Author: admin

ಉಡುಪಿ, ಜು 06 : ಭಾರೀ ಮಳೆಗೆ  ಕಮಲಶಿಲೆ ದೇವಳದ ಪಕ್ಕದಲ್ಲಿ ಉಕ್ಕಿ ಹರಿಯುತ್ತಿರುವ ಕುಬ್ಜಾ ನದಿಯಲ್ಲಿ ಮುಳುಗಿ ದೇವಾಲಯದ ಅರ್ಚಕರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕುಂದಾಪುರ ತಾಲೂಕಿನ ಕಮಲಶಿಲೆಯಲ್ಲಿ ನಡೆದಿದೆ. ಮೃತರನ್ನು ಕಮಲಶಿಲೆ ಸಮೀಪದ ತಪ್ಪಲು ನಿವಾಸಿ ಶೇಷಾದ್ರಿ ಐತಾಳ್ (75) ಎಂದು ಗುರುತಿಸಲಾಗಿದೆ. ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ವರುಣನ ಅಬ್ಬರಕ್ಕೆ ಮೂರನೇ ಸಾವು ಸಂಭವಿಸಿದ್ದು, ಜನ ಆತಂಕಕ್ಕೊಳಗಾಗಿದ್ದಾರೆ.

Read More

ಸುರತ್ಕಲ್, ಜು. 5 : ವಿದ್ಯುತ್ ತಂತಿ ತುಳಿದು ಯುವಕನೋರ್ವ ಸಾವನ್ನಪ್ಪಿದ ಘಟನೆ ಸುರತ್ಕಲ್ ಸಮೀಪದ ಕುಳಾಯಿಯಲ್ಲಿ ನಡೆದಿದೆ. ಮೃತ ಪಟ್ಟ ಯುವಕನನ್ನು ಸ್ಥಳೀಯ ನಿವಾಸಿ ಸಂತೋಷ್ ಎಂದು ಗುರುತಿಸಲಾಗಿದೆ. ಮಂಗಳವಾರ ತಡರಾತ್ರಿ ಭಾರಿ  ಗಾಳಿ ಮಳೆಗೆ ವಿದ್ಯುತ್ ತಂತಿ ಕಡಿದು ಬಿದಿದ್ದು, ಈ ಬಗ್ಗೆ ಅರಿವಿಲ್ಲದೇ ಮುಂಜಾನೆ ಕೈಗಾರಿಕಾ ಪ್ರದೇಶದಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಸಂತೋಷ್ ತಂತಿ ತುಳಿದು  ಸ್ಥಳದಲ್ಲೇ  ಮೃತಪಟ್ಟಿದ್ದಾರೆ ಎನ್ನಲಾಗಿದೆ. ಭಾರಿ ಗಾಳಿ ಮಳೆಗೆ ವಿವಿಧೆಡೆ ಮನೆಯ ಛಾವಣಿ ಶೀಟುಗಳು ಹಾರಿ ಹೋಗಿ ಹಾನಿ ಉಂಟಾಗಿದೆ. ಮೆಸ್ಕಾಂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ವಿದ್ಯುತ್ ವ್ಯವಸ್ಥೆಯನ್ನು ಸರಿಪಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

Read More

ಕಾಸರಗೋಡು, ಜೂ. 04 : ಭಾರೀ ಗಾಳಿ ಮಳೆಗೆ ಮೈಮೇಲೆ ಮರ ಬಿದ್ದು ಸರಕಾರಿ ಹಯರ್ ಸೆಕೆಂಡರಿ ಶಾಲೆಯ ಆರನೇ ತರಗತಿ ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆ ಪುತ್ತಿಗೆ ಸಮೀಪದ ಅಂಗಡಿಮೊಗರು ಎಂಬಲ್ಲಿ ಸೋಮವಾರ ನಡೆದಿದೆ. ಮೃತಪಟ್ಟ ವಿದ್ಯಾರ್ಥಿನಿಯನ್ನು  ಬಿ. ಎಂ ಯೂಸಫ್- ಫಾತಿಮ್ಮತ್ ಸೈನಬಾ ದಂಪತಿಯ ಪುತ್ರಿ ಆಯಿಷತ್ ಮಿನ್ಹಾ (11) ಎಂದು ಗುರುತಿಸಲಾಗಿದೆ. ಸಂಜೆ ನಾಲ್ಕು ಗಂಟೆ ಸುಮಾರಿಗೆ ವಿದ್ಯಾರ್ಥಿನಿ ಆಯಿಷತ್ ಆಟವಾಡುತ್ತಿದ್ದಾಗ ಘಟನೆ ನಡೆದಿದ್ದು, ತಕ್ಷಣ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದರೂ ವೈದ್ಯರು ಆಗಲೇ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

