ಲಿಊರ ಪರವೂರ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಬೆಳಗ್ಗೆ 9.05ಕ್ಕೆ ಶ್ರೀ ದುರ್ಗಾದೇವಿಗೆ ಬ್ರಹ್ಮಕಲಶಾಭಿಷೇಕ, ನ್ಯಾಸ ಪೂಜೆ, ಮಹಾಪೂಜೆ, ಅವಸ್ರುತ ಬಲಿ, ಪಲ್ಲಪೂಜೆ, ಮಹಾ ಅನ್ನಸಂತರ್ಪಣೆ ನಡೆಯಿತು. ಸಂಜೆ 4ರಿಂದ ದಿಕ್ಷಾಲ ಹೋಮಗಳು , ನೂತನ ಬಲಿಪೀಠಗಳ ಪ್ರತಿಷ್ಠೆ ಬ್ರಹ್ಮರಥಕ್ಕೆ ದಿಕ್ಷಾಲ ಹೋಮಗಳು, 101 ಕಲಶಾಭಿಷೇಕ, ಅಧಿವಾಸ ಹೋಮ, ಬ್ರಹ್ಮರಥಾಧಿವಾಸ, ಬಯನ ಬಲಿ ಹೊರಟು ಉತ್ಸವ, ಉರಗ ಬಂಧದ ಅಶ್ವತ್ಥಕಟ್ಟೆಯಲ್ಲಿ ನಾಗ ಸನ್ನಿಧಾನದಲ್ಲಿ ಕಟ್ಟೆ ಪೂಜೆ, ವಸಂತಕಟ್ಟೆ ಪೂಜೆ, ರಾತ್ರಿ ಪೂಜೆ, ಶ್ರೀ ಭೂತಬಲಿ ಜರಗಿತು.
ಮಂಗಳೂರು, ಫೆ. 16 : ಉರ್ವ ಬೋಳೂರುನಲ್ಲಿರುವ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಶ್ರೀ ಮಾರಿಯಮ್ಮದೇವಿಗೆ ಬ್ರಹ್ಮಕಲಶೋತ್ಸವ ಬ್ರಹ್ಮಶ್ರೀ ಕೋಡಿಕಲ್ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ಗುರುವಾರ ನೆರವೇರಿತು. ಪ್ರಾತಃಕಾಲ 2ರಿಂದಲೇ ಸಹಸ್ರಕಲಶ ಸಹಿತ ಬ್ರಹ್ಮಕಲಶ ಪೂರಣ, ಗೋಪೂಜೆ, 5.15ರಿಂದ ಪಂಚಗವ್ಯ, ಪಂಚಾಮೃತ ಸಹಿತ ಬ್ರಹ್ಮಕಲಶಾಭಿಷೇಕ ಜರಗಿತು. ಬೆಳಗ್ಗೆ 8.12ಕ್ಕೆ ಶ್ರೀ ಮಾರಿಯಮ್ಮ ದೇವಿಗೆ ಬ್ರಹ್ಮಕುಂಭಾಭಿಷೇಕ, ವಿಶೇಷ ಮಂತ್ರನ್ಯಾಸ, ಪರಿವಾರ ದೇವರುಗಳಿಗೆ ಕಲಶಾ ಭಿಷೇಕ, ವಿಶೇಷ ಸಾನ್ನಿಧ್ಯ ಪ್ರಾರ್ಥನೆ, ಮಧ್ಯಾಹ್ನ ಮಹಾಪೂಜೆ ನೆರವೇರಿತು. ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಡಾ| ಜಿ. ಶಂಕರ್, ಗೌರವ ಸಲಹೆಗಾರ ಜಯ ಸಿ. ಕೋಟ್ಯಾನ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್ ಕರ್ಕೇರ ಬೊಕ್ಕಪಟ್ಟ, ಪ್ರಧಾನ ಸಂಚಾಲಕ ಗೌತಮ್ ಸಾಲ್ಯಾನ್ ಕೋಡಿಕಲ್, ಪ್ರ.ಕಾರ್ಯದರ್ಶಿ ಜಗದೀಶ್ ಬಂಗೇರ ಬೋಳೂರು, ಉಪಾಧ್ಯಕ್ಷ ಕುಮಾರ್ ಮೆಂಡನ್ ಬೈಕಂಪಾಡಿ, ಕೋಶಾಧಿಕಾರಿ ವಸಂತ್ ಅಮೀನ್ ಬೈಕಂಪಾಡಿ, ಜತೆ ಕೋಶಾಧಿಕಾರಿ ಶಶಿಧರ್ ಕೋಡಿಕಲ್, ಜತೆ ಕಾರ್ಯದರ್ಶಿ ಮೋಹನ್ ದಲಾಲ್, ವಾಸುದೇವ ಸಾಲ್ಯಾನ್ ಕೂಳೂರು, ಆಡಳಿತ ಮೊಕ್ತಸರ ಲಕ್ಷ್ಮಣ್ ಅಮೀನ್…
