Subscribe to Updates
Get the latest creative news from FooBar about art, design and business.
Author: admin
ವಿಟ್ಲ, ಜ 19 : ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಮನೆ ಸಂಪೂರ್ಣವಾಗಿ ಸುಟ್ಟು ಹೋದ ಘಟನೆ ಮಾಣಿ ಸಮೀಪ ನಡೆದಿದೆ. ಈ ಘಟನೆಯಿಂದ ಮನೆಯಲ್ಲಿದ್ದ ಮಹಿಳೆ ಅಪಾಯದಿಂದ ಪಾರಾಗಿದ್ದಾರೆ. ಮಾಣಿ ಗ್ರಾಮದ ಕಾಪಿಕಾಡು ದೀಪಾ ಎಂಬವರು ಮನೆಯಲ್ಲಿ ಒಬ್ಬರೆ ಇದ್ದಾಗ ಈ ಘಟನೆ ಸಂಭವಿಸಿದ್ದು, ಬೆಂಕಿ ಕಾಣಿಸುತ್ತಿದ್ದಂತೆ ಅವರು ಹೊರಗಡೆ ಓಡಿ ಹೋಗಿದ್ದಾರೆ. ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ್ಡ ಕಾರಣ ಮನೆ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಪುತ್ತೂರು ಅಗ್ಮಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಕಾಸರಗೋಡು : ಪುಲ್ಲೂರು ಎಂಬಲ್ಲಿ ಅತೀ ವೇಗದಿಂದ ಬಂದ ಕಾರೊಂದು ಬಸ್ಸು ತಂಗುದಾಣದೊಳಗೆ ನುಗ್ಗಿದ ಪರಿಣಾಮ ವ್ಯಕ್ತಿಯೋರ್ವ ರು ಮೃತಪಟ್ಟ ಘಟನೆ ಜ. 18 ಬುಧವಾರ ಸಂಜೆ ನಡೆದಿದೆ. ಮೃತ ವ್ಯಕ್ತಿಯನ್ನು ಪುಲ್ಲೂರು ಮಕ್ಕರಕೋಡ್ ನ ಗಂಗಾಧರ(65) ಎಂದು ಗುರುತಿಸಲಾಗಿದೆ. ಈ ಬಗ್ಗೆ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಧ್ಯಪ್ರದೇಶ, ಜ. 06 :ಮಧ್ಯಪ್ರದೇಶದ ರೇವಾ ಎಂಬಲ್ಲಿ ತರಬೇತಿ ನಿರತ ವಿಮಾನವು ದೇವಸ್ಥಾನದ ಮೇಲಿನ ಗರ್ಭಗುಡಿಗೆ ಡಿಕ್ಕಿ ಹೊಡೆದು ನೆಲಕ್ಕಪ್ಪಳಿಸಿದೆ. ಈ ಘಟನೆ ಚೌರ್ಹತಾ ಪೊಲೀಸ್ ಠಾಣೆ ವ್ಯಾಪ್ತಿಯ ಉಮ್ರಿ ಗ್ರಾಮದಲ್ಲಿ ಶುಕ್ರವಾರ,ಜ.6 ರಂದು ನಡೆದಿದೆ. ಈ ವೇಳೆ ಹಿರಿಯ ಪೈಲಟ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ತರಬೇತು ಪೈಲಟ್ ಸ್ಥಿತಿ ಕೂಡ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.