Read More

ಉಳ್ಳಾಲ, ಜು. 03 : ಆಂಬ್ಯುಲೆನ್ಸ್ ವಾಹನ ಢಿಕ್ಕಿ ಹೊಡೆದು ಪಾದಚಾರಿ ಸಾವನ್ನಪ್ಪಿದ ಘಟನೆ ತಲಪಾಡಿ ಮರೋಳಿ ಬಾರ್ ಎದುರುಗಡೆ ಸಂಭವಿಸಿದೆ. ಮೃತರನ್ನು ಕಾಸರಗೋಡು ಮಂಗಲ್ಪಾಡಿ ಹೇರೂರು ನಿವಾಸಿ ಫ್ರಾನ್ಸಿಸ್ ಡಿಸೋಜ (62) ಎಂದು ಗುರುತಿಸಲಾಗಿದೆ. ಮನೆಯಿಂದ ತಲಪಾಡಿಗೆ ಬಂದಿದ್ದ ಫ್ರಾನ್ಸಿಸ್, ಮರೋಳಿ ಬಾರ್ ಎದುರುಗಡೆಯಿಂದ ವಾಪಸ್ಸು ಮನೆಗೆ ತೆರಳಲು ರಾಷ್ಟ್ರೀಯ ಹೆದ್ದಾರಿಯನ್ನು ದಾಟುವ ಸಂದರ್ಭ ಕೇರಳದಿಂದ ಮಂಗಳೂರು ಕಡೆಗೆ  ವೇಗದಲ್ಲಿ ಬರುತ್ತಿದ್ದ ಖಾಲಿ ಆಂಬ್ಯುಲೆನ್ಸ್ ಫ್ರಾನ್ಸಿಸ್ ಅವರಿಗೆ ಢಿಕ್ಕಿ ಹೊಡೆದ ದ ಪರಿಣಾಮ ಫ್ರಾನ್ಸಿಸ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬಂಟ್ವಾಳ, ಜು,01 : ವಸತಿ ಸಮುಚ್ಚಯವೊಂದರ ಮನೆಯಲ್ಲಿ ಡಿಶ್ ರಿಪೇರಿ ಮಾಡುತ್ತಿದ್ದ ಟೆಕ್ನಿಷಿಯನ್ ಮೂರನೇ  ಮಹಡಿಯಿಂದ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ಜೂ. 30, ಶುಕ್ರವಾರ  ನಡೆದಿದೆ. ಮೃತರನ್ನು ಆಚಾರಿಪಲ್ಕೆ ನಿವಾಸಿ ಯತೀಶ್ (32) ಎಂದು ಗುರುತಿಸಲಾಗಿದೆ. ಟೆಕ್ನಿಷಿಯನ್ ಮೂರನೇ ಮಹಡಿಯಲ್ಲಿ ಡಿಶ್ ರಿಪೇರಿ ಮಾಡುತ್ತಿದ್ದು, ಈ ವೇಳೆ  ಆಯತಪ್ಪಿ ಕೆಳಗೆ ಬಿದ್ದು  ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಅಂಬ್ಯುಲೆನ್ಸ್ ಮೂಲಕ ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯದರೂ ಯಾವುದೇ ಪ್ರಯೋಜನವಾಗಿಲ್ಲ. ತಲೆಗೆ ಗಂಭೀರವಾದ ಏಟು ಬಿದ್ದಿರುವುದರಿಂದ ಯತೀಶ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

Read More

ಪುತ್ತೂರು, ಜೂ. 20 : ಕಾರು ಹಾಗೂ ಸ್ಕೂಟರ್ ನಡುವೆ ಅಪಘಾತ ಸಂಭವಿಸಿ ಸ್ಕೂಟರ್ ಸವಾರ ಮೃತಪಟ್ಟಿರುವ ಘಟನೆ ಪುತ್ತೂರಿನ ಕಲ್ಲರ್ಪೆಯಲ್ಲಿ ನಡೆದಿದೆ. ಮೃತರನ್ನು ನೈತಾಡಿಯ ಇಸ್ಮಾಯಿಲ್ ಎಂದು ಗುರುತಿಸಲಾಗಿದೆ. ಇಸ್ಮಾಯಿಲ್ ಅವರು ಬೆಳಿಗ್ಗೆ ಕಲ್ಲರ್ಪೆಯಲ್ಲಿರುವ ತಮ್ಮ ಜಮೀನಿಗೆ ಹೋಗುವ ವೇಳೆ ಈ ಅಪಘಾತ ಸಂಭವಿಸಿದ್ದು, ಗಂಭೀರ ಗಾಯಗೊಂಡಿದ್ದ ಇಸ್ಮಾಯಿಲ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.