ಬೆಂಗಳೂರು, ಫೆ. 15 : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ ಫೆ 27ರಂದು ನಡೆಯಲಿದ್ದು ಈ ಸಮ್ಮೇಳದಲ್ಲಿ ಭಾಗವಹಿಸಲಿರುವ ನೌಕರರಿಗೆ 2 ದಿನ ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮತ್ತು ರಾಜ್ಯದ ಎಲ್ಲಾ ಇಲಾಖೆಗಳ ವೃಂದ ಸಂಘಗಳ ವತಿಯಿಂದ ಫೆ 27ರಂದು ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ ಹಾಗೂ ಪ್ರಜಾಸ್ನೇಹಿ ಕಾರ್ಯಾಗಾರ ನಡೆಯಲಿದ್ದು ಈ ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ. ಬೆಂಗಳೂರು ನೌಕರರಿಗೆ ಫೆ.27ರಂದು ಒಂದು ದಿನ ರಜೆ ನೀಡಿದರೆ, ಇತರೆ ಬೇರೆ-ಬೇರೆ ಜಿಲ್ಲೆಗಳಿಂದ ಬರುವ ನೌಕರರಿಗೆ 2 ದಿನ ರಜೆ ನೀಡಲಾಗಿದೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಈ ಸಮ್ಮೇಳನದಲ್ಲಿ ಭಾಗವಹಿಸಲು ಇಚ್ಛಿಸುವ ಸರ್ಕಾರಿ ನೌಕರರು ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕು. ನಂತರ ಸಮ್ಮೇಳನದಲ್ಲಿ ಭಾಗವಹಿಸಿದ ಬಗ್ಗೆ ಅಧಿಕೃತ ಹಾಜರಾತಿ ಪತ್ರವನ್ನು ಸಂಘದ…
ಬೋಳೂರು, ಫೆ. 14: ಉರ್ವ ಬೋಳೂರು ಶ್ರೀ ಮಾರಿಯಮ್ಮದೇವಸ್ಥಾನ ದಲ್ಲಿ ಫೆ. 11ರಿಂದ ಆರಂಭಗೊಂಡ ಬ್ರಹ್ಮಕಲಶೋತ್ಸವವು ಫೆ. 15ರ ವರೆಗೆ ಜರಗಲಿದೆ. ಫೆ. 11ರಂದು ಬ್ರಹ್ಮಕಲಶೋತ್ಸವ ವಿಧಿ ಪ್ರಾರಂಭಗೊಂಡಿದ್ದು,13ರಂದು ಪುನಃ ಪ್ರತಿಷ್ಠೆ, 15ರಂದು ಬ್ರಹ್ಮಕಲಶೋತ್ಸವ, 16ರಂದು ವರ್ಷಾವಧಿ ಮಹಾಪೂಜೆ ಪ್ರಸಾದ ಹಾರಿಸುವಿಕೆ, 23ರಂದು ಚಂಡಿಕಾಯಾಗ, 26, 27ರಂದು ವರ್ಷಾವಧಿ ಪೂಜೆ ಮತ್ತು ಮಾ. 2ರಂದು ಮಲರಾಯ ನೇಮ ಜರಗಲಿದೆ.