ಕುಂದಾಪುರ, ಡಿ. 31: ಆನೆಗುಡ್ಡೆ ದೇವಸ್ಥಾನದ ಬಳಿ ನಿಲ್ಲಿಸಿದ ಬಸ್ಸಿನ ಟಾಪ್ ನಲ್ಲಿ ಮಲಗಿದ್ದ ವ್ಯಕ್ತಿಯೊಬ್ಬ ಆಕಸ್ಮಿಕವಾಗಿ ಕೆಳಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಬೆಂಗಳೂರು ಕುಂಬಾರಪೇಟೆ ಬಾಪೂಜಿ ನಗರದ ನಿವಾಸಿ ಶ್ರೀನಾಥ್ (25) ಮೃತಪಟ್ಟ ವ್ಯಕ್ತಿ . ಡಿಸೆಂಬರ್ 28 ರಂದು ಶಬರಿಮಲೆ ಯಾತ್ರೆ ಮುಗಿಸಿ ಬಂದು ಕುಂದಾಪುರದ ಆನೆಗುಡ್ಡೆ ದೇವಸ್ಥಾನದ ಬಳಿ ನಿಲ್ಲಿಸಿದ ಬಸ್ಸಿನ ಟಾಪ್ ನಲ್ಲಿ ಮಲಗಿದ್ದರು. ಆಕಸ್ಮಿಕವಾಗಿ ಬಸ್ಸಿನ ಮೇಲಿಂದ ಕೆಳಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿ ದ್ದು, ಆಸ್ಪತ್ರೆಗೆ ದಾಖ ಲಿಸ ಲಾಗಿತ್ತು. ಆದರೆ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ
ಕೋಟ, ಡಿ. 31: ಕತಾರ್ ನಲ್ಲಿ ಕೆಲಸ ಮಾಡುತ್ತಿದ್ದ ಕೋಟ ತಟ್ಟು ಪಡುಕರೆ ನಿವಾಸಿ ಮುಹಮ್ಮದ್ (45) ಅವರು 29, ಗುರುವಾರ ಮಿದುಳು ನಿಷ್ಕ್ರಿಯಗೊಂಡು ಸಾವನಪ್ಪಿದ್ದಾರೆ. ಮೃತರು 4 ದಿನಗಳ ಹಿಂದೆ ಕತಾರ್ ನಲ್ಲಿ ಕೆಲಸ ಮಾಡುತ್ತಿದ್ದಾಗ ಕುಸಿದು ಬಿದ್ದು, ಮಿದುಳು ನಿಷ್ಕ್ರಿಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾರೆ. ಮೃತರು ತಾಯಿ, ಪತ್ನಿಯನ್ನು ಅಗಲಿದ್ದಾರೆ.
ಕಾರ್ಕಳ :ಕಾರ್ಕಳ ತಾಲೂಕಿನ ತೆಳ್ಳಾರಿನ ದೇಲೊಟ್ಟು ಎಂಬಲ್ಲಿ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಗೆ ಶರಣಾದ ಘಟನೆ ಡಿ. 14, ಬುಧವಾರ ನಡೆದಿದೆ. ಆತ್ಮಹತ್ಯೆ ಗೆ ಶರಣಾದ ಯುವಕನನ್ನು ದಯಾನಂದ ಕುಲಾಲ್ (34) ಎಂದು ಗುರುತಿಸಲಾಗಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕಾರ್ಕಳ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತಿದ್ದಾರೆ.
ಮಂಗಳೂರು : ಕಾವೂರು ಪೊಲೀಸ್ ಠಾಣೆಯಲ್ಲಿ ಕಳೆದ 2 ವರ್ಷಗಳಿಂದ ಹೆಡ್ ಕಾನ್ ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹನುಮಂತ ಲಮಾಣಿ (38) ಅವರು ಡಿ. 15, ಗುರುವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರು ಮೂಲತಃ ಬಾಗಲಕೋಟೆಯ ನಿವಾಸಿಯಗಿದ್ದು, ಊರಿಗೆ ಹೋಗಿದ್ದ ವೇಳೆ ಗುರುವಾರ ಮುಂಜಾನೆ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ. ಮೃತರು ಪತ್ನಿ ಮತ್ತು ನಾಲ್ವರು ಮಕ್ಕಳನ್ನು ಅಗಲಿದ್ದಾರೆ.