Read More

ವಿಟ್ಲ, ಜೂ. 19 : ಖಾಸಗಿ ಬಸ್ನಲ್ಲಿ ಡ್ರೈವರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯೋರ್ವರು ಹೃದಯಾಘಾತದಿಂದ ನಿಧನರಾದ ಘಟನೆ ಕನ್ಯಾನ ಬಂಡಿತ್ತಡ್ಕ ಸಮೀಪ ಜೂ. 17,ಶನಿವಾರ ನಡೆದಿದೆ. ಮೃತರನ್ನು ಖಾಸಗಿ ಬಸ್ ಚಾಲಕ ರಮೇಶ್ ಎಂದು ಗುರುತಿಸಲಾಗಿದೆ.ಮೃತರು ಪತ್ನಿ, ಇಬ್ಬರು ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

Read More

ನ್ಯೂಯಾರ್ಕ್, ಜೂ. 17: ಅಮೆರಿಕನ್ ನಟ ಅಲ್ ಪಸಿನೊ 83ನೇ ವಯಸ್ಸಿನಲ್ಲಿ ತಂದೆಯಾಗಿದ್ದಾರೆ. ಇದುವರೆಗೂ ಮದುವೆಯಾಗಿರದ ಪೆಸಿನೋ ಅವರು 29 ವರ್ಷದ ಪ್ರಿಯತಮೆಯಿಂದ ಮಗುವನ್ನು ಪಡೆದಿದ್ದಾರೆ. ಪೆಸಿನೋ ಅವರು 2022ರಲ್ಲಿ ಅಲ್ಫಲ್ಲಾಹ್ ಅವರನ್ನು ಭೇಟಿ ಮಾಡಿದ್ದು, ಆಗಿನಿಂದಲೇ ಇವರಿಬ್ಬರ ಮಧ್ಯೆ ಲವ್ ಶುರುವಾಗಿದೆ ಎನ್ನಲಾಗಿತ್ತು. ಅಲ್ಫಲ್ಲಾಹ್ ಅವರು ನಿರ್ಮಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಮಗುವಿಗೆ ರೋಮನ್ ಪೆಸಿನೋ ಎಂದು ನಾಮಕರಣ ಮಾಡಿದ್ದಾರೆ. ಪೆಸಿನೋ ಅವರಿಗೆ ಇದು ನಾಲ್ಕನೇ ಮಗುವಾಗಿದೆ. ಇತರ ಇಬ್ಬರು ಪ್ರಿಯತಮೆಯರಿಂದ ಆಂಟೊನ್, ಒಲಿವಿಯಾ ಹಾಗೂ ಜೂಲಿ ಮಾರಿ ಎನ್ನುವ ಮೂರು ಮಕ್ಕಳನ್ನು ಪಡೆದಿದ್ದಾರೆ.

Read More

ಮಂಗಳೂರು, ಜೂ. 17 : ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಮುಲೈ ಮುಹಿಲನ್ ಎಂ.ಪಿ. ಅವರು ಜೂ.17, ಶನಿವಾರ ಅಧಿಕಾರ ಸ್ವೀಕರಿಸಿದರು. ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದಎಂ.ಆರ್.ರವಿಕುಮಾರ್ ಅವರು ನೂತನ ಜಿಲ್ಲಾಧಿಕಾರಿಗೆ ಅಧಿಕಾರ ಹಸ್ತಾಂತರ ಮಾಡಿದರು. ಮುಲೈ ಮುಹಿಲನ್ ಅವರು ಇದಕ್ಕೂ ಮೊದಲು ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ ಬೆಂಗಳೂರು ಇದರ ಕಾರ್ಯಕಾರಿ ನಿರ್ದೇಶಕರಾಗಿದ್ದರು.

Read More

ಕೊಡಗು ಜೂ. 17 : ಬುಲೆಟ್ ಬೈಕ್ ಹಾಗೂ ಸ್ಕೂಟಿ ನಡುವೆ ಅಪಘಾತ ಸಂಭವಿಸಿ ಎಫ್ ಎಂಸಿ ಕಾಲೇಜು ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕುಶಾಲನಗರ ಪಟ್ಟಣದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ಮಡಿಕೇರಿಯ ಭಾವನಾ(21) ಎಂದು ಗುರುತಿಸಲಾಗಿದೆ. ಭಾವನಾ ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ಬುಲೆಟ್ ಬೈಕ್ ಸ್ಕೂಟಿಗೆ ಅಪ್ಪಳಿಸಿದೆ. ಈ ವೇಳೆ ಭಾವನಾ ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More