ಮುಂಬೈ : ಚಿರತೆ ದಾಳಿಗೆ ಒಂದೂವರೆ ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ಅ. 24, ಸೋಮವಾರ ಮುಂಬೈನ ಪಶ್ಚಿಮ ಉಪನಗರವಾದ ಗೋರೆಗಾಂವ್ನ ಆರೆ ಕಾಲೋನಿಯ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಬಾಲಕಿಯು ತನ್ನ ತಾಯಿಯೊಂದಿಗೆ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಚಿರತೆಯೊಂದು ಏಕಾಏಕಿ ಬಾಲಕಿಯ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದು, ಗಾಯಗೊಂಡ ಬಾಲಕಿಯನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆಕೆ ಮೃತಪಟ್ಟಿದ್ದಾಳೆ. ಪ್ರಾಥಮಿಕ ಮಾಹಿತಿ ಆಧಾರಿಸಿ ಪ್ರಕರಣದಲ್ಲಿ ಆಕಸ್ಮಿಕ ಸಾವು ವರದಿ ದಾಖಲಿಸಿದ್ದೇವೆ, ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಕೊಯಮತ್ತೂರು : ಕಾರು ಚಲಿಸುತ್ತಿದ್ದ ವೇಳೆ ಕಾರಿಗೆ ಅಳವಡಿಸಲಾಗಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ವ್ಯಕ್ತಿಯೊಬ್ಬರು ಸಜೀವ ದಹನವಾದ ಘಟನೆ ಕೊಯಮತ್ತೂರಿನ ಉಕ್ಕಡಂ ಬಳಿಯ ಕೊಟ್ಟೈಮೇಡುವಿನ ಈಶ್ವರನ್ ದೇವಸ್ಥಾನದ ಮುಂಭಾಗದಲ್ಲಿ ಅ. 23, ಭಾನುವಾರ ಬೆಳಿಗ್ಗೆನಡೆದಿದೆ. ಸ್ಫೋಟದ ಶಬ್ದ ಕೇಳಿದ ಸಾರ್ವಜನಿಕರು ಕೂಡಲೇ ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತಪಟ್ಟ ವ್ಯಕ್ತಿಯ ಗುರುತು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ
ನವದೆಹಲಿ : ನವೆಂಬರ್ ನಿಂದ ಪ್ರಯಾಣಿಕ ವಿಮಾನ ಮತ್ತು ಕಾರ್ಗೊ ವಿಮಾನದಲ್ಲಿ ಸಾಕು ಪ್ರಾಣಿಗಳ ಸಂಚಾರಕ್ಕೆ ಆಕಾಸ ಏರ್‌ಲೈನ್ಸ್ ಅವಕಾಶ ಕಲ್ಪಿಸಲಿದೆ ಎಂದು ಸಂಸ್ಥೆತಿಳಿಸಿದೆ. ಅ.15ರಿಂದ ಬುಕ್ಕಿಂಗ್ ಆರಂಭವಾಗಲಿದೆ. ಪ್ರತಿ ಸಾಕುಪ್ರಾಣಿಯನ್ನು ಬೋನಿನಲ್ಲಿ ಇರಿಸಬೇಕಾಗುತ್ತದೆ. ಈ ಬಗ್ಗೆ ಮಾಹಿತಿ ನೀಡಿರುವ ಆಕಾಶ್ ಏರ್ಲೈನ್ಸ್ನ ಸಹ ಸಂಸ್ಥಾಪಕ ಪ್ರವೀಣ್ ಐಯ್ಯರ್, ಪ್ರಯಾಣಿಕ ವಿಮಾನದಲ್ಲಿ ಬೋನ್ ಸೇರಿ ತೂಕ 7 ಕೆಜಿ ಮೀರಬಾರದು. ಚೆಕ್-ಇನ್ನಲ್ಲಿ 32 ಕೆ.ಜಿ. ಮೀರಬಾರದು. ಹೆಚ್ಚಿನ ತೂಕವಿರುವ ಸಾಕು ಪ್ರಾಣಿಗಳಿಗೆ ಬೇರೆ ವ್ಯವಸ್ಥೆ ಇದೆ ಎಂದು ತಿಳಿಸಿದ್ದಾರೆ